ಪ್ರವಾಹ: ಸಣ್ಣ-ಗುಡಿ ಕೈಗಾರಿಕೆಗಳಿಗೂ ಭಾರಿ ಹಾನಿ
Team Udayavani, Aug 17, 2019, 10:21 AM IST
ಬನಹಟ್ಟಿ: ರಬಕವಿಯ ಗುಡಿ ಕೈಗಾರಿಕೆ ಘಟಕಕ್ಕೆ ನೀರು ನುಗ್ಗಿ ಹಾನಿಯಾದ ಹಿನ್ನೆಲೆಯಲ್ಲಿ ಭೇಟಿ ನೀಡಿದ ಮಾಜಿ ಸಚಿವೆ ಉಮಾಶ್ರೀ.
ಬನಹಟ್ಟಿ: ಪ್ರವಾಹದಿಂದ ಎಲ್ಲ ರೀತಿಯ ಗುಡಿ ಕೈಗಾರಿಕೆಗಳಿಗೆ ದೊಡ್ಡ ಪೆಟ್ಟು ಬಿದ್ದಿದ್ದು, ಅವರಿಗೂ ಸಹ ಸರಕಾರ ಸಹಾಯ ಮಾಡಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತಹ ಎಲ್ಲ ಪ್ರಕಾರಗಳನ್ನು ಸರ್ವೇ ಮಾಡಿಸಿ ಅವರಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಅವರು ಶುಕ್ರವಾರ ರಬಕವಿ, ರಾಮಪುರದಲ್ಲಿನ ವಿವಿಧ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಘಟಕಗಳಿಗೆ ಭೆಟ್ಟಿ ನೀಡಿ ಅವರ ಕಷ್ಟ ಸುಖ ವಿಚಾರಿಸಿ ಮಾತನಾಡಿದರು. ಸಣ್ಣ ಮತ್ತು ಗುಡಿ ಕೈಗಾರಿಕೆಯಲ್ಲಿ ಸಾಲ ಪಡೆದು ಜೀವನ ನಡೆಸುತ್ತಿದ್ದ ಜನ ಕಂಗಾಲಾಗಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸಿ ಅವರ ಕಷ್ಟಗಳಿಗೆ ಸಹಾಯವಾಗಬೇಕು. ಆ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ನೀಡಲು ಜಿಲ್ಲಾ ಕೈಗಾರಿಕಾ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.
ರಬಕವಿ, ರಾಮಪುರದಲ್ಲಿ ನೇಕಾರರ ಮನೆಗಳು ಕೂಡಾ ಹಾಳಾಗಿದ್ದು, 2005, 2009 ಮತ್ತು ಈಗ ಮತ್ತೆ 2019ರಲ್ಲಿ ಪ್ರವಾಹ ಬಂದಿದೆ. ರಬಕವಿಯ ಪರಿಶಿಷ್ಟ ಜನರು ವಾಸಿಸುವಂತಹ ಪ್ರದೇಶಗಳ ಕೆಲವೊಂದು ಮನೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಅವರು ಸ್ಥಳಾಂತರಗೊಳ್ಳಬೇಕು. ರಬಕವಿಯ ಮುಳುಗಡೆ ಪ್ರದೇಶದ ನೇಕಾರರಿಗೆ ವಿಶೇಷ ಆದ್ಯತೆ ನೀಡಬೇಕು. ನೇಕಾರ ಕಾಲೋನಿ ಮಾಡಿ ಮನೆಗಳನ್ನು ಮಾಡಲು ಅವಕಾಶವಿದ್ದು, ಅವುಗಳನ್ನು ಸರಕಾರ ಆದಷ್ಟು ಬೇಗನೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಬಸವರಾಜ ಯಂಡಿಗೇರಿ, ಈಶ್ವರ ಚಮಕೇರಿ, ಅಬೂಬಕರ ಬಂಡೆಬುರುಜ, ಮೈಬೂಬ ಅರಬ, ಅಸ್ಲಂ ಶಿಲ್ಲೇದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.