ನವೆಂಬರ್‌ದೊಳಗೆ ಏತ ನೀರಾವರಿ ಯೋಜನೆ ಪೂರ್ಣ
ಭೂಸ್ವಾಧೀನ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದು, ಅವರ ಇಚ್ಛೆಯಂತೆ ಪರಿಹಾರ
Team Udayavani, Oct 23, 2021, 9:22 PM IST
ರಬಕವಿ-ಬನಹಟ್ಟಿ: ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಮುಧೋಳ ತಾಲೂಕಿನ ಸಾವಿರಾರು ರೈತರ ಸಂಜೀವಿನಿಯಾಗಿರುವ ವೆಂಕಟೇಶ್ವರ ಹಾಗೂ ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆ ಕಾಮಗಾರಿ ನವೆಂಬರ್‌ನೊಳಗೆ ಸಂಪೂರ್ಣ ಮುಕ್ತಾಯಗೊಂಡು ರೈತರ ಗದ್ದೆಗೆ ನೀರು ಹರಿಸುವುದಾಗಿ ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗಂಗೆ ವಿಶ್ವಾಸ ವ್ಯಕ್ತಪಡಿಸಿದರು.
ಕುಲಹಳ್ಳಿಯಲ್ಲಿ ಅ ಧಿಕಾರಿ ಹಾಗೂ ರೈತರೊಂದಿಗೆ ಶುಕ್ರವಾರ ಸಮಾಲೋಚನೆ ನಡೆಸಿ ಕಾಮಗಾರಿ ಪ್ರಗತಿ ವೀಕ್ಷಿಸಿ ನಂತರ ಪತ್ರಿಕೆಯೊಂದಿಗೆ ಅವರು ಮಾತನಾಡಿದರು. ಯೋಜನೆಗೆ ಸಂಬಂಧ ಬೆಳೆ ಪರಿಹಾರ ಒದಗಿಸಿ ಪೈಪ್ ಲೈನ್ ಅಳವಡಿಕೆ, ವಿದ್ಯುತ್ ಒದಗಿಸುವ ಕಾರ್ಯ ಮಾತ್ರ ಬಾಕಿ ಉಳಿದಿದ್ದು, ವೇಗವಾಗಿ ಈ ಕಾರ್ಯ ನಡೆಯಲಿದೆ. ಭೂಸ್ವಾಧೀನ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದು, ಅವರ ಇಚ್ಛೆಯಂತೆ
ಪರಿಹಾರ ಒದಗಿಸುವುದಾಗಿ ತಿಳಿಸಿದರು.
ವೆಂಕಟೇಶ್ವರ ಏತ ನೀರಾವರಿ ಯೋಜನೆ 174.4 ಕೋಟಿ ರೂ. ವೆಚ್ಚದಲ್ಲಿ ಮುಧೋಳ ತಾಲೂಕಿನ ಶಿರೋಳ, ಬೆಳಗಲಿ, ಮುಗಳಖೋಡ, ಕುಳಲಿ, ಮಾಲಾಪುರ, ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ, ಜಗದಾಳ, ಕಲಹಳ್ಳಿ, ಬಂಡಿಣಿ, ಚಿಮ್ಮಡ ಹಾಗೂ ಜಮಖಂಡಿ ತಾಲೂಕಿನ ಸೈದಾಪುರ, ಹುಲ್ಯಾಳ, ಮರೇಗುದ್ದಿ, ಬುದ್ನಿ ಗ್ರಾಮಗಳ 7200 ಹೆಕ್ಟೇರ್ ಪ್ರದೇಶದ ಸುಮಾರು 15 ಸಾವಿರಕ್ಕೂ ಅಧಿಕ ರೈತರಿಗೆ ಪ್ರತಿ 6 ತಿಂಗಳಲ್ಲಿ 0.75 ಟಿಎಂಸಿ ನೀರು ಒದಗಿಸುವ ಯೋಜನೆಯಾಗಿದೆ ಎಂದರು.
ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆ 73.75 ಕೋಟಿ ರೂ. ವೆಚ್ಚದಲ್ಲಿ ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಹುನ್ನೂರ, ಹಿಪ್ಪರಗಿ, ಮೈಗೂರ, ಶಿರಗುಪ್ಪಿ, ಮದರಖಂಡಿ, ಕುಂಬಾರಹಳ್ಳ, ಕುಲಹಳ್ಳಿ, ಸನಾಳ, ಕಡಪಟ್ಟಿ, ಹಂಚನಾಳ, ಕಂಕಣವಾಡಿ, ಆಲಬಾಳ, ಮುತ್ತೂರ, ಕುಂಚನೂರ ಗ್ರಾಮಗಳ 9163 ಹೆಕ್ಟೇರ್ ಪ್ರದೇಶದ ಸುಮಾರು 30 ಸಾವಿರಕ್ಕೂ ಅಧಿಕ ರೈತರಿಗೆ ನೀರಾವರಿ ಕೃಷಿ ಭೂಮಿಯಾಗಿ ಪರಿವರ್ತನೆಯಾಗಲಿದೆ ಎಂದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಕಾಮಗಾರಿ ಅಂತಿಮ ಹಂತದಲ್ಲಿದ್ದು, ದೀಪಾವಳಿಯೊಳಗಾಗಿಯೇ ಯೋಜನೆಗೆ ಚಾಲನೆ ನೀಡಬೇಕಿತ್ತು. ವಿದ್ಯುತ್ ಅಳವಡಿಕೆ ಸಮಸ್ಯೆಯಿಂದ ತಡವಾಗಿದೆ ಎಂದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ್ ಸಂಜಯ ಇಂಗಳೆ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.