ಪಿಒಪಿ ಗಣೇಶ ಮೂರ್ತಿ ಸಂಪೂರ್ಣ ನಿಷೇಧ: ಕಾಸೆ
Team Udayavani, Sep 8, 2018, 4:06 PM IST
ಜಮಖಂಡಿ: ಪಿಒಪಿ ಗಣಪತಿ ಮೂರ್ತಿಗಳ ಮಾರಾಟವನ್ನು ಜಿಲ್ಲಾಡಳಿತ ಕಡ್ಡಾಯವಾಗಿ ನಿಷೇಧಿಸಿದ್ದು, ವ್ಯಾಪಾರಸ್ಥರು ಪ್ರಸಕ್ತ ವರ್ಷ ಮಣ್ಣಿನ ಗಣಪತಿ ಮಾರಾಟ ಮಾಡಿ, ಪರಿಸರ ಮಾಲಿನ್ಯ ಕಡಿಮೆ ಮಾಡಬೇಕು ಎಂದು ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಹೇಳಿದರು.
ಸ್ಥಳೀಯ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಜಮಖಂಡಿ ಗಣಪತಿ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕಡ್ಡಾಯವಾಗಿ ಪಿಒಪಿಯಿಂದ ನಿರ್ಮಿತ ಗಣಪತಿಯನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದ್ದು, ಕಾನೂನು ಉಲ್ಲಂಘಿಸಿ ನಗರದಲ್ಲಿ ಯಾರಾದರೂ ಪಿಒಪಿ ಗಣಪತಿ ಮಾರಾಟ ಮಾಡಿದ್ದಲ್ಲಿ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ, ಜೈಲು ಶಿಕ್ಷೆಗೆ ಶಿಫಾರಸ್ಸು ಮಾಡಲಾಗುವುದು ಎಂದರು.
ಗಣಪತಿ ವ್ಯಾಪಾರಸ್ಥರಾದ ಉದಯ ಕುಲಕರ್ಣಿ, ಬಸವರಾಜ ಕುಂಬಾರ, ಶಿವಮೂರ್ತಿ ಸುತಾರ, ಶಿವಾಜಿ ಜಾಧವ, ಸಚಿನ ಅಸುಗಡೆ, ಸುರೇಶ ಸೋನಾವಣೆ, ಲಕ್ಷ್ಮೀಕಾಂತ ಸೋನಿ, ಸುನೀಲ ಕೋಲ್ಲಾಪುರ, ಶಶಿಕಾಂತ ಸೋನಾವಣೆ, ಸಚಿನ್ ಆಲಬಾಳ, ಸಚೀನ ಚೋಪಡೆ ಸಹಿತ ಹಲವರು ಇದ್ದರು.
ಭಕ್ತರಿಗೆ ಗಣಪತಿ ಬೇಕು
ನಗರದ ಮನೆ-ಮನೆಯಲ್ಲಿ ಪ್ರತಿಷ್ಠಾಪನೆಗೆ ಅಂದಾಜು 8 ಸಾವಿರ ಗಣೇಶ ವಿಗ್ರಹಗಳು ಅವಶ್ಯಕತೆಯಿದೆ. ಪಿಒಪಿ ಗಣೇಶ ವಿಗ್ರಹ ನಿಷೇಧಗೊಳಿಸಿರುವ ಜಿಲ್ಲಾಡಳಿತ, ಭಕ್ತರ ಭಕ್ತಿಯ ಮನಸ್ಸಿಗೆ ಘಾಸಿ ಮಾಡಿದೆ. ಪರಿಸರ ಮಾಲಿನ್ಯ ನೆಪದಲ್ಲಿ ಪರಂಪರೆಯ ಪೂಜೆ, ಪುರಸ್ಕಾರಗಳಿಗೆ ಕಂಟಕ ಬಂದಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಗೊಂಡು ಅವಶ್ಯಕತೆಯಿರುವ ಜೇಡಿಮಣ್ಣು ಪೂರೈಸುವ ಮೂಲಕ ಪಿಒಪಿ ಗಣೇಶ ವಿಗ್ರಹಗಳನ್ನು ನಿಷೇಧಿಸಲಿ. ಒಟ್ಟಿನಲ್ಲಿ ಭಕ್ತರ ಪೂಜೆಗೆ ಗಣಪತಿ ವಿಗ್ರಹ ಬೇಕೆಬೇಕು.
ಭಕ್ತರು, ವ್ಯಾಪಾರಸ್ಥರು, ಜಮಖಂಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.