ವಿಷಪೂರಿತ ಆಹಾರದಿಂದ ಮುಕ್ತಿ ನೀಡಿ; ಶಾಸಕ ಆನಂದ ನ್ಯಾಮಗೌಡ
ಯಾವುದೇ ಕೆಲಸದಲ್ಲಿ ಧೈರ್ಯ ಮುಖ್ಯವಾಗಿರುತ್ತದೆ.
Team Udayavani, Apr 6, 2022, 3:44 PM IST
ಜಮಖಂಡಿ: ಜಮೀನುಗಳು ವಿಷಪೂರಿತವಾಗುತ್ತಿದ್ದು, ರೈತರು ಕಷ್ಟ ಪಡುವ ಪರಿಸ್ಥಿತಿಗೆ ಬಂದಿದ್ದಾರೆ. ಸಾವಯವ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಮುಧೋಳ ರಸ್ತೆಯ ಹೊರವಲಯದಲ್ಲಿ ಬಸವೇಶ್ವರ ಅಮರಾಯಿ ಬೃಹತ್ ಜಾನುವಾರುಗಳ ಜಾತ್ರೆಯಲ್ಲಿ ವಿಜೇತ ಜಾನುವಾರಗಳ ಒಡೆಯರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ರೈತರು ಕೃಷಿ ಕ್ಷೇತ್ರದಲ್ಲಿ ರಾಸಾಯನಿಕ ಬಳಸದೆ ಸಾವಯವ ಕೃಷಿ ಮಾಡಲು ಮುಂದಾಗಬೇಕು. ಸಾವಯವ ಕೃಷಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿದ್ದು, ಸಾವಯವದಿಂದ ತಯಾರಿಕೆ ಮಾಡಿದ ಬೆಲ್ಲಕ್ಕೆ ಮೂರು ಪಟ್ಟು ಬೆಲೆಯಿದೆ. ಸಾವಯವ ಕೃಷಿಯಿಂದ ತಮ್ಮ ಆದಾಯದ ಜೊತೆಗೆ ದೇಶದ ಜನರ ಆರೋಗ್ಯ ಸುಧಾರಿಸುವ ಕೆಲಸ ಮಾಡಿದಂತಾಗುತ್ತದೆ. ರೈತರು ವಿಷಪೂರಿತ ಆಹಾರ ಮುಕ್ತಗೊಳಿಸಿ ದೇಶಕ್ಕೆ ಒಳ್ಳೆಯ ಆಹಾರ ನೀಡಲು ಆಸಕ್ತಿ ತೋರಬೇಕು ಎಂದರು.
ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯರು ಮಾತನಾಡಿ, ಇಂದು ಗೋ ರಕ್ಷಣೆ ಮಾಡವ ಕೆಲಸ ಮಾಡಬೇಕಾಗಿದೆ. ದನಗಳ ಸೆಗಣಿಯಿಂದ ವಿಭೂತಿ ತಯಾರಿಸಿ ಮಠ, ಮಂದಿರಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಗಿಡ-ಮರಗಳನ್ನು ಉಳಿಸಿ ಪರಿಸರ ಕಾಪಾಡುವ ಕೆಲಸ ಮಾಡಬೇಕು. ಕೃಷಿಯಲ್ಲಿ ರಾಸಾಯನಿಕ ಬಳಕೆ ಬಿಟ್ಟು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ದನಕರುಗಳ ಮೇಲೆ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಬೇಕು ಎಂದರು.
ಓಲೇಮಠದ ಡಾ| ಚನ್ನಬಸವ ಶ್ರೀಗಳು ಮಾತನಾಡಿ, ಯಾವುದೇ ಕೆಲಸದಲ್ಲಿ ಧೈರ್ಯ ಮುಖ್ಯವಾಗಿರುತ್ತದೆ. ಎಲ್ಲಿ ಧೈರ್ಯ ಇರುತ್ತದೆ ಅಲ್ಲಿ ಸಾಧನೆ ಲಭ್ಯವಾಗಲಿದೆ. ದನ ಕರುಗಳ ಬಗ್ಗೆ ಯುವಕರಲ್ಲಿ ಅನುಭವ ಕಡಿಮೆ ಆಗಿದೆ. ಕೃಷಿ ಕ್ಷೇತ್ರದಲ್ಲಿ ಪರಿಜ್ಞಾನ ಹೆಚ್ಚಿಸಿಕೊಳ್ಳಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ನಿರಾಸಕ್ತಿ ಕಡಿಮೆಯಾಗಿದ್ದು, ರಾಸಾಯನಿಕ ಬಳಕೆಯಿಂದ ಭೂಮಿಗಳು ತನ್ನ ಸತ್ವಶಕ್ತಿ ಕಳೆದುಕೊಂಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಅರುಣಕುಮಾರ ಶಹಾ, ಫಕೀರಸಾಬ ಬಾಗವಾನ, ಸುನೀಲ ಶಿಂಧೆ, ಬಸವರಾಜ ಬಿರಾದಾರ, ಜಾತ್ರಾ ಕಮಿಟಿ ಅಧ್ಯಕ್ಷ ನಂದೆಪ್ಪ ನ್ಯಾಮಗೌಡ, ಉಪಾಧ್ಯಕ್ಷ ಬಸವರಾಜ ಗುಡ್ಲಮನಿ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.