ಗುಡಿಸಲು ವಾಸಿಗಳಿಗೂ ಪರಿಹಾರ ಕೊಡಿ
ಭೂಸ್ವಾಧೀನ ಐತೀರ್ಪುಗೊಂಡ ಪ್ರಕರಣಗಳಲ್ಲಿ ಇನ್ನು 250.44 ಕೋಟಿ ಪರಿಹಾರ ಹಣ ವಿತರಿಸಲು ಬಾಕಿ
Team Udayavani, Feb 1, 2022, 5:57 PM IST
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತದಲ್ಲಿರುವ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಬರುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿನ್ನೀರ ಪ್ರದೇಶದಲ್ಲಿ ಮುಳುಗಡೆಯಾಗುವ 4871 ಎಕರೆ, ಪುನರ್ವಸತಿಗಾಗಿ 2394 ಎಕರೆ, ಕಾಲುವೆಗಾಗಿ 9173 ಎಕರೆ ಸೇರಿ ಒಟ್ಟು 16,438 ಕ್ಷೇತ್ರಕ್ಕೆ ಭೂಸ್ವಾ ಧೀನ ಪ್ರಕ್ರಿಯೆ ಪ್ರಾರಂಭಿಸಿದೆ. ಇದು ಪ್ರಕ್ರಿಯೆ ಚುರುಕಾಗಬೇಕು. ಬಾಕಿ ಭೂಸ್ವಾಧೀನ ಪ್ರಕ್ರಿಯೆ ಸಹ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತರಬೇತಿ ಅ ಧಿಕಾರಿಗಳನ್ನು ಬಳಸಿಕೊಳ್ಳಿ: ಜಿಲ್ಲೆಗೆ ಆಗಮಿಸಿದ ಪ್ರೊಬೇಷನರಿ ಕೆಎಎಸ್ ಅಧಿಕಾರಿಗಳಿಗೆ ತರಬೇತಿ ನೀಡಿ ಭೂಸ್ವಾ ಧೀನ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಬೇಕು. ಈಗಾಗಲೇ ಒಟ್ಟು 1,33,867 ಎಕರೆ ಜಮೀನ ಪೈಕಿ 23341 ಎಕರೆ ಭೂಸ್ವಾಧೀನ ಪಡಿಸಿಕೊಂಡಿದ್ದು, 2716.51 ಕೋಟಿ ರೂ.ಗಳ ಪರಿಹಾರ ವಿತರಿಸಲಾಗಿದೆ. ಭೂಸ್ವಾಧೀನ ಐತೀರ್ಪುಗೊಂಡ ಪ್ರಕರಣಗಳಲ್ಲಿ ಇನ್ನು 250.44 ಕೋಟಿ ಪರಿಹಾರ ಹಣ ವಿತರಿಸಲು ಬಾಕಿ ಉಳಿದಿದ್ದು, ರೈತರಿಂದ ಓಚರ್ ಪಡೆದು ಪರಿಹಾರ ವಿತರಿಸಬೇಕು ಎಂದರು.
ವಿವಿಧ ಹಂತದಲ್ಲಿರುವ ಭೂಸ್ವಾಧೀನ, ಪುನರ್ವಸತಿ ಸೌಲಭ್ಯದ ಕಾಮಗಾರಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿ ಕಾರ ಒಳಗೊಂಡಂತೆ ಸುಮಾರು 3000 ಕೋಟಿ ಅನುದಾನ ಮಾರ್ಚ್ ಅಂತ್ಯಕ್ಕೆ ಅವಶ್ಯಕತೆ ಇದ್ದು, ಕ್ರಮ ವಹಿಸುವುದಾಗಿ ತಿಳಿಸಿದರು.
ಉದಗಟ್ಟಿಗೆ 1 ಕೋಟಿ ಅನುದಾನ: ಉದಗಟ್ಟಿ ಪುನರ್ವಸತಿ ಕೇಂದ್ರದ ಅಭಿವೃದ್ಧಿªಗೆ 1 ಕೋಟಿ ನೀಡಲು ತಿಳಿಸಿದ ಕಾರಜೋಳ ಅವರು, ಮುಳುಗಡೆ ಪ್ರದೇಶದಲ್ಲಿ ಸರಕಾರಿ ಗೌಂಟನ್ ಜಾಗದಲ್ಲಿ ಮನೆ, ಗುಡಿಸಲು ಕಟ್ಟಿಕೊಂಡವರಿಗೂ ಪರಿಹಾರ ನೀಡಬೇಕು. ಪುನರ್ವಸತಿ ನಿರ್ಮಾಣದ ನಂತರ ಉಳಿದ ಜಮೀನನ್ನು ಸರಕಾರಿ ಶಾಲೆ, ಕಾಲೇಜು, ವಸತಿ ನಿಲಯಗಳಿಗೆ ಅವಕಾಶವಿದ್ದಲ್ಲಿ ಈ ಕುರಿತು ಸಭೆ ನಡೆಸಿ ತೀರ್ಮಾನಿಸಲು ಹೇಳಿದರು.
3ನೇ ಹಂತದ ಗ್ರಾಮೀಣ ಮತ್ತು ನಗರ ಸೇರಿ ಒಟ್ಟು 25,550 ಕಟ್ಟಡಗಳ ಪೈಕಿ 2,383 ಕಟ್ಟಡಗಳಿಗೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಸದ್ಯ 4 ಗ್ರಾಮಗಳ 3739 ಕಟ್ಟಡಗಳ ಐ ತೀರ್ಪು ಹಂತದಲ್ಲಿವೆ. ಪುನರ್ವಸತಿಗಾಗಿ 1821.23 ಎಕರೆ, ನ್ಯಾಯಾಲಯದಿಂದ ತಡೆಯಾಜ್ಞೆ 487.14 ಎಕರೆ, ಅಧಿ ಸೂಚನೆ ಹಂತದಲ್ಲಿರುವ 99.01 ಎಕರೆ, ಪ್ರಸ್ತಾವನೆ ಹಂತದಲ್ಲಿ 2295.13 ಎಕರೆ ಇರುವುದಾಗಿ ಯುಕೆಪಿಯ ವಿಶೇಷ ಜಿಲ್ಲಾ ಧಿಕಾರಿ ಸೋಮಲಿಂಗ ಗೆನ್ನೂರ ಸಭೆಗೆ
ತಿಳಿಸಿದರು.
ಯುಕೆಪಿ ಹಂತ 1 ಮತ್ತು 2ರಲ್ಲಿ ಕೃಷ್ಣಾ ಕಣಿವೆಯ ಸ್ಕೀಮ್-1ನೇ ತೀರ್ಪಿನನ್ವಯ 173 ಟಿ.ಎಂಸಿ ನೀರು ಹಂಚಿಕೆಯಾಗಿದ್ದು, ಎಫ್‌ಆರ್‌ಎಲ್ 519.600 ಮೀಟರ್‌ವರೆಗೆ ನೀರನ್ನು ಸಂಗ್ರಹಿಸಿ 11 ಯೋಜನೆಗಳಿಂದ ಯೋಜಿತ 6.20 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ನಾರಾಯಣರ ಜಲಾಶಯ ವ್ಯಾಪ್ತಿಯ 37010 ಎಕರೆ, ಆಲಮಟ್ಟಿ ಜಲಾಶಯ ವ್ಯಾಪ್ತಿಯ 138460 ಎಕರೆ, ಭೀಮಾ ಬ್ರಿಡ್ಜ್ಗಾಗಿ 289 ಎಕರೆ, ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್‌ಗಾಗಿ 1024 ಸೇರಿ ಒಟ್ಟು 176783 ಎಕರೆ ಜಮೀನು ಭೂಸ್ವಾಧಿಧೀನಪಡಿಸಿಕೊಳ್ಳಲಾಗಿದೆ ಎಂದರು.
ಶಾಸಕ ವೀರಣ್ಣ ಚರಂತಿಮಠ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ, ಯುಕೆಪಿಯ ಆಯುಕ್ತ ಶಿವಯೋಗಿ ಕಳಸದ, ಅಪರ ಜಿಲ್ಲಾ ಧಿಕಾರಿ ಮಹಾದೇವ ಮುರಗಿ, ಯುಕೆಪಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ಡಿ. ದಾಸರ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Padubidri: ಅಪರಿಚಿತ ವಾಹನ ಢಿಕ್ಕಿ; ಪಾದಚಾರಿಗೆ ತೀವ್ರ ಗಾಯ
Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ
Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು
Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.