ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ ನಾಗೇಶಗೆ ಬಂಗಾರ ಪದಕ
Team Udayavani, May 11, 2019, 11:29 AM IST
ಇಳಕಲ್ಲ ನಗರದ ನಾಗೇಶ ಸಂಗಪ್ಪ ತಳವಾರ ಮಲೇಶಿಯಾ ದೇಶದಲ್ಲಿ ನಡೆದ ಇಂಟರ್‌ನ್ಯಾಶನಲ್ ಕರಾಟೆ ಸ್ಪರ್ಧೆಯಲ್ಲಿ ಬಂಗಾದ ಪದಕ ಪಡೆದಿರುವುದು.
ಇಳಕಲ್ಲ: ಮಲೇಶಿಯಾ ದೇಶದ ಫೇರಕಾ ನಗರದಲ್ಲಿ ಮೇ 5ರಂದು ನಡೆದ 16ನೇ ಒಕಿಸಜಾ ಗುಜರೊ ಅಂತಾರಾಷ್ಟ್ರೀಯ ಒಪನ್ ಇಂಟರ್‌ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್-2019ರ 56 ಕೆಜಿ ಕುಮಟೆ ಫೈಟ್ ಕರಾಟೆ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ ಭಾರತ ದೇಶದ ಪರವಾಗಿ ಇಳಕಲ್ಲಿನ ನಾಗೇಶ ಸಂಗಪ್ಪ ತಳವಾರ (30) ಭಾಗವಹಿಸಿ ಪ್ರಥಮ ಸ್ಥಾನ, ಬಂಗಾರದ ಪದಕ ಪಡೆದಿದ್ದಾರೆ.
ಇಂಟರ್‌ನ್ಯಾಶನಲ್ ಕರಾಟೆ ಸ್ಪರ್ಧೆಯಲ್ಲಿ ಒಟ್ಟು 8 ದೇಶಗಳ 800ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ ಇತನು ಬಂಗಾರದ ಪದಕ ಪಡೆದು, ಇನ್ನೊಂದು ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಬಂದಿದ್ದಾನೆ. ಮೂಲತಃ ಕೂಡಲಸಂಗಮ ಗ್ರಾಮದವನಾದ ನಾಗೇಶ ತಳವಾರ ಕರಾಟೆಯಲ್ಲಿ ಆಸಕ್ತನಾಗಿ ಕರಾಟೆ ಕಲಿತು 10 ವರ್ಷಗಳ ಹಿಂದೆ ಇಳಕಲ್ಲ ನಗರಕ್ಕೆ ಬಂದು ಇಲ್ಲಿಯ ಅನೇಕ ಶಾಲೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಕರಾಟೆಯನ್ನು ಮಕ್ಕಳಿಗೆ ಕಲಿಸುತ್ತ ಭಾರತಾದ್ಯಂತ ಸಂಚರಿಸಿ ಅನೇಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ. 2015ರಲ್ಲಿ ಭೂತಾನ ದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಬೆಂಗಳೂರಿನ ಕರಾಟೆ ಟ್ರಸ್ಟ್ ಮುಖಾಂತರ ಮಲೇಶಿಯಾ ದೇಶಕ್ಕೆ ಹೋಗಲು ಇಳಕಲ್ಲ ನಗರದ ಅನೇಕ ದಾನಿಗಳು ನಾಗೇಶನಿಗೆ ಹಣದ ಸಹಾಯ ಮಾಡಿದ್ದಾರೆ. ಆದರೆ ಇಂಥ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳಿಗೆ ಸರಕಾರ ಜೀವನ ನಿರ್ವಹಣೆಗೆ ಉದ್ಯೋಗ ಕಲ್ಪಿಸಿ ಪ್ರೋತ್ಸಾಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.