ಲಸಿಕಾ ಅಭಿಯಾನಕ್ಕೆ ಉತ್ತಮ ಸ್ಪಂದನೆ
ಗ್ರಾಮೀಣ ಭಾಗದಲ್ಲಿ 29476 ಜನರಿಗೆ ಲಸಿಕೆ | 44 ಗ್ರಾಮಗಳಲ್ಲಿ 38158 ಜನರಿಗೆ ಲಸಿಕೆ ನೀಡುವ ಗುರಿ
Team Udayavani, Jul 1, 2021, 4:32 PM IST
ವರದಿ: ಮಲ್ಲೇಶ ರಾ. ಆಳಗಿ
ಜಮಖಂಡಿ: ತಾಲೂಕಿನಲ್ಲಿ ಜೂನ್ 7ರಿಂದ ಆರಂಭಗೊಂಡಿರುವ 45 ವರ್ಷ ಮೆಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಈಗಾಗಲೇ ಶೇ.70ರಷ್ಟು ಗುರಿ ಸಾಧನೆ ಮಾಡಲಾಗಿದೆ.
ತಾಲೂಕಿನ ತುಂಗಳ ಗ್ರಾಮದಲ್ಲಿ ಜೂನ್ 7ರಂದು ಶಾಸಕ ಆನಂದ ಸಿದ್ದು ನ್ಯಾಮಗೌಡ ಅಧಿಕೃತವಾಗಿ ಲಸಿಕೆ ಯೋಜನೆಗೆ ಚಾಲನೆ ನೀಡಿದ್ದರು. ಕೊರೊನಾ ಲಸಿಕೆ ನೀಡುವ ತಂಡ ಆಗಮಿಸಲಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸುವ ಮೂಲಕ ಜನರಲ್ಲಿ ಆತ್ಮಸ್ಥೆರ್ಯ ತುಂಬಿದ್ದರು. ತಾಲೂಕಿನ ಗ್ರಾಮೀಣ ಭಾಗದಲ್ಲಿ ಚುನಾವಣೆ ಮತಗಟ್ಟೆಗಳನ್ನೇ ಆಧಾರವಾಗಿಸಿಕೊಂಡು ಲಸಿಕೆ ನೀಡುವ ಅಭಿಯಾನ ರೂಪಿಸಲಾಗಿತ್ತು. ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದ್ದು, ಇಲ್ಲಿಯವರಿಗೆ 29476 ಜನರು ಪ್ರಥಮ ಮತ್ತು ದ್ವಿತೀಯ ಹಂತದ ಲಸಿಕೆ ಪಡೆದುಕೊಂಡಿದ್ದಾರೆ.
ತಾಲೂಕಿನ 44 ಗ್ರಾಮದ 38158 ಜನರಲ್ಲಿ 29476 ಕೊರೊನಾ ಲಸಿಕೆ ಪಡೆದುಕೊಂಡಿದ್ದು, ಉಳಿದ 8682 ಜನರು ಕೊರೊನಾ ಲಸಿಕೆ ಪಡೆಯಬೇಕಿದೆ. ತುಂಗಳ ಗ್ರಾಮದಲ್ಲಿ 1299 ಜನರು ಲಸಿಕೆ ಪಡೆದುಕೊಳ್ಳಬೇಕಿದ್ದು, ಬಿದರಿಯಲ್ಲಿ 280, ಜನವಾಡ 106, ಚಿಕ್ಕಲಕಿ 690, ರೆಹಮತಪುರ 71, ಕಂಕಣವಾಡಿ, 227, ಕಡಕೋಳ 151, ಕುಂಬಾರಹಳ್ಳ 163, ಸನಾಳ 181, ಮೈಗೂರ 557, ಶಿರಗುಪ್ಪಿ 390, ಹುಲ್ಯಾಳ 643, ಹುಣಸಿಕಟ್ಟಿ 129, ಹಂಚಿನಾಳ 16, ಸಿದ್ಧಾಪುರ 149, ಮರೆಗುದ್ದಿ 811, ಮುತ್ತೂರ 238, ಆಲಬಾಳ 555, ಚಿಕ್ಕಪಡಸಲಗಿ 307, ಕವಟಗಿ 378, ಶೂರ್ಪಾಲಿ 144, ತುಬಚಿ 92, ಜಂಬಗಿ ಕೆ.ಡಿ. 166, ಹಿರೇಪಡಸಲಗಿ 317, ನಾಗನೂರ 230, ಕುಂಚನೂರ 183, ಜಕನೂರ 77, ಚಿನಗುಂಡಿ 123, ತೊದಲಬಾಗಿ 587, ಕನ್ನೊಳ್ಳಿ 239, ಕುರಗೋಡ 37, ಗದ್ಯಾಳ 40, ಸಾವಳಗಿಯಲ್ಲಿ 123 ಜನರು ಸೇರಿದಂತೆ ಜಮಖಂಡಿ ಮತಕ್ಷೇತ್ರದ ವ್ಯಾಪ್ತಿಯ 44 ಗ್ರಾಮಗಳಲ್ಲಿ ಅಂದಾಜು 8682 ಜನರು ಕೊರೊನಾ ಲಸಿಕೆ ಪಡೆದುಕೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.