![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 8, 2020, 2:05 PM IST
ಬಾಗಲಕೋಟೆ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ನೇಕಾರರ ಪಾತ್ರ ಪ್ರಮುಖವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೇಕಾರರಿಗೆ ಆರ್ಥಿಕ ಮುಗ್ಗಟ್ಟು ಉಂಟಾದಾಗ ಸಮಯಕ್ಕೆ ಸರಿಯಾಗಿ ಅವರ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದಾರೆ ಎಂದು ನಗರಸಭೆ ಸದಸ್ಯ ಪ್ರಕಾಶ ಹಂಡಿ ಹೇಳಿದರು.
ನವನಗರದ ಸೆಕ್ಟರ್ ನಂ.50ರ ಹತ್ತಿರದ ನೇಕಾರ ಕಾಲೋನಿಯಲ್ಲಿರುವ ಪ್ರಹ್ಲಾದ ಮಲ್ಲಪ್ಪ ದೊಡ್ಡಗಾಡದ ಅವರ ಮನೆಯಲ್ಲಿ ತಾಲೂಕು ನೇಕಾರರ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತಿ ಸಣ್ಣ ಸಮುದಾಯಗಳ ಜಿಲ್ಲಾ ಘಟಕದಿಂದ ಮಗ್ಗಗಳಿಗೆ ಪೂಜೆ ಮಾಡುವ ಮೂಲಕ ರಾಷ್ಟ್ರೀಯ ನೇಕಾರ ದಿನ ಆಚರಿಸಲಾಯಿತು. ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತಿ ಸಣ್ಣ ಸಮುದಾಯಗಳ ಜಿಲ್ಲಾ ಘಟಕದ ಅಧ್ಯಕ್ಷ ಅಮರೇಶ ಕೊಳ್ಳಿ, ಬಾಗಲಕೋಟೆ ತಾಲೂಕು ನೇಕಾರ ಒಕ್ಕೂಟದ ಅಧ್ಯಕ್ಷ ವಿ.ವಿ. ಶಿರಗಣ್ಣವರ, ನೇಕಾರ ಮುಖಂಡರು ಬಿಜಿಪಿ ಜಿಲ್ಲಾ ಉಪಾಧ್ಯಕ್ಷೆ ಭಾಗ್ಯಾ ಉದ್ನೂರ, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿತಾ ಸರೋದೆ, ವಕೀಲ- ನೇಕಾರ ಮುಖಂಡ ಐ.ಎಸ್. ಯಂಡಿಗೇರಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಭಾರಿ ಶಿವಪ್ರಸಾದ ಹೂಗಾರ, ನಗರಸಭೆ ಸದಸ್ಯ ರವಿ ದಾಮಜಿ, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಹಡಪದ, ಮಂಜುನಾಥ ಕಟ್ಟಿಮನಿ, ವಿಜಯ ದಫಡೆ, ಡೀಕಪ್ಪ ಸೂಳಿಕೇರಿ, ಬಸವರಾಜ ಗಾಡದ, ಶಂಕ್ರಪ್ಪ ದೊಡ್ಡಗಾಡದ, ಶ್ರೀನಿವಾಸ ಗಾಡದ, ರವೀಂದ್ರ ಸೂಳಿಕೇರಿ ಮುಂತಾದವರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.