ಮೇ 24-25ರಂದು ಗ್ರಾಮದೇವಿ ಜಾತ್ರೆ
Team Udayavani, Mar 18, 2021, 12:12 PM IST
ಬಾಗಲಕೋಟೆ: ನಗರದ ಕಿಲ್ಲಾಭಾಗದಲ್ಲಿರುವ ಗ್ರಾಮ ದೇವತೆ (ದ್ಯಾಮವ್ವ ದೇವಿ) ಜಾತ್ರಾ ಮಹೋತ್ಸವ ಕಳೆದ 32 ವರ್ಷಗಳಿಂದ ನಡೆಸದೇ ಇರುವುದರಿಂದ ಈ ಬಾರಿ ಮೇ 24ರಂದು 25ರಂದು ವೈಶಿಷ್ಟ್ಯ ಪೂರ್ಣವಾಗಿಜಾತ್ರೋತ್ಸವ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ನಗರದ ಕಿಲ್ಲಾದಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಸೇರಿದ ಹಿರಿಯರು, ಯುವಕರಸಮ್ಮುಖದಲ್ಲಿ ಎರಡು ದಿನಗಳ ಕಾಲ ಅದ್ದೂರಿ ಜಾತ್ರಾ ಮಹೋತ್ಸವ ಮಾಡುವ ಮೂಲಕ, ವಿವಿಧಪೂಜಾ ಕೈಂಕರ್ಯ, ಹೋಮ-ಹವನ ನಡೆಸುವ ಮೂಲಕ ದೇಶಕ್ಕೆ ಬಾಧಿಸುತ್ತಿರುವ ಕೊರೊನಾ ರೋಗದೂರವಾಗುವಂತೆಯೂ ಪೂಜೆ ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಮೇ 24ರಂದು ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ನಗರದಲ್ಲಿ ಕುಂಭಮೇಳ, ಜಾನಪದ ಕಲಾ ತಂಡಗಳು, ಭಾಜಾ-ಭಜಂತ್ರಿಯೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. 25ರಂದು ಬೆಳಗ್ಗೆ ದೇವಿಗೆ ಹೋಮ-ಹವನ, ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಎರಡು ದಿನಗಳ ಕಾಲ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸಂಗಯ್ಯ ಸರಗಣಾಚಾರಿ ಮಾತನಾಡಿ, ಈ ವರ್ಷ ಎಲ್ಲರೂ ಸೇರಿಕೊಂಡು ಬಸವಪ್ರಭು ಸರನಾಡಗೌಡರ ಸಮ್ಮುಖದಲ್ಲಿ ಜಾತ್ರೆ ನಡೆಸೋಣ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸುರೇಶ ಕುದರಿಕಾರ ಮಾತನಾಡಿ, ಗ್ರಾಮದೇವತೆ ಜಾತ್ರೆ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಕುರಿತು ಇಂದಿನ ಯುವಕರಿಗೆ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು ಎಂದರು.
ಅಶೋಕ ಲಿಂಬಾವಳಿ ಮಾತನಾಡಿ, ಗ್ರಾಮದೇವತೆಜಾತ್ರೆ ಕಳೆದ 32 ವರ್ಷಗಳಿಂದ ನಡೆದಿಲ್ಲ. ದೇವಿ ಜಾತ್ರೆಯನ್ನು ತಪ್ಪದೇ ಎಷ್ಟು ವರ್ಷಕ್ಕೊಮ್ಮೆ ಮಾಡಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಜಾತ್ರಾ ಕಮಿಟಿ ರಚಿಸಿಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಮುಖಂಡ ಸುರೇಶ ಮಜ್ಜಗಿ ಮಾತನಾಡಿ, 32 ವರ್ಷಗಳ ನಂತರ ದೇವಿ ಜಾತ್ರೆನಡೆಯುತ್ತಿರುವುದರಿಂದ ಜಾತ್ರೆಯಲ್ಲಿ ಕುಂಭಮೇಳ,ಜಾನಪದ ಕಲಾ ತಂಡಗಳನ್ನು ಭಾಗವಹಿಸುವಂತೆಮಾಡುವುದು, ನಗರದ ಜನರು ತನು-ಮನದಿಂದಉತ್ಸವದಲ್ಲಿ ಭಾಗವಹಿಸಬೇಕು. ಗ್ರಾಮ ದೇವತೆಜಾತ್ರೆಯ ಅಂಗವಾಗಿ ಹೋಮ-ಹವನ, ಪೂಜಾಕಾರ್ಯಕ್ರಮಗಳನ್ನು ನಡೆಸಬೇಕು ಎಂದರು. ಈ ಸಂದರ್ಭದಲ್ಲಿ ಗುಂಡೂರಾವ್ ಸಿಂಧೆ, ಸದಾನಂದ ನಾರಾ, ಹನಮಂತ ಮಟ್ಯಾಳ, ಆನಂದ ಆಚಾರ್ಯ, ಬಂಡೆರಾವ್, ಕಾಂತು ಪತ್ತಾರ, ಬಸಪ್ಪ ಸ್ವಾಗಿ, ತಿಪ್ಪಣ್ಣಬಡಿಗೇರ, ಸಂಗಪ್ಪ ಸಜ್ಜನ, ಮಲ್ಲಪ್ಪ ಡಾವಣಗೇರಿ,ರಾಮು ಮುದಡಾ, ರಘುನಾಥ ದೋಂಗಡಿ,ಸಂತೋಷ ಕರ್ಣೆ, ಕಾಂತು ಬಡಿಗೇರ, ನಿರುಪಾದಪ್ಪಬಡಿಗೇರ, ಸುರೇಶ ಬಡಿಗೇರ, ಪ್ರದೀಪ ರಾಯಕರ,ಆನಂದ ಬಡಿಗೇರ ನಗರದ ಯುವಕರು, ಹಿರಿಯರು ಇದ್ದರು.
ನಗರದ ಎಲ್ಲ ಜನರು ಸೇರಿಕೊಂಡು ಜಾತ್ರೆ ಮಾಡಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಗ್ರಾಮದೇವತೆ ಜಾತ್ರೆ ಮಾಡುವಂತಾಗಬೇಕು. ದೇವಸ್ಥಾನಕ್ಕೆ ಶಾಶ್ವತ ಕಮಿಟಿ ರಚಿಸಬೇಕು.ಜಾತ್ರೋತ್ಸವದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕೊರೊನಾ ನಿಯಮ ಪಾಲಿಸಿ ಅಚ್ಚುಕಟ್ಟಾಗಿ ಜಾತ್ರೆ ಮಾಡೋಣ. ಜಾತ್ರೆಯಶಸ್ಸಿಗೆ ಎಲ್ಲರ ಸಹಕಾರ, ಸಹಾಯ ಅವಶ್ಯ. -ಬಸವಪ್ರಭು ಸರನಾಡಗೌಡ, ಕಿಲ್ಲಾ ಭಾಗದ ಹಿರಿಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.