ಮಾಸಿಕ ವೇತನ ನೀಡುವಂತೆ ಗೈಡ್‌ಗಳ ಆಗ್ರಹ
ಗೈಡ್ ವೃತ್ತಿಯನ್ನೆ ನೆಚ್ಚಿಕೊಂಡ ಪ್ರವಾಸಿ ಮಾರ್ಗದರ್ಶಕರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ.
Team Udayavani, Dec 4, 2021, 5:54 PM IST
ಅಮೀನಗಡ: ಪ್ರವಾಸಿ ಗೈಡ್‌ಗಳಿಗೆ ಮಾಸಿಕ ವೇತನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರವಾಸಿ ಮಾರ್ಗದರ್ಶಕರು ಪತ್ರ ಚಳವಳಿ ನಡೆಸಿದರು. ಐಹೊಳೆಯಲ್ಲಿ ಐತಿಹಾಸಿಕ ದುರ್ಗಾ ದೇವಾಲಯದಿಂದ ಅಂಚೆ ಕಚೇರಿಗೆ ತೆರಳಿದ ಪ್ರವಾಸಿ ಮಾರ್ಗದರ್ಶಕರು ಪೋಸ್ಟ್ ಬಾಕ್ಸ್‌ನಲ್ಲಿ ಪತ್ರಗಳನ್ನು ಹಾಕಿ ಸರ್ಕಾರಕ್ಕೆ ರವಾನಿಸಿದರು.
ಜಿಲ್ಲೆಯ ಸುಮಾರು 35 ಜನ ಪ್ರವಾಸಿ ಮಾರ್ಗದರ್ಶಕರು ಸೇರಿ ರಾಜ್ಯದಲಿ ಒಟ್ಟು 350ಕ್ಕೂ ಹೆಚ್ಚು ಜನ ಪ್ರವಾಸಿ ಮಾರ್ಗದರ್ಶಕರು ಕಳೆದ ಹಲವಾರು ವರ್ಷಗಳಿಂದ ಪ್ರವಾಸಿ ತಾಣಗಳಲ್ಲಿ ಗೈಡ್ ವೃತ್ತಿಯನ್ನು ಮಾಡುತ್ತಿದ್ದೇವೆ. ಆದರೆ, ಅದು ಕೂಡಾ ವರ್ಷಪೂರ್ತಿ ಇರುವುದಿಲ್ಲ.
ಇದರಿಂದ ಗೈಡ್ ವೃತ್ತಿಯನ್ನೆ ನೆಚ್ಚಿಕೊಂಡ ಪ್ರವಾಸಿ ಮಾರ್ಗದರ್ಶಕರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಗೈಡ್ ಗಳಿಗೆ ಮಾಸಿಕ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಸಂಕಷ್ಟದ ಸಂದರ್ಭದಲ್ಲೂ ಕೂಡಾ ಪ್ರವಾಸಿ ಗೈಡ್‌ಗಳಿಗೆ ಸರ್ಕಾರ ಸೌಲಭ್ಯ ಒದಗಿಸಿಲ್ಲ ಇದರಿಂದ ಗೈಡ್ ವೃತ್ತಿಯನ್ನು ನಂಬಿಕೊಂಡು ಬದುಕುತ್ತಿರುವ ಪ್ರವಾಸಿ ಮಾರ್ಗದರ್ಶಕರ ಬದುಕು ಆರ್ಥಿಕವಾಗಿ ತೊಂದರೆಯಿಂದ ಕುಟುಂಬ ನಿರ್ವಹಣೆ,ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರವಾಸೋಧ್ಯಮ ಸಚಿವ ಆನಂದ ಸಿಂಗ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದರು.
ಸ್ಥಳದಲ್ಲಿ ಪ್ರವಾಸಿ ಮಾರ್ಗದರ್ಶಿಗಳಾದ ಬಸವರಾಜ ನರಗುಂದ,ಅಶೋಕ ಮಾಯಾಚಾರಿ, ಸಿದ್ದಲಿಂಗಯ್ಯ ನಿಂಬಲಗುಂದಿ,ಕೊಟ್ಟೂರಸ್ವಾಮಿ ಸಾರಂಗಮಠ,ಈರಪ್ಪ ಅಂಗಡಿ,ರಮೇಶ ಭಜಂತ್ರಿ,ಪರಶುರಾಮ ಗೋಡಿ,ಬುಡ್ಡಪ್ಪ ಮಜ್ಜಗಿ,ಜಗದೀಶ ಹೊಸಮನಿ,ಯಮನಪ್ಪ ಮಾದರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.