Guledagudda: ಅಧಿಕಾರಿಗಳ ಗೈರು; ಸಂಘಟನೆಗಳ ಆಕ್ರೋಶ
5-6 ಇಲಾಖಾ ಪ್ರತಿನಿಧಿಗಳು ಮಾತ್ರ ಹಾಜರಿದ್ದರು.
Team Udayavani, Oct 23, 2023, 1:43 PM IST
ಗುಳೇದಗುಡ್ಡ: ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ವಿವಿಧ ಇಲಾಖೆಗಳು ಕಾರ್ಯ
ನಿರ್ವಹಿಸುತ್ತಿದ್ದು, ಇಲ್ಲಿನ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಜರುಗಿದ ಕರ್ನಾಟಕ ಸಂಭ್ರಮ -50ರ ರಾಜ್ಯೋತ್ಸವ ಕಾರ್ಯಕ್ರಮದ
ಪೂರ್ವಭಾವಿ ಸಭೆಗೆ ಹಲವು ಇಲಾಖೆಗೆಳ ಅಧಿಕಾರಿಗಳು ಗೈರಾಗಿದ್ದಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ
ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಎಸ್.ಎಫ್.ಬೊಮ್ಮಣ್ಣವರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ
ಕಾರ್ಯಕ್ರಮವನ್ನು ತಾಲೂಕಿನಲ್ಲಿ ವಿಜೃಂಭಣೆಯಿಂದ ಆಚರಿಸಲು ಸೇರಿದ ಸಭೆಗೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ 5-6 ಇಲಾಖಾ ಪ್ರತಿನಿಧಿಗಳು ಮಾತ್ರ ಹಾಜರಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್. ಎಫ್.ಬೊಮ್ಮಣ್ಣವರ್ ಕೆಲ ಇಲಾಖಾ ತಾಲೂಕು ಅಧಿಕಾರಿಗಳಿಗೆ ಸಭೆಗೆ ಏಕೆ ಬಂದಿಲ್ಲವೆಂದು ಎಲ್ಲರ ಸಮಕ್ಷಮದಲ್ಲಿ ಫೋನ್ ಮಾಡಿ ಕೇಳಿದರೆ, ಇಲಾಖಾ ಕಚೇರಿ ಗುಳೇದಗುಡ್ಡದಲ್ಲಿ ಇಲ್ಲ, ಬೇರೆ
ಕೆಲಸಗಳಿವೆ, ನಮಗೆ ಸರಿಯಾದ ಮಾಹಿತಿ ಇಲ್ಲ. ಹೀಗೆ ನಾನಾ ತರದ ನಮಗೆ ಮಾಹಿತಿಯಿಲ್ಲ ಎಂದು ಉತ್ತರ ನೀಡಿದರು,
ಕನ್ನಡಪರ ಸಂಘಟನೆಗಳ ಬಹಿಷ್ಕಾರ: ತಕ್ಷಣ ಕನ್ನಡಪರ ಸಂಘಟನೆಗಳು ಸಭೆಯನ್ನು ಬಹಿಷ್ಕರಿಸಿ ಸಭೆ ಮುಂದೂಡಲು ತಹಶೀಲ್ದಾರ್ ಅವರಲ್ಲಿ ವಿನಂತಿಸಿಕೊಂಡವು. ತಾಲೂಕು ಮಟ್ಟದ ಅಧಿಕಾರಿಗಳೇ ಇಂತಹ ಮಹತ್ವದ ಸಭೆ ಬರದಿದ್ದರೆ ಹೇಗೆ? ಸರ್ಕಾರದ ಆದೇಶಕ್ಕೂ ಅವರಿಗೆ ಭಯವಿಲ್ಲವೇ ? ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಭೆ ಮುಂದೂಡಲು ಒತ್ತಾಯಿಸಿದಾಗ ತಹಶೀಲ್ದಾರರು ಸಭೆಯನ್ನು 26ಕ್ಕೆ ಮುಂದೂಡಿದರು. ಅಂದಿನ ಸಭೆಗೆ ಇಲಾಖಾ ಅಧಿಕಾರಿಗಳು ಹಾಜರಾಗದಿದ್ದರೆ, ತಾಲೂಕು ಆಡಳಿತವನ್ನು ಹೊರಗಿಟ್ಟು ಕನ್ನಡಪರ ಸಂಘಟನೆಗಳೇ ನ.1ರಂದು 50 ವರ್ಷದ ಕರ್ನಾಟಕ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡಪರ ಸಂಘಟನೆಗಳು ನಿರ್ಣಯ ಕೈಗೊಂಡವು. ತಹಶೀಲ್ದಾರ್ ಎಸ್. ಎಫ್.ಬೊಮ್ಮಣ್ಣವರ್ ಅಧ್ಯಕ್ಷತೆ ವಹಿಸಿದ್ದರು.
ಪುಸಭೆ ಮುಖ್ಯಾಧಿಕಾರಿ ಎ.ಎಫ್.ಮುಜಾವರ್, ಪಿಎಸ್ಐ ಲಕ್ಷ್ಮಣ ಆರಿ ವೇದಿಕೆ ಮೇಲಿದ್ದರು. ಕರವೇ ಅಧ್ಯಕ್ಷ ರವಿ ಅಂಗಡಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಾ.ಸಿ.ಎಂ.ಜೋಶಿ, ಕಸಾಪ ಅಧ್ಯಕ್ಷ ಡಾ.ಎಚ್.ಎಸ್.ಘಂಟಿ, ಡಾ| ಚಂದ್ರಶೇಖರ ಕಾಳನ್ನವರ್, ಖಜಾನೆ ಅಧಿ ಕಾರಿ ಪಾಟೀಲ, ನೋಂದಣಿ ಅಧಿಕಾರಿ ಗಾಣಿಗೇರ, ಶಾಲಾ ಮುಖ್ಯಗುರುಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.