ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹಾಲಹಂಡೆ ಜಲಪಾತ


Team Udayavani, Jun 8, 2024, 6:33 PM IST

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹಾಲಹಂಡೆ ಜಲಪಾತ

ಗುಳೇದಗುಡ್ಡ : ಕಾನನ ಮಧ್ಯದೊಳಗೊಂದು ನೀರಿನ ಆರ್ಭಟ. ಎತ್ತ ನೋಡಿದರು ಹಚ್ಚಹಸಿರಿನ ಸಿರಿ, ನಿಶಬ್ದ ವಾತಾವಾರಣ. ಇದು ಕಂಡು ಬರುವುದು ತಾಲೂಕಿನ ಹಾನಾಪುರ ಎಸ್‌ಪಿ ಗ್ರಾಮದ ಗುಡ್ಡದ ಹಾಲಹಂಡೆ ಜಲಪಾತದಲ್ಲಿ.

ಹಾನಾಪುರ ಎಸ್.ಪಿ. ಗ್ರಾಮದಿಂದ 1ಕಿಮೀ ದೂರದಲ್ಲಿರುವ ಈ ಹಾಲಹಂಡೆ ಜಲಪಾತ ನಿಜಕ್ಕೂ ಅಧ್ಭುತವಾಗಿದ್ದು, ಈ ಜಾಗಕ್ಕೆ ಭೇಟಿಕೊಟ್ಟರೇ ಸಾಕು ರಮಣೀಯ ದೃಶ್ಯವನ್ನು ಕಾಣಸಿಗಬಹುದು. ಇಲ್ಲಿ ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಹಾಲಹಂಡೆ ಜಲಪಾತ ಈಗ ಪ್ರವಾಸಿಗರ ಗಮನ ಸೆಳೆದಿದೆ.

ಮಳೆಗಾಲದಲ್ಲಿ ತನ್ನ ಸೌಂದರ್ಯ ತೋರಿಸುವ ಈ ಜಲಪಾತ ಪ್ರಕೃತಿಯ ಮಡಿಲಲ್ಲಿದೆ. ಉತ್ತಮವಾಗಿ ಮಳೆಯಾದರೆ ಸಾಕು ಇದರ ವೈಯಾರ ಹೆಚ್ಚುತ್ತದೆ. ಪ್ರವಾಸಿಗರ ಕಣ್ಣಿಗೂ ಕಾಣದೇ ಇದ್ದ ಜಲಪಾತಕ್ಕೆ ಈಗ ಹೋಗಲು ಮಾರ್ಗವಿದೆ. ಕೆಳಗಡೆ ಈಜಲು ಹೊಂಡದಂತೆ ಸ್ಥಳವಿದೆ. ಜಲಪಾತ ಕಡೆ ಅಲ್ಲಲ್ಲಿ ಕೆಲವು ಬೃಹತ್ ಗಾತ್ರದ ಕಲ್ಲುಗಳಿದ್ದು, ನೀರಿನ ಕೆಳಗೆ ಕುಳಿತು ಜಪ ಮಾಡಲೆಂದು ಯಾರೊ ಹಾಕಿದ್ದಾರೇನು ಎನ್ನುವ ರೀತಿಯಲ್ಲಿಯೇ ಅವುಗಳು ಕಾಣಸಿಗುತ್ತವೆ.

ಈಶ್ವರ ಪಡಿ: ಈ ಹಾಲಹಂಡೆ ಜಲಪಾತದಿಂದ ಮುಂದೆ ಸಾಗಿದರೆ ಈಶ್ವರ ಪಡಿ ಸಿಗುತ್ತದೆ. ಇಲ್ಲಿ ಶಿವಲಿಂಗವಿದ್ದು, ಅಲ್ಲದೇ 10-20 ಜನರು ಊಟ ಮಾಡುವ ವಿಶಾಲವಾದ ಸ್ಥಳವಿದೆ. 1937ರಿಂದ ಇಲ್ಲಿಯವರೆಗೆ ಇಲ್ಲಿ ಬಂದು ಹೋದವರು ಅಲ್ಲಿ ತಮ್ಮ ಹೆಸರುಗಳನ್ನು ಬರೆದಿರುವುದು ಕಂಡು ಬರುತ್ತವೆ. ಈ ಹಾಲಹಂಡೆ ಜಲಪಾತದಿಂದ ಹರಿಯುವ ನೀರು ಸುಮಾರು 5-6 ಕಿಮೀ ದೂರದ ಗಂಜಿಗೆರೆ, ಖಾನಾಪುರ ಬಳಿಯ ದೊಡ್ಡ ಕೆರೆ, ಪರ್ವತಿ ಬಳಿಯ ಈರಣ್ಣ ಕೆರೆಗಳಿಗೆ ಹರಿದು ಹೋಗುತ್ತದೆ.

ಹೋಗುವುದು ಹೇಗೆ: ಈ ಸುಂದರ ನಿಸರ್ಗ ರಮಣೀಯ ಸ್ಥಳಕ್ಕೆ ಗುಳೇದಗುಡ್ಡದಿಂದ ಹಾನಾಪುರ ಎಸ್‌ಪಿ ಗ್ರಾಮದ ಶಾಲೆಯ ಬಲ ಭಾಗದ ರಸ್ತೆಯಿಂದ15-20 ನಿಮಿಷ ನಡೆದು ಮೂರಾಲ್ಕು ಹೊಲಗಳನ್ನು ದಾಟಿ ಸ್ವಲ್ಪ ದೂರ ಗುಡ್ಡದಲ್ಲಿ ಹಾಲ ಹಂಡೆ ಜಲಪಾತ, ಕಣ್ಣಿಗೆ ಗೋಚರಿಸುತ್ತದೆ.

ಗಂಜಿಗೇರಿ ಕೆರೆಯಿಂದಲೂ ಈ ಜಲಪಾತಕ್ಕೆ ಹೋಗಬಹುದು ಆದರೆ, ಈ ಗಂಜಿಗೇರಿ ಕೆರೆಯಿಂದ ಬರುವುದು ಕಷ್ಟದ ಕೆಲಸ. ಅಲ್ಲದೇ ಗಂಜಿಗೇರಿ ಕೆರೆಯವರೆಗೆ ಮಾತ್ರ ವಾಹನಗಳು ಹೋಗುತ್ತವೆ. ಅಲ್ಲಿಂದ ಗುಡ್ಡದಲ್ಲಿ ನಡೆದು 1-2 ಕಿಮೀ ಸಂಚರಿಸಬೇಕಾಗುತ್ತದೆ.

-ಮಲ್ಲಿಕಾರ್ಜುನ ಕಲಕೇರಿ

ಟಾಪ್ ನ್ಯೂಸ್

1-crick

India vs England ಸೆಮಿ ಪಂದ್ಯ; ನಿರೀಕ್ಷೆಯಂತೆ ಮಳೆಯಿಂದ ಟಾಸ್ ವಿಳಂಬ

5

Parkala: ಚಾಲಕನಿಗೆ ಮೂರ್ಛೆ; ಹಿಮ್ಮುಖವಾಗಿ ಚಲಿಸಿದ ಬಸ್

1-saddas

Lakshmi Hebbalkar;ಅಂಗನವಾಡಿಗಳಿಗೆ ಕಳಪೆ ಆಹಾರ ಉತ್ಪನ್ನಗಳು ಪೂರೈಕೆಯಾದರೆ ಕಠಿನ ಕ್ರಮ

1-asdsad

Agumbe ಘಾಟಿ; ಭಾರೀ ವಾಹನ ಸಂಚಾರ ನಿಷೇಧ: ಪರ್ಯಾಯ ಮಾರ್ಗ

rain 3

Red Alert; ನಾಳೆ ದಕ್ಷಿಣ ಕನ್ನಡದ ಶಾಲೆಗಳಿಗೆ, ಪಿಯು ಕಾಲೇಜುಗಳಿಗೆ ರಜೆ

suicide

Belthangady; ವಿದ್ಯುತ್ ಪ್ರವಹಿಸಿ ರಸ್ತೆಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿನಿ ಸಾವು

1-wqeqwewq

CM ಹುದ್ದೆ ಬಿಟ್ಟು ಕೊಡಲಿ; ಸ್ವಾಮೀಜಿ ಹೇಳಿಕೆ ಬಳಿಕ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಫಲಾನುಭವಿಗಳಿಗೆ ಸಾಲ ವಿಳಂಬ ಮಾಡಬೇಡಿ-ಶಶಿಧರ ಕುರೇರ

ಬಾಗಲಕೋಟೆ: ಫಲಾನುಭವಿಗಳಿಗೆ ಸಾಲ ವಿಳಂಬ ಮಾಡಬೇಡಿ-ಶಶಿಧರ ಕುರೇರ

Mudhol: ತಾಯಿ-ಮಗು ಆಸ್ಪತ್ರೆ ಅನುಷ್ಠಾನಕ್ಕೆ‌ ಕ್ರಮ: ಸಚಿವ ದಿನೇಶ್ ಗುಂಡೂರಾವ್

Mudhol: ತಾಯಿ-ಮಗು ಆಸ್ಪತ್ರೆ ಅನುಷ್ಠಾನಕ್ಕೆ‌ ಕ್ರಮ: ಸಚಿವ ದಿನೇಶ್ ಗುಂಡೂರಾವ್

BJP-protest

Congress Government: ತೈಲ, ಹಾಲಿನ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ 

8–Mudhol

Mudhol: ಅಕ್ರಮ ಅಕ್ಕಿ ಸಾಗಾಟ ಲಾರಿ ವಶಕ್ಕೆ: ಇಬ್ಬರ ಬಂಧನ

Terdal: ಮದುವೆ ಸಂಭ್ರಮ ಕಸಿದುಕೊಂಡ ಜವರಾಯ: ಹೈಟೆನ್ಶನ್ ವೈರ್ ತುಂಡಾಗಿ ಇಬ್ಬರು ಮೃತ

Terdal: ಮದುವೆ ಸಂಭ್ರಮ ಕಸಿದುಕೊಂಡ ಜವರಾಯ: ಹೈಟೆನ್ಶನ್ ವೈರ್ ತುಂಡಾಗಿ ಇಬ್ಬರು ಮೃತ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

1-saa

Haveri; ಕರ್ಜಗಿ ಕಾರಹುಣ್ಣಿಮೆಯಲ್ಲಿ ಬಂಡಿ ಹರಿದು ವ್ಯಕ್ತಿ ದುರ್ಮರಣ

DK Shivakumar: ಡಿಸಿಎಂ ಹುದ್ದೆ ಬೇಕಿದ್ದವರು ಹೈಕಮಾಂಡ್‌ ಬಳಿ ಹೋಗಿ; ಡಿಕೆಶಿ

DK Shivakumar: ಡಿಸಿಎಂ ಹುದ್ದೆ ಬೇಕಿದ್ದವರು ಹೈಕಮಾಂಡ್‌ ಬಳಿ ಹೋಗಿ; ಡಿಕೆಶಿ

7

Honnali: ಡೆಂಘೀಗೆ ವಿದ್ಯಾರ್ಥಿನಿ ಬಲಿ

1-crick

India vs England ಸೆಮಿ ಪಂದ್ಯ; ನಿರೀಕ್ಷೆಯಂತೆ ಮಳೆಯಿಂದ ಟಾಸ್ ವಿಳಂಬ

1-ree

Mundargi; ನೀರಾವರಿ ಇಲಾಖೆ‌ ಕಚೇರಿ ಒಳಗೇ ಆತ್ಮಹತ್ಯೆಗೆ ಮುಂದಾದ ರೈತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.