ಕಾನೂನಾತ್ಮಕ ಹೋರಾಟ ಮೂಲಕ ಪಡೆಯುವ ಮೀಸಲಾತಿಗೆ ನಮ್ಮ ಬೆಂಬಲವಿದೆ : ಹನಮಂತ ನಿರಾಣಿ
Team Udayavani, May 9, 2022, 9:37 PM IST
ಹುನಗುಂದ : ಲಿಂಗಾಯುತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ಹೋರಾಟಕ್ಕೆ ನಿರಾಣಿ ಕುಟುಂಬದ ವಿರೋಧವಿಲ್ಲ.ಕಾನೂನಾತ್ಮಕ ಹೋರಾಟ ಮೂಲಕ ಪಡೆಯುವ ಮೀಸಲಾತಿಗೆ ನಮ್ಮ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಕಟ್ಟಡಗಳ ಭೂಮಿ ಪೂಜೆಗೆ ಆಗಮಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ನೀಡಬೇಕೆನ್ನುವುದರಲ್ಲಿ ಎರಡು ಮಾತಿಲ್ಲ.ಹೋರಾಟ ರೂಪರೇಷದಲ್ಲಿ ಒಬ್ಬೊಬ್ಬರ ಒಂದೊಂದು ತರಹ ನಡೆಸುತ್ತಿದ್ದಾರೆ. ಕಾನೂನಾತ್ಮಕ ಹೋರಾಟದ ಮೂಲಕ ಮೀಸಲಾತಿಯನ್ನು ಪಡೆಯುವುದು ಸೂಕ್ತ. ನಿರಾಣಿ ಕುಟುಂಬ ಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ ಎನ್ನುವ ಸುದ್ದಿಗಾರ ಪ್ರಶ್ನೆಗೆ ಹನನಂತ ನಿರಾಣಿ ಉತ್ತರಿಸಿ ಮೀಸಲಾತಿ ಹೋರಾಟ ಮಾಡತ್ತೀದ್ದಾರೆ ಅಲ್ಲಿ ಹೋಗಿ ಪಾಲ್ಗೊಂಡರೇ ಮಾತ್ರ ಹೋರಾಟದಲ್ಲಿ ನಾವು ಇದ್ದೇವೆ ಎನ್ನುವುದ್ದಲ್ಲ ನಾವು ಎಲ್ಲೆ ಇದ್ದರೂ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಇದನ್ನೂ ಓದಿ : ದೇಶೀಯ ಕ್ರೀಡೆಗೆ ವಿದೇಶದಲ್ಲೂ ಹೈಟೆಕ್ ಸ್ಪರ್ಶ : ಎಂ.ಎಸ್.ತ್ಯಾಗಿ ಅಭಿಮತ
ಇನ್ನು ಪದವೀದರ ಮತ ಕ್ಷೇತ್ರದಿಂದ ಮತ್ತೊಮ್ಮೆ ನಾನು ಕಣಕ್ಕೀಳಿವುದು ಗ್ಯಾರೆಂಟಿ.ಈಗಾಗಲೇ ಪಕ್ಷ ನನಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ತೋರಿದೆ.ಜೂನ್ 30 ರೊಳಗಾಗಿ ಪದವೀಧರ ಚುನಾವಣೆಯ ನಿರ್ಧಾರವಾಗಲಿದೆ. ಕಳೆದ ಬಾರಿಗಿಂತಲ್ಲೂ ಹೆಚ್ಚಿನ ಅಂತರದಲ್ಲಿ ನಾನು ಗೆಲ್ಲುವುದು ನಿಶ್ಚಿತ. ಪ್ರತಿಸ್ಪರ್ಧಿ ಯಾರೇ ಇದ್ದರೂ ನಮ್ಮದು ಗೆಲ್ಲುವಿನ ಕಡೆಗೆ ಮಾತ್ರ ಗಮನವಿದೆ ಎಂದರು. ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು 2500 ಕೋಟಿ ಕೊಟ್ಟರೇ ಮುಖ್ಯಮಂತ್ರಿ ಸ್ಥಾನ ನೀಡುತ್ತಾರೆ ಎನ್ನುವ ಹೇಳಿಕೆಗೆ ತಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿರಾಣಿ ಯತ್ನಾಳವರು ದೊಡ್ಡ ರಾಜಕಾರಣಿಗಳು ಅವರ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ನಾಯಕರು ಅದಕ್ಕೆ ಉತ್ತರಿಸುತ್ತಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.