ಟಂಟಂ ಚಾಲಕರಿಗೆ ಕಿರುಕುಳ-ಪ್ರತಿಭಟನೆ

•ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಲು ಆಗ್ರಹ•ಪೊಲೀಸರ ವಿರುದ್ಧ ಘೋಷಣೆ ಕೂಗಿದ ಚಾಲಕರು

Team Udayavani, Jun 28, 2019, 9:49 AM IST

bk-tdy-2..

ಬಾಗಲಕೋಟೆ: ಪೊಲೀಸರಿಂದ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಟಂಟಂ ಚಾಲಕರು ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಬಾಗಲಕೋಟೆ: ನಿತ್ಯ ಟಂಟಂ ಓಡಿಸಿಕೊಂಡು ಉಪಜೀವನ ಸಾಗಿಸುತ್ತಿರುವ ನಮಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಟಂಟಂ ಚಾಲಕರು ಗುರುವಾರ ಸೇವೆ ಸ್ಥಗಿತಗೊಳಿಸಿ ಬೃಹತ್‌ ಹೋರಾಟ ನಡೆಸಿದರು.

ಬಾಗಲಕೊಟೆ, ವಿದ್ಯಾಗಿರಿ ಹಾಗೂ ನವನಗರದ ಟಂಟಂ ಚಾಲಕರು ಮೂರು ಕಡೆ ಪ್ರತಿಭಟನೆ ಮೆರವಣಿಗೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

ನೂರಾರು ಸಂಖ್ಯೆಯಲ್ಲಿದ್ದ ಟಂಟಂ ಚಾಲಕರು, ಪೊಲೀಸರ ವಿರುದ್ಧ ಘೋಷಣೆ ಕೂಗುತ್ತ, ಬಡವರ ಹೊಟ್ಟೆ ಮೇಲೆ ಹೊಡೆಯುವ ಪೊಲೀಸರಿಗೆ ದಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಂಟಂ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷರೂ ಆಗಿರುವ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ, ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಟಂಟಂ ಚಾಲಕರಿಗೆ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ಬಿಚ್ಚಿಟ್ಟರು.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮನೆ, ಭೂಮಿ ಎಲ್ಲವನ್ನೂ ಕಳೆದುಕೊಂಡು ಸದ್ಯ ನವನಗರದಲ್ಲಿ ವಾಸವಾಗಿದ್ದೇವೆ. ನಗರದಲ್ಲಿ ಯಾವುದೇ ದೊಡ್ಡ ಕಾರ್ಖಾನೆಗಳೂ ಇಲ್ಲ. ಹೀಗಾಗಿ ಟಂಟಂ ಓಡಿಸಿಕೊಂಡೇ ಜೀವನ ನಡೆಸುತ್ತಿದ್ದೇವೆ. ಆದರೆ, ಪೊಲೀಸರು ವಿನಾಕಾರಣ ಕಿರುಕುಳ ನೀಡಿ ದಂಡ ಹಾಕುತ್ತಿದ್ದಾರೆ. ಇದರಿಂದ ಟಂಟಂ ಚಾಲಕರು ನಿತ್ಯ ಗಳಿಸಿದ ಹಣವನ್ನು ಪೊಲೀಸರಿಗೆ ದಂಡದ ರೂಪದಲ್ಲಿ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ನಿತ್ಯ ಉಪ ಜೀವನ ನಡೆಸುವುದೇ ಟಂಟಂ ಓಡಿಸಿದ್ದರಿಂದ ಬರುವ ಹಣದಲ್ಲೇ ನಾವೆಲ್ಲ ಜೀವನ ನಡೆಸುತ್ತೇವೆ. ಈಗ ಪೊಲೀಸರು ಕೇಸ್‌ ಹಾಕುತ್ತಿರುವುದರಿಂದ ತೀವ್ರ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ನಮ್ಮ ಮೇಲಾಗುತ್ತಿರುವ ಕಿರುಕುಳ ತಪ್ಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಮೊಹ್ಮದಶಬ್ಬೀರ ಸಣ್ಣಕ್ಕಿ, ಅಡಿವೆಪ್ಪ ಕಟ್ಟಿಮನಿ, ರಮೇಶ ಹೊಸಮನಿ, ಗುರಯ್ಯ ಸಿಕ್ಕೇರಿಮಠ, ರಾಜೇಸಾಬ ನದಾಫ ಪ್ರತಿಭಟನೆಯಲ್ಲಿದ್ದರು.

ಟಾಪ್ ನ್ಯೂಸ್

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮ*ಹತ್ಯೆ

ಹೊಲ ಮಾರಿದ ಹಣ ಕಳ್ಕೊಂಡ ದಂಪತಿ; ಮೀಸೋ ಆ್ಯಪ್‌ ಹೆಸರಿನಲ್ಲಿ ದಂಪತಿಗೆ ನಾಮ!

ಹೊಲ ಮಾರಿದ ಹಣ ಕಳ್ಕೊಂಡ ದಂಪತಿ; ಮೀಶೋ ಆ್ಯಪ್‌ ಹೆಸರಿನಲ್ಲಿ ದಂಪತಿಗೆ ನಾಮ!

2

Mudhol: ಸಾಲಬಾಧೆಯಿಂದ ರೈತ ಆತ್ಮಹ*ತ್ಯೆ

1-dee

Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

5

Udupi: ಜಿಲ್ಲೆಯ ಬ್ಲ್ಯಾಕ್‌ ಸ್ಪಾಟ್‌ 30ರಿಂದ 20ಕ್ಕೆ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.