![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jun 21, 2019, 8:00 AM IST
ಬನಹಟ್ಟಿ: ಪ್ರಾಣಾಯಾಮ, ಯೋಗಾಸನ ನೀಡಿದ ಡಾ| ಪರಶುರಾಮ ರಾವಳ.
ಬನಹಟ್ಟಿ: ಯೋಗದ ಮೂಲಕ ಸಾರ್ವಜನಿಕರಲ್ಲಿ ಉತ್ತಮ ಆರೋಗ್ಯ ಮೂಡಿಸುವ ಉದ್ದೇಶದಿಂದ ವೈದ್ಯಕೀಯ ವೃತ್ತಿ ಜೊತೆಗೆ ಹಲವಾರು ವರ್ಷಗಳಿಂದ ಯೋಗ ಮತ್ತು ಪ್ರಾಣಾಯಾಮ ತರಬೇತಿಯನ್ನು ಡಾ| ಪರಶುರಾಮ ರಾವಳ ನೀಡುತಿದ್ದಾರೆ.
ಡಾ| ಪರಶುರಾಮ ರಾವಳ ಯೋಗದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. 2005ರಲ್ಲಿ ಬಿಎಎಂಎಸ್ ಮಾಡಿ ಮತ್ತೇ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಎಂ. ಎಸ್ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ನಗರದಲ್ಲಿ ಚೈತನ್ಯ ಆಸ್ಪತ್ರೆಯ ಜೊತೆಗೆ ತೇರದಾಳದ ಎಸ್‌ಡಿಎಂ ಟ್ರಸ್ಟ್‌ನ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ| ಪರಶುರಾಮ ರಾವಳ ಯೋಗ ಗುರು ಬಾಬಾ ರಾಮದೇವ ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಒಟ್ಟು ಏಳು ದಿವಸಗಳಂತೆ ಮೂರು ಬಾರಿ ತರಬೇತಿ ಪಡೆದುಕೊಳ್ಳುವುದರ ಜೊತೆಗೆ ಅಲ್ಲಿ ಪಡೆದುಕೊಂಡ ಯೋಗಾಸನ ಮತ್ತು ಪ್ರಾಣಾಯಾಮವನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿದ್ದಾರೆ.
2012ರಿಂದ ಯೋಗ ತರಬೇತಿಯನ್ನು ಆರಂಭಿಸಿರುವ ಡಾ| ರಾವಳ ಇದುವರೆಗೆ ರಬಕವಿ, ಬನಹಟ್ಟಿ, ತೇರದಾಳ ಮಹಾಲಿಂಗಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ 100ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ. ಉಚಿತವಾಗಿ ತರಬೇತಿಯನ್ನು ನೀಡುತ್ತಿರುವುದು ವಿಶೇಷವಾಗಿದೆ.
ತಾವು ತರಬೇತಿ ನೀಡುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಪರಾಮರ್ಶೆ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಅವರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.
ಡಾ| ರಾವಳ ಆರೋಗ್ಯವೇ ಜೀವನ ಮತ್ತು ರೋಗವೇ ಮರಣ ಉದ್ದೇಶವನ್ನಿಟ್ಟುಕೊಂಡು ಆರೋಗ್ಯ ಯೋಗ ಪೀಠ ಸಂಸ್ಥೆ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಅಡಿಯಲ್ಲಿ ಅನೇಕ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದಾರೆ.
ಪ್ರಾಣಾಯಾಮ ಮತ್ತು ಯೋಗಾಸನವನ್ನು ಅವಿಭಾಜ್ಯ ದಿನಚರಿಯನ್ನಾಗಿ ಮಾಡಿಕೊಂಡಿದ್ದಾರೆ. ಡಾ| ರಾವಳ ತರಬೇತಿ ನೀಡುತ್ತಿರುವ ಸಂದರ್ಭದಲ್ಲಿ ಧ್ವನಿ
ವರ್ಧಕ ತೆಗೆದುಕೊಂಡು ಬಂದು ಸೇವೆ ನೀಡುವುದರ ಜೊತೆಗೆ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ ತರಬೇತಿ ನೀಡುತ್ತಿದ್ದಾರೆ.
ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕೊಡುವ ನಿಟ್ಟಿನಲ್ಲಿ ಉಚಿತ ಪ್ರಾಣಾಯಾಮ ಮತ್ತು ಯೋಗಾಸನ ನೀಡುತ್ತಿರುವ ಡಾ| ಪರಶುರಾಮ ರಾವಳ ಕಾರ್ಯ ಮೆಚ್ಚುವಂತಹದು.
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.