ಕಾರ್ಗಿಲ್ ಗೆದ್ದ ವೀರ ಬದುಕು ಗೆಲ್ಲಲಿಲ್ಲ!

•ಬಾಂಬ್‌ ಸ್ಫೋಟದಲ್ಲಿ ಕೈ ಕಾಲು ಕಳೆದುಕೊಂಡಿರುವ ರಂಗಪ್ಪ•3 ವರ್ಷ ಸತತ ಚಿಕಿತ್ಸೆ ಬಳಿಕ ಬದುಕುಳಿದ ವೀರ ಯೋಧ

Team Udayavani, Jul 26, 2019, 8:12 AM IST

bk-tdy-1

ಬಾಗಲಕೋಟೆ: ಕಾರ್ಗಿಲ್ ಯುದ್ಧದಲ್ಲಿ ಎರಡು ಕೈ-ಒಂದು ಕಾಲು ಕಳೆದುಕೊಂಡ ರಂಗಪ್ಪ ಆಲೂರ.

ಬಾಗಲಕೋಟೆ: ಅದು 1999ರ ಫೆ.14ರ ಸಂಜೆ 5ರ ಸಮಯ. ದೇಶದ ತುತ್ತ ತುದಿಯ ಸಿಯಾಚಿನ್‌ನಲ್ಲಿ 8 ಜನ ಸೈನಿಕರ ತಂಡ, ಮೇಘಧೂತ್‌ ಆಪರೇಶನ್‌ನಲ್ಲಿ ಪಾಕಿಸ್ತಾನದ ಸೈನಿಕರೊಂದಿಗೆ ಸೆಣಸಾಡುತ್ತಿತ್ತು. ಈ ವೇಳೆ ಶತ್ರು ಸೈನ್ಯದಿಂದ ಸ್ಮಾಲ್ ವಿಜಾಯಿಲ್ ಎಂಬ ಬಾಂಬ್‌ ಹಾರಿ ಬಂತು. ಆ ಬಾಂಬ್‌ ಬಂದಿದ್ದಷ್ಟೇ ಗೊತ್ತು. ಬಳಿಕ ಆರು ತಿಂಗಳ ಕಾಲ ಮುಂದೇನಾಯಿತು ಎಂಬುದು ಗೊತ್ತಾಗಲಿಲ್ಲ.

ಈ ಯುದ್ಧದಲ್ಲಿ ಜತೆಗೆ ಇತರ ಏಳು ಜನ ಸೈನಿಕರೆಲ್ಲ ವೀರ ಮರಣವನ್ನಪ್ಪಿದ್ದರು. ನಾನೂ 48 ಗಂಟೆಗಳ ಮರಣ ಹೊಂದಿದ ಸೈನಿಕರ ಶವಗಳೊಂದಿಗೆ ಬಿದ್ದಿದ್ದೆ. ಮೈ ಮೇಲೆ ಒಂದೂವರೆ ಅಡಿ ಮಂಜು ಬಿದ್ದಿತ್ತು. ಸೇನಾ ವೈದ್ಯರು-ಸೈನಿಕರು ಶವ ಸಾಗಿಸುವಾಗ ನಾನಿನ್ನೂ ಬದುಕಿದ್ದು ಗೊತ್ತಾಯಿತು.

ಇದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹುಲಸಗೇರಿಯ ಸೈನಿಕ ರಂಗಪ್ಪ ಹುಲಿಯಪ್ಪ ಆಲೂರ ಅವರ ಮಾತು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ತಮ್ಮ ರೋಚಕ ಅನುಭವ ಹಂಚಿಕೊಂಡರು. ಯುದ್ಧ ಗೆದ್ದರೂ, ಬದುಕು ಗೆಲ್ಲಲಾಗಲಿಲ್ಲ. ಎರಡೂ ಕೈ, ಒಂದು ಕಾಲನ್ನು ದೇಶ ಸೇವೆಯಲ್ಲಿ ಕಳೆದುಕೊಂಡವರು. ಇಂದಿಗೂ ಮದುವೆಯಾಗದೇ ತನ್ನ ಸಹೋದರೊಂದಿಗೆ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದಾರೆ. ಯುದ್ಧ ಗೆದ್ದ ಖುಷಿ ಇದೆ. ದೇಶಕ್ಕಾಗಿ ನನ್ನ ಕೈ-ಕಾಲು ಕಳೆದುಕೊಂಡಿರುವೆ ಎಂಬ ಕೆಚ್ಚೆದೆಯ ದೇಶಾಭಿಮಾನ ಅವರದು.

1993ರಲ್ಲಿ ಸೈನ್ಯಕ್ಕೆ:

ರಂಗಪ್ಪ, 1993ರಲ್ಲಿ 26ನೇ ಮರಾಠಾ ಲೈಟ್ ಇನ್‌ಫೆಂಟ್ರಿ ಗ್ರುಪ್‌ ಮೂಲಕ ದೇಶದ ಸೈನ್ಯಕ್ಕೆ ಆಯ್ಕೆಯಾದವರು. ಒಟ್ಟು ಆರೂವರೆ ವರ್ಷ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಆಸ್ಸಾಂನಲ್ಲಿ 1 ವರ್ಷ, ಜಾಮ್‌ನಗರದಲ್ಲಿ 3 ವರ್ಷ, ಸಿಮ್ಲಾದಲ್ಲಿ 1 ವರ್ಷ ಸೇವೆ ಸಲ್ಲಿಸಿ, ಕಾರ್ಗಿಲ್ ಯುದ್ಧದ ವೇಳೆ ಜಮ್ಮು-ಕಾಶ್ಮೀರದ ಸಿಯಾಚಿನ್‌ಗೆ ವರ್ಗಗೊಂಡರು. ಅಲ್ಲಿ ಒಂದೂವರೆ ವರ್ಷ ಸೇವೆಯಲ್ಲಿದ್ದರು. ಆಗಲೇ ಕಾರ್ಗಿಲ್ ಯುದ್ಧ ಘೋಷಣೆಯಾಗಿದ್ದು. ಕರ್ನಾಟಕದ (ಮೈಸೂರು) ಬಿ.ಕೆ. ಸುಧೀರ (ಅದೇ ಯುದ್ಧದಲ್ಲಿ ವೀರ ಮರಣವನ್ನಪ್ಪಿದ್ದಾರೆ) ಅವರೊಂದಿಗೆ ಒಟ್ಟು 8 ಜನ ಸೈನಿಕರ ತಂಡ ಇವರದು. ಸಿಯಾಚಿನ್‌ನ ವಿವಿಧ ಭಾಗದಲ್ಲಿ ಸೈನಿಕರ ತಂಡಗಳು ಸಕ್ರಿಯವಾಗಿದ್ದವು.

ಶತ್ರು ಸೈನ್ಯ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಧೈರ್ಯದಿಂದ ಹೋರಾಡಿದ್ದರು. 20 ದಿನಗಳ ಕಾಲ ಹೋರಾಟದಲ್ಲಿ ತೊಡಗಿದ್ದರು. 21ನೇ ದಿನ ಸಂಜೆ ವಿಜಾಯಿಲ್ ಬಾಂಬ್‌ ಸ್ಫೋಟದಿಂದ ಇವರ ತಂಡದಲ್ಲಿದ್ದ ಏಳು ಜನ ಸೈನಿಕರು ವೀರ ಮರಣವನ್ನಪ್ಪಿದರು. ರಂಗಪ್ಪ ಕೂಡ 48 ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಎರಡು ಕೈ ತುಂಡಾಗಿದ್ದವು. ಒಂದು ಕಾಲು ಛಿದ್ರಗೊಂಡಿತ್ತು. ಸೇನಾಧಿಕಾರಿಗಳು ಬಂದು ಪರಿಶೀಲಿಸಿ, 8 ಸೈನಿಕರನ್ನು ಕಳೆದುಕೊಂಡೆವು ಎಂದೇ ಭಾವಿಸಿದ್ದರು. ಸೈನಿಕರ ಶವ ಸಾಗಿಸಲಾಗುತ್ತಿತ್ತು. ರಂಗಪ್ಪರೂ ಮೃತಪಟ್ಟಿದ್ದಾರೆ ಎಂದೇ ಭಾವಿಸಿ, ಶವಗಳಿರುವ ವಾಹನಕ್ಕೆ ಇವರನ್ನು ಸಾಗಿಸಲಾಗುತ್ತಿತ್ತು. ಆ ವೇಳೆ ಸೈನ್ಯದ ವೈದ್ಯರು ಪರಿಶೀಲಿಸಿದಾಗ ರಂಗಪ್ಪ ಇನ್ನೂ ಉಸಿರಾಡುತ್ತಿರುವುದು ಕಂಡು ಕೂಡಲೇ ಚಂಡೀಗಡದ ಸೇನಾ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಆರು ತಿಂಗಳ ಕಾಲ ರಂಗಪ್ಪ ಅವರಿಗೆ ಪ್ರಜ್ಞೆಯೇ ಬಂದಿರಲಿಲ್ಲ.

ಒಟ್ಟು 28 ಶಸ್ತ್ರಚಿಕಿತ್ಸೆಗಳನ್ನು ಅವರಿಗೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ 2ನೇ ತಾಯಿಯ ರೀತಿ ಆರೈಕೆ ಮಾಡಿದ್ದು ಕೊಡಗಿನ ಗೀತಾ ಎಂಬ ಮೇಜರ್‌ ನರ್ಸ್‌. ನನ್ನ ತಾಯಿ ಜನ್ಮ ನೀಡಿದರೆ, ಮೇಜರ್‌ ನರ್ಸ್‌ ಗೀತಾ ಅವರು ನನಗೆ ಪುನರ್‌ ಜನ್ಮ ನೀಡಿದವರು ಎಂದು ರಂಗಪ್ಪ ಇಂದಿಗೂ ಸ್ಮರಿಸುತ್ತಾರೆ.

ಬದುಕಿಗೂ ಹೋರಾಟ:

ರಂಗಪ್ಪರಿಗೆ ಚಂಡೀಗಡದಲ್ಲಿ 1 ವರ್ಷ, ಪುಣೆಯಲ್ಲಿ 2 ವರ್ಷ ನಿರಂತರ ಚಿಕಿತ್ಸೆ ನೀಡಿದ ಬಳಿಕ ಶೇ.100ರಷ್ಟು ಅಂಗವಿಕಲತೆಯೊಂದಿಗೆ ಬದುಕುಳಿದರು. ಬಳಿಕ ಊರಿಗೆ ಬಂದ ಅವರನ್ನು ಹೆತ್ತವರು, ಗ್ರಾಮಸ್ಥರು ಸಂಭ್ರಮದಿಂದ ಬರ ಮಾಡಿಕೊಂಡರು. ಆಗಲೇ ಅವರಿಗೆ ಬದುಕಿನ ಬಂಡಿ ಸಾಗಿಸಲು ಕಷ್ಟ ಎದುರಿಸಬೇಕಾಯಿತು. ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆಂದು ಆಗಿನ ಸರ್ಕಾರ 1 ಲಕ್ಷ ಕೊಟ್ಟು ಕೈ ತೊಳೆದುಕೊಂಡಿತ್ತು.

ಕೇಂದ್ರ ಸರ್ಕಾರ ಗ್ಯಾಸ್‌ ಏಜೆನ್ಸಿ ಮಂಜೂರು ಮಾಡಿದ್ದು ಬಿಟ್ಟರೆ ಬೇರೆ ಸೌಲಭ್ಯ ಕೊಡಲಿಲ್ಲ. ಹೀಗಾಗಿ ಬೆಂಗಳೂರು, ಪುಣೆ ಅಲೆದಾಡಬೇಕಾಯಿತು. ಆಗ ಶಾಸಕರಾಗಿದ್ದ ಬೀಳಗಿಯ ಜೆ.ಟಿ. ಪಾಟೀಲರ ಒತ್ತಡ, ಪ್ರಯತ್ನದ ಫಲವಾಗಿ ಬಾಗಲಕೋಟೆಯಲ್ಲಿ ಒಂದು ನಿವೇಶನ, ಹಂಗರಗಿಯಲ್ಲಿ 4 ಎಕರೆ 35 ಗುಂಟೆ ಭೂಮಿ ಸರ್ಕಾರ ಮಂಜೂರು ಮಾಡಿತು. ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳಲೂ ಹಣ ಇರಲಿಲ್ಲ. ಆಗ ಬಾದಾಮಿಯಲ್ಲಿದ್ದ ಮನೆ ಮಾರಿ, ಬಾಗಲಕೋಟೆಯಲ್ಲೊಂದು ಪುಟ್ಟ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಗ್ಯಾಸ್‌ ಏಜೆನ್ಸಿಯನ್ನು ಸಂಬಂಧಿಕರೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಗ್ಯಾಸ್‌ ಏಜೆನ್ಸಿ, ಭೂಮಿ, ನಿವೇಶನ ಪಡೆಯಲು ಸುಮಾರು 5 ವರ್ಷಗಳ ಕಾಲ ಹೋರಾಟ ನಡೆಸಿದ್ದೇನೆ ಎಂದು ರಂಗಪ್ಪ ಹೇಳುತ್ತಾರೆ.

27ರಂದು 2ನೇ ತಾಯಿಯ ಭೇಟಿ: ಚಂಡೀಗಡ ಮತ್ತು ಪುಣೆಯ ಸೇನಾಸ್ಪತ್ರೆಯಲ್ಲಿ ನನಗೆ 3 ವರ್ಷ ನಿರಂತರ ಆರೈಕೆ ಮಾಡಿ, ಬದುಕುಳಿಯಲು ಮೂಲ ಕಾರಣರಾದ 2ನೇ ತಾಯಿ ರೂಪದ ಮೇಜರ್‌ ನರ್ಸ್‌ ಗೀತಾ ಅವರನ್ನು ಹುಡುಕದ ದಿನಗಳಿರಲಿಲ್ಲ. ಅವರಿಗಾಗಿ ಪುಣೆ, ಚಂಡೀಗಡ ಎಲ್ಲಾ ಕಡೆಯೂ ಹೋಗಿ ಬಂದಿದ್ದರು. ನಿವೃತ್ತಿಯಾದ ನರ್ಸ್‌ ಗೀತಾ ಅವರು, ಸದ್ಯ ಮೈಸೂರಿನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಅವರನ್ನು ಇದೇ ಜು.27ರಂದು ಮೈಸೂರಿನಲ್ಲಿ ಭೇಟಿಯಾಗಿ ಸೀರೆ-ಕುಪ್ಪಸ, ಶಾಲು ನೀಡಿ, ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ ಎಂದು ರಂಗಪ್ಪ ಕಣ್ಣಂಚಲಿ ನೀರು ತರುತ್ತ ಹೇಳಿಕೊಂಡರು.

 

•ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Bengaluru: ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Bengaluru: ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.