ಆರೋಗ್ಯಕರ ಶುದ್ಧ ಜೀವಜಲಕ್ಕೆ ತುಕ್ಕು!
ಈಡೇರದ ಸರ್ಕಾರದ ಆಶಯ•ಶುದ್ಧ ಕುಡಿವ ನೀರಿನ ಘಟಕಗಳು ಸ್ಥಗಿತ•ದುರಸ್ತಿಗೆ ತೋರುತ್ತಿಲ್ಲ ಕಾಳಜಿ
Team Udayavani, May 11, 2019, 11:07 AM IST
ಹುನಗುಂದ : ಪಟ್ಟಣದ ಬಸ್ ನಿಲ್ದಾಣದ ಪಕ್ಕದ ತರಕಾರಿ ಮಾರುಕಟ್ಟೆಯಲ್ಲಿ ಪುರಸಭೆ ಅನುದಾನದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು.
•ಮಲ್ಲಿಕಾರ್ಜುನ ಬಂಡರಗಲ್ಲ
ಹುನಗುಂದ: ನಗರ ಹಾಗೂ ಗ್ರಾಮೀಣ ಪ್ರದೇಶದ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಿದ ಆರೋಗ್ಯಕರ ಜೀವಜಲ (ಶುದ್ಧ ಕುಡಿಯುವ ನೀರಿನ ಘಟಕ) ಕೇಂದ್ರಗಳು ಸ್ಥಗಿತಗೊಂಡಿವೆ.
ಹೌದು, ಅಧಿಕಾರಿಗಳ ನಿರ್ಲಕ್ಷ್ಯ, ಘಟಕದ ಕಳಪೆ ಗುಣಮಟ್ಟದ ಸಾಮಗ್ರಿಗಳಿಂದ ಈ ಘಟಕಗಳು ಸ್ಥಗಿತಗೊಂಡಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಹುನಗುಂದ ತಾಲೂಕಿನಲ್ಲಿ ಪ್ಲೋರೈಡ್ ಮತ್ತು ಕಬ್ಬಿಣ ಲವಣಾಂಶಯುಕ್ತ ನೀರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆ ನೀರನ್ನು ಶುದ್ದೀಕರಿಸಿ, ಬಡವರಿಗೂ 2 ರೂ. ಗೆ 20 ಲೀಟರ್ ಶುದ್ಧ ನೀರು ಕೊಡುವ ಸದುದ್ದೇಶ ಘಟಕಗಳ ಸ್ಥಾಪನೆಯ ಹಿಂದೆ ಇತ್ತು. ಆದರೆ, ತಾಲೂಕಿನ ಬಹುತೇಕ ಘಟಕಗಳು, ಜನರಿಗೆ ಶುದ್ಧ ನೀರು ಕೊಡುವ ಬದಲು, ಪ್ರದರ್ಶನಕ್ಕಿವೆ ಎಂಬಂತಾಗಿದೆ ಎಂಬ ಮಾತು ಕೇಳಿ ಬಂದಿದೆ.
ನಮ್ಮ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಒಂದು ವರ್ಷ ಗತಿಸಿದರೂ ಹನಿ ನೀರು ಬರುತ್ತಿಲ್ಲ. ಘಟಕ ಸರಿಪಡಿಸುವಂತೆ ಗ್ರಾಮ ಪಂಚಾಯತಿಗೆ ಸಾಕಷ್ಟು ಬಾರಿ ಕೇಳಿಕೊಂಡರೂ ದುರಸ್ಥಿಮಾಡಿ, ಆರಂಭಿಸಿಲ್ಲ. ಗ್ರಾಮದ ಜನರು ಬಾವಿ ನೀರು ಕುಡಿಯುವುದು ಅನಿವಾರ್ಯವಾಗಿದೆ.
ಪ್ರತಿ ಘಟಕವನ್ನು ನಿರ್ಮಿಸಲು 5 ರಿಂದ 10 ಲಕ್ಷ ರೂ ಅನುದಾನದಡಿ ಘಟಕ ಸ್ಥಾಪಿಸಲಾಗಿದೆ. ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಗೆ ಒಂದರಂತೆ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಕೋಟ್ಯಾಂತರ ರೂ ಹಣ ಖರ್ಚು ಮಾಡಿದ್ದರೂ ಸ್ಥಳೀಯ ಅಧಿಕಾರಿಗಳ ಮತ್ತು ಘಟಕ ನಿರ್ವಹಣೆ ಸಮರ್ಪಕವಾಗಿ ಮಾಡದ ಹಿನ್ನೆಲೆಯಲ್ಲಿ ಅವು ಬಾಗಿಲು ಮುಚ್ಚಿವೆ.
10 ಘಟಕಗಳೇ ಸ್ಥಾಪಿಸಿಲ್ಲ: ತಾಲೂಕಿನ ಒಟ್ಟು 150 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಅದರಲ್ಲಿ 140 ಘಟಕಗಳು ಸ್ಥಾಪನೆಗೊಂಡಿವೆ. ಉಳಿದ 10 ಘಟಕಗಳನ್ನು ಈ ವರೆಗೆ ಸ್ಥಾಪಿಸಿಲ್ಲ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕೆಆರ್‌ಆಯ್‌ಡಿಎಲ್ (ಭೂಸೇನಾ ನಿಗಮ)ನಿಂದ 93 ಘಟಕಗಳ ಸ್ಥಾಪನೆಯ ಜವಾಬ್ದಾರಿ ಹೊತ್ತಿದ್ದು, ಅದರಲ್ಲಿ 86 ಘಟಕ ಮಾತ್ರ ನಿರ್ಮಿಸಲಾಗಿದೆ. ಸ್ಥಾಪನೆಗೊಂಡ ಘಟಕಗಳಲ್ಲೂ 31 ಶುದ್ಧ ನೀರಿನ ಘಟಕಗಳ ಯಂತ್ರಗಳು ಕೆಟ್ಟಿದ್ದು, ನೀರು ಕೊಡುವುದು ನಿಲ್ಲಿಸಿವೆ. ಇನ್ನು 5 ಘಟಕಗಳು ನೀರಿನ ತೊಂದರೆ ಮತ್ತು ವಿದ್ಯುತ್ ಸಮಸ್ಯೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಕೇವಲ 50 ಘಟಕಗಳು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. 13 ಘಟಕಗಳು ಅರ್ಧದಲ್ಲಿ ನಿಂತು ಹೋಗಿವೆ.
ಇನ್ನು ಗ್ರಾಮೀಣ ಪ್ರದೇಶದ ಜನರು ಎರಡು ಮೂರು ಕಿ.ಮೀ ನಡೆದುಕೊಂಡು ಹೋಗಿ ಅಶುದ್ದ ನೀರು ತಂದು ಕುಡಿಯುತ್ತಿದ್ದರೆ, ನಗರ ಪ್ರದೇಶದ ಜನರು ತಮ್ಮ ವಾರ್ಡ್‌ಗಳಲ್ಲಿ ಶುದ್ದ ನೀರಿನ ಘಟಕ ಬಂದ್ ಇರುವುದರಿಂದ ಖಾಸಗಿ ಘಟಕಗಳಿಂದ 25 ರಿಂದ 30 ರೂ ಹಣ ಕೊಟ್ಟು 20 ಲೀಟರ್ ನೀರು ಖರೀದಿಸಿ, ಕುಡಿಯುವ ಪರಸ್ಥಿತಿ ಬಂದಿದೆ.
•ಮಲ್ಲಿಕಾರ್ಜುನ ಬಂಡರಗಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್ ದೇಶಕ್ಕೆ ರಫ್ತು!
ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ
Rabakavi: ರೈತರ ಬದುಕಿನ ರೊಟ್ಟಿಯನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಶಾಸಕ ಸಿದ್ದು ಸವದಿ
Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.