ಉ.ಕ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಸೂರು!
Team Udayavani, Aug 21, 2018, 6:00 AM IST
ಹುನಗುಂದ: ವರುಣನ ಆರ್ಭಟಕ್ಕೆ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಸಾವು, ನೋವಿಗೆ ರಾಜ್ಯದ ಜನ ಮಿಡಿದ ಪರಿ ಶ್ಲಾಘನಾರ್ಹ. ನೊಂದ ಜೀವಗಳಿಗೆ ಸರ್ಕಾರ ಅಭಯ ನೀಡಿ ಧೈರ್ಯ ತುಂಬಿದೆ. ಅಂತಹದ್ದೇ ಸ್ಥಿತಿ 2009ರಲ್ಲಿ ಉತ್ತರ ಕರ್ನಾಟಕದಲ್ಲೂ ಎದುರಾಗಿತ್ತು. ಬದುಕು ಛಿದ್ರವಾಗಿ ಜನ ಕಂಗಾಲಾಗಿದ್ದರು. ಅಂದು ನೀರಿನಲ್ಲಿ ಮುಳುಗಿದ ಊರುಗಳ ಜನರು ಈಗಲೂ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದಾರೆ!
2009ರಲ್ಲಿ ಮಹಾಮಳೆಗೆ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿದಿದ್ದವು. ನದಿಗಳ ರಭಸದ ಹರಿವಿನ ಜತೆಗೆ 2 ತಿಂಗಳ ಕಾಲ ಎಡಬಿಡದೆ ಸುರಿದ ಮಳೆಗೆ ಬಾಗಲಕೋಟೆ, ಗದಗ, ವಿಜಯಪುರ, ಬೆಳಗಾವಿ, ಯಾದಗಿರಿ, ರಾಯಚೂರು ಜಿಲ್ಲೆಗಳು ನಲುಗಿದ್ದವು. ನಾರಾಯಣಪುರ ಹಿನ್ನೀರಿನಿಂದ ಹುನಗುಂದ ತಾಲೂಕಿನ ಕೆಂಗಲಕಡಪಟ್ಟಿ-236, ಬಿಸನಾಳ-121, ಬಿಸನಾಳಕೊಪ್ಪ-183, ಕಮದತ್ತ-121, ಎಮ್ಮೆಟ್ಟಿ-259, ಖಜಗಲ್-126, ವರಗೋಡದಿನ್ನಿ-313, ಅಡಿಹಾಳ-407, ಅನಪಕಟ್ಟಿ-384, ಕೆಸರಪೆಂಟಿ-114, ಇದ್ದಲಗಿ-1136 ಸೇರಿ ಒಟ್ಟು 3,432 ಮನೆಗಳು ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿದ್ದವು. ಈ ಎಲ್ಲ ಮನೆಗಳ ಸಂತ್ರಸ್ತರಿಗೆ ಆಯಾ ಗ್ರಾಮಗಳ ಪಕ್ಕದಲ್ಲೇ ಜಿಲ್ಲಾಡಳಿತ ತಾತ್ಕಾಲಿಕ ಶೆಡ್ ನಿರ್ಮಿಸಿ ಆಶ್ರಯ ಒದಗಿಸಿತ್ತು. ಆದರೆ, ಸರ್ಕಾರದ ಗೊಂದಲದ ನೀತಿಯಿಂದ ಇಂದಿಗೂ ವಾಸಿಸಲು ಶಾಶ್ವತ ಮನೆ ಕಲ್ಪಿಸಿಲ್ಲ. ತಾತ್ಕಾಲಿಕ ಶೆಡ್‌ನಲ್ಲಿ ಕಾಯಂ ವಾಸವಾಗಿದ್ದಾರೆ.
ಭೂಸ್ವಾಧೀನದಲ್ಲೇ ಕಾಲ ಕಳೆದರು:
ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕೈಗೊಳ್ಳಲು ಕಂದಾಯ ಇಲಾಖೆಗೆ ಸೂಚಿಸಿತ್ತು. 2009ರಿಂದ 2013ರವರೆಗೆ ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಿದ ಜಾಗೆಯಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡಲು ಭೂಸ್ವಾಧೀನ ಪ್ರಕ್ರಿಯೆಯಲ್ಲೇ ಕಾಲ ಕಳೆದಿತ್ತು.
ಹಲವು ಹೋರಾಟ, ಸಂತ್ರಸ್ತರ ಒತ್ತಾಯದ ಬಳಿಕ ಸರ್ಕಾರ ಈ ಗ್ರಾಮಗಳ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಹೊಣೆಯನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಚೇರಿಗೆ ವಹಿಸಿತು. ಆಗ ಈ ಇಲಾಖೆಯಿಂದ ಮತ್ತೆ ಮೊದಲಿನಿಂದ ಕೆಲಸ ಆರಂಭಿಸಿತು. ಹೀಗಾಗಿ 8 ವರ್ಷ ಕಳೆದರೂ ಅವರೆಲ್ಲ ಸರ್ಕಾರದ ಸೂರು ಕಾಣದೇ ಶೆಡ್‌ನಲ್ಲಿ ವಾಸಿಸುವ ಪರಿಸ್ಥಿತಿ ಬಂದೋದಗಿದೆ. ಸದ್ಯ ಕೊಡಗು ಜಿಲ್ಲೆಯಲ್ಲಿನ ಸ್ಥಿತಿ ಕಂಡು 8 ವರ್ಷಗಳ ಹಿಂದಿನ ಕಹಿ ಅನುಭವ ನೆನಪಿಗೆ ಬರುತ್ತಿದೆ. ಸೂರು ಕಲ್ಪಿಸುವುದಾಗಿ ಹೇಳಿದ್ದ ಸರ್ಕಾರ ಇಂದಿಗೂ ಶೆಡ್‌ನಲ್ಲೇ ಬಿಟ್ಟಿದ್ದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆಗೆ ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರಿಂದ ತಡವಾಗಿದೆ. ಸದ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ನಿವೇಶನ ಅಭಿವೃದ್ಧಿಪಡಿಸುವ ಕೆಲಸ ನಡೆದಿದೆ.
– ಪಿ.ಎ. ಮೇಘಣ್ಣವರ, ಆಯುಕ್ತರು, ಯುಕೆಪಿ
– ಮಲ್ಲಿಕಾರ್ಜುನ ಬಂಡರಗಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.