ಚಿತ್ತಾ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ
Team Udayavani, Oct 22, 2019, 12:49 PM IST
ಮಹಾಲಿಂಗಪುರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಒಂಭತ್ತು ಗ್ರಾಮಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರವಿವಾರ ಮಹಾಲಿಂಗಪುರದಲ್ಲಿ 135.4 ಸೆ.ಮಿ ಮಳೆಯಾಗಿದೆ.
ಧರೆಗುರುಳಿದ ಮರಗಳು: ನಿರಂತರ ಮಳೆಯಿಂದಾಗಿ ಮಹಾಲಿಂಗಪುರ, ಬೆಳಗಲಿ, ಬಿಸನಾಳ, ಢವಳೇಶ್ವರ, ಮಾರಾಪುರ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲಿನ ಮತ್ತು ಹೊಲಗದ್ದೆಗಳಲ್ಲಿ ಮರಗಳುನೆಲಕ್ಕುರುಳಿವೆ. ಇದರಿಂದಾಗಿ ಹಲವಡೆ ಸಂಚಾರಕ್ಕೆ ತೊಂದರೆಯಾಗಿದೆ.
ಮನೆಗಳಿಗೆ ನುಗ್ಗಿದ ನೀರು: ಪಟ್ಟಣದ ಸಿದ್ದ ಸರೋವರದ ಕೆರೆ ತುಂಬಿ ನೀರು ಚರಂಡಿಗೆ ಹರಿದ ಪರಿಣಾಮವಾಗಿ ಚಿಮ್ಮಡ ಗಲ್ಲಿಯಲ್ಲಿ 20ಕ್ಕೂ ಅಧಿ ಕ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಮನೆಯ ಸಾಮಾನುಗಳ ರಕ್ಷಣೆಗಾಗಿ ಪರದಾಡಿದರು.
ಬಿದ್ದ ಮನೆಗಳು: ವಿವಿಧ ವಾರ್ಡ್‌ಗಳಲ್ಲಿ ಹತ್ತಕ್ಕೂ ಅಧಿಕ ಮನೆಗಳು ಬಿದ್ದಿವೆ. ವಿಪರೀತ ಮಳೆಯ ಕಾರಣ ಬಹುತೇಕ ಚರಂಡಿಗಳು ತುಂಬಿ, ರಸ್ತೆಗಳ ಮೇಲೆ ನೀರು ಹರಿದ ಕಾರಣ ಸಾರ್ವಜನಿಕರು ಪರದಾಡಿದರು.
ರನ್ನಬೆಳಗಲಿಯಲ್ಲಿ ಆವಾಂತರ: ನೆರೆಯ ರನ್ನಬೆಳಗಲಿಯಲ್ಲಿ ಹಳ್ಳದ ನೀರು ತುಂಬಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಅಂಗನವಾಡಿಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿವೆ. ಪಟ್ಟಣದ ಹನುಮಾನ ದೇವಸ್ಥಾನದಿಂದ ಹಿಡಿದು-ಯಲ್ಲಮ್ಮ ದೇವಸ್ಥಾನದವರೆಗಿನ ರಸ್ತೆಯ ಮೇಲೆ ಹಳ್ಳದ ನೀರು ಹೊಳೆಯಂತೆ ಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯುಂಟಾಗಿದೆ. ಪಟ್ಟಣದಲ್ಲಿ ಸಿಮೆಂಟ್ ಅಂಗಡಿ, ದಾಬಾ, ಬ್ಯಾಂಕ್, ಅಂಗನವಾಡಿ ಕಟ್ಟಡಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಅಪಾರ ಬೆಳೆ ನಾಶ: ನಿರಂತರ ಮಳೆಯಿಂದಾಗಿ ಈ ಭಾಗದಲ್ಲಿನ ಕಬ್ಬು, ಗೋವಿನ ಜೋಳ, ಅರಿಶಿನ, ಕಾಯಿಪಲ್ಲೆ ಸೇರಿದಂತೆ ಎಲ್ಲ ಬೆಳೆಗಳು ಜಲಾವೃತವಾಗಿವೆ.
ರಸ್ತೆಗಳು ಬಂದ್: ನಿರಂತರ ಮಳೆಯ ಪರಿಣಾಮ ಹಳ್ಳಗಳು ತುಂಬಿ ಹರಿದ ಪರಿಣಾಮ ಕೆಸರಗೊಪ್ಪ-ಹಂದಿಗುಂದ, ಮಹಾಲಿಂಗಪುರ-ಅಕ್ಕಿಮರಡಿ ರಸ್ತೆಗಳು ಬಂದ್ ಆಗಿ ಉಭಯ ಗ್ರಾಮಗಳ ಸಂಪರ್ಕ ಕಡಿತವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.