Special Story: ಬನಹಟ್ಟಿ ಕಾಡಸಿದ್ಧೇಶ್ವರ ರಥಕ್ಕೆ 154 ವರ್ಷದ ಇತಿಹಾಸ …!

ಅ. 3 ರಂದು ರಥೋತ್ಸವದಲ್ಲಿ ಪಾಲ್ಗೊಳ್ಳಲಿರುವ 154 ವರ್ಷಗಳ ಇತಿಹಾಸದ ರಥ

Team Udayavani, Oct 1, 2023, 11:35 AM IST

5-banahatti

ರಬಕವಿ-ಬನಹಟ್ಟಿ: ಪುರಾತನ ವಸ್ತು, ಹಳೆಯ ಕಾಲದ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹಲವರಿಗೆ ಬಹಳಷ್ಟಿದೆ. ಅಂತೆಯೇ ಇದೇ ಅ.3 ರಂದು ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರೆಯಂದು ಪಾಲ್ಗೋಳ್ಳುವ ರಥಕ್ಕೆ 153 ವರ್ಷಗಳ ಇತಿಹಾಸ.

ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆಯಂದು ನಡೆಯುವ ರಥೋತ್ಸವ ಕಾರ್ಯಕ್ರಮ ಆಕರ್ಷಣೀಯ ಹಾಗೂ ಮನಮೋಹಕವಾದುದು. ಈ ರಥೋತ್ಸವಕ್ಕೆ ಮೆರಗು ತರುವುದು ಇಲ್ಲಿರುವ ಭವ್ಯವಾದ ರಥ. ಬಹುಶಃ ಇಂಥ ರಥ ಉತ್ತರ ಕರ್ನಾಟಕದಲ್ಲಿ ನೋಡಲು ಸಹಿತ ಸಿಗುವುದಿಲ್ಲ. ಈ ರಥವನ್ನು ಜಮಖಂಡಿ ಸಂಸ್ಥಾನದ ಮಹಾರಾಜರಾಗಿದ್ದ ಪರಶುರಾಮಭಾವು ಶಂಕರರಾವ ಪಟವರ್ಧನ ಸರ್ಕಾರ ಇವರು ಬನಹಟ್ಟಿಯ ಮಂಗಳವಾರ ಪೇಟೆ ದೈವ ಮಂಡಳಿಗೆ ಕಾಣಿಕೆಯನ್ನಾಗಿ ನೀಡಿದ್ದರು.

ಉತ್ತರ ಕರ್ನಾಟಕದಲ್ಲಿಯೇ ಇಷ್ಟು ಹಳೆಯ ರಥ ಬೇರೊಂದು ಇರಲಿಕ್ಕಿಲ್ಲ ಎನ್ನಿಸುತ್ತದೆ. ಅದು ಶ್ರೀ ಕಾಡಸಿದ್ದೇಶ್ವರರ ಕರುಣೆಯೇ ಸರಿ. ಅದು ಇನ್ನೂ ಸುಭದ್ರವಾಗಿ ಪ್ರತಿ ವರ್ಷ ಜಾತ್ರೆಯನ್ನು ಮಾಡುತ್ತಿದೆ.

ಹಿನ್ನಲೆ :

ಜಾತ್ರೆಯ ಸಂದರ್ಭದಲ್ಲಿ ರಥದ ಕೊರತೆಯಿದ್ದಾಗ ಜಮಖಂಡಿಯ ಮಹಾರಾಜರು ರಥವನ್ನು ಕಾಡಸಿದ್ಧೇಶ್ವರ ಜಾತ್ರೆಯ ಸಂದರ್ಭದಲ್ಲಿ ಜರಗುವ ರಥೋತ್ಸವಕ್ಕೆ ಮಾತ್ರ ಉಪಯೋಗಿಸಬೇಕೆಂದು ಅದನ್ನು ತರುವ ಕಾಲಕ್ಕೆ ಬನಹಟ್ಟಿಯ ಹಿರಿಯರಿಂದ ಕರಾರು ಪತ್ರ ಬರೆಯಿಸಿಕೊಂಡು ನೀಡಿದ್ದರು. ಅದರಂತೆ ಸ್ಥಳಿಯರು ಈಗಲೂ ಅದನ್ನು ಕೇವಲ ರಥೋತ್ಸವಕ್ಕೆ ಮಾತ್ರ ಬಳಸುತ್ತಾ ಬಂದಿದ್ದಾರೆ.

ಈ ಕರಾರು ಪತ್ರವನ್ನು ಅಂದಿನ ಮಂಗಳವಾರ ಪೇಟೆಯ ದೈವದ ಮಂಡಳದ ಅಧ್ಯಕ್ಷರಾಗಿದ್ದ ಚ. ಚ. ಅಬಕಾರ ಬರೆದು ಕೊಟ್ಟು ಅದನ್ನು 1949 ಆಗಸ್ಟ್‌ 23 ರಂದು ವಶಕ್ಕೆ ತೆಗೆದುಕೊಂಡಿದ್ದರು. ಇಂದು ರಥ ಬನಹಟ್ಟಿಗೆ ಬಂದು 74 ವರ್ಷ ಗತಿಸಿವೆ.

ಅಂದಿನಿಂದ ಇಂದಿನವರೆಗೂ ಈ ರಥವನ್ನು ಶ್ರೀ ಕಾಡಸಿದ್ಧೇಶ್ವರ ಜಾತ್ರೆಯ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ನೋಡಿದವರಲ್ಲಿ ಭಕ್ತಿಭಾವ ಸ್ಮರಿಸುತ್ತದೆ.

ರಥವನ್ನು ಬನಹಟ್ಟಿಗೆ ತಂದ ನಂತರ ಅಂದಿನ ದೈವ ಮಂಡಳಿಯ ಅಧ್ಯಕ್ಷ ಚ. ಚ. ಅಬಕಾರ ಅವರು ದಿನಾಂಕ 1949 ಆಗಸ್ಟ್‌ 31 ರಂದು ಪ್ರಕಟಗೊಳ್ಳುತ್ತಿದ್ದ ನವಯುಗ ಪತ್ರಿಕೆಯ ಮೂಲಕ ಸಮಸ್ತ ಬನಹಟ್ಟಿ ನಾಗರೀಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದ್ದರು.

ಆ ಒಂದು ಒಕ್ಕಣಿಯಂತೆ ಇದು ಜಮಖಂಡಿ ಮಹಾರಾಜರ ರಾಜವಾಡೆಯ ವಸ್ತು ಸಂಗ್ರಹಾಲಯದಲ್ಲಿದ್ದ ಬಹುಮುಖ್ಯ ಆಸ್ತಿಗಳಲ್ಲಿ ಒಂದಾದ ಸೀಸವೆ ಕಟ್ಟಿಗೆಯಿಂದ ನಿರ್ಮಿಸಿದ ಸುಮಾರು ಎಂಬತ್ತು ವರ್ಷದಷ್ಟು ಹಳೆಯದಾದ ರಥ ಎಂದು ತಿಳಿಸಿದ್ದಾರೆ. ಇದರ ಪ್ರಕಾರ 80 ಮತ್ತು 74 ಸೇರಿದಾಗ ಈ ರಥಕ್ಕೆ ಒಟ್ಟು ಅಂದಾಜು 154 ವರ್ಷ ಇತಿಹಾಸವಿದೆ ಎಂದು ಹೇಳಬಹುದಾಗಿದೆ.

ಈ ರೀತಿಯಾದ ರಥಗಳು ನಮಗೆ ಸಿಗುವುದು ಅಪರೂಪ. ಇವು ಸದ್ಯ ಗೋಕಾಕ ಹಾಗೂ ಜಮಖಂಡಿಯ ರಾಮತೀರ್ಥದಲ್ಲಿ ಮಾತ್ರ ಇದ್ದು, ಅದರಲ್ಲೂ ಬನಹಟ್ಟಿಯಲ್ಲಿರುವ ಈ ರಥ ಅವೆರಡಕ್ಕಿಂತಲೂ ದೊಡ್ಡದಾಗಿದೆ. ಇದು ಗಡ್ಡಿ ತೇರಿನ ಲಕ್ಷಣಗಳನ್ನು ಹೊಂದಿದ್ದು ಅಪರೂಪದ ತೇರಾ(ರಥ)ಗಿದೆ.

ನಾವು ಹೆಚ್ಚಾಗಿ ಮಂಟಪ ತೇರುಗಳನ್ನು ಕಾಣುತ್ತೇವೆ. ಗಡ್ಡಿ ತೇರುಗಳ ಅದಿಷ್ಠಾನ ಭಾಗಗಳಲ್ಲಿ ಶಕ್ತಿಯುತ್ತ ಪ್ರಾಣಿಗಳ ಚಿತ್ರವಿರುತ್ತದೆ, ಮಂಟಪ ಭಾಗದಲ್ಲಿ ಮೂರ್ತಿ ಸ್ಥಾಪಿಸುತ್ತಾರೆ, ಗೋಪುರ ಮತ್ತು ಕಳಸಭಾಗವನ್ನು ಇದು ಹೊಂದಿದ್ದು, ದೇವಸ್ಥಾನದ ಲಕ್ಷಣಗಳನ್ನು ಹೊಂದಿರುತ್ತವೆ. ಈ ಎಲ್ಲ ಬಹುತೇಕ ಲಕ್ಷಣಗಳು ಜಮಖಂಡಿಯ ಮಹಾರಾಜರು ಕೊಟ್ಟಂತಹ ಬನಹಟ್ಟಿಯ ಈ ರಥ ಹೊಂದಿದೆ. ಇದು ರಾಜ ಮಹಾರಾಜರ ರಥದ ಶೈಲಿಯನ್ನು ಹೊಂದಿದ್ದು, ದೇವಸ್ಥಾನದ ವಿನ್ಯಾಸದಂತೆ ಈ ರಥ ನಿರ್ಮಾಣವಾಗಿದೆ.

ವಿಶೇಷವಾಗಿ ಇದು ರಾಜಮಹಾರಾಜರು ತಮ್ಮ ಅನುಕೂಲಕ್ಕಾಗಿ ನಿರ್ಮಿಸಿದ್ದು, ಜಮಖಂಡಿಯ ಪಟವರ್ಧನ ಮಹಾರಾಜರು ಇದೇ ರಥದಲ್ಲಿ ಗಣೇಶ ಮೂರ್ತಿಯನ್ನು ಇಟ್ಟು ಗಣೇಶೋತ್ಸವದಲ್ಲಿ ಮೆರವಣಿಗೆ ಮಾಡುತ್ತಿದ್ದರು’ ಎಂದು ಉತ್ತರ ಕರ್ನಾಟಕದ ರಥಗಳ ಕುರಿತು ಸಂಶೋಧನೆ ಮಾಡಿದ ಡಾ. ಶಿವಪ್ರಕಾಶ ತುಕ್ಕಣ್ಣವರ ಅಭಿಪ್ರಾಯಪಡುತ್ತಾರೆ.

ಇದೊಂದು ಅತ್ಯಂತ ಹಳೆಯದಾದ ರಥವಾಗಿದೆ. ಇದನ್ನೂ ನೋಡಲು ಬಹಳಷ್ಟು ದೂರದಿಂದ ಭಕ್ತಾಧಿಗಳು ಆಗಮಿಸುತ್ತಾರೆ  -ಶ್ರೀಶೈಲ ಧಬಾಡಿ ಚೇರಮನ್ನರು, ಮಂಗಳವಾರ ಪೇಟೆ ಹಟಗಾರ ದೈವ ಮಂಡಳ, ಬನಹಟ್ಟಿ

ಜಾತ್ರೆಯ ಸಂದರ್ಭದಲ್ಲಿ ಬಣ್ಣ ಹಾಗೂ ದೀಪಾಲಂಕಾರಗಳಿAದ ಭಕ್ತರು ಕಟ್ಟಿದ ಕಂಠಮಾಲೆ ಮತ್ತು ಹೂ ಮಾಲೆಗಳಿಂದ ಶೃಂಗರಿಸಲ್ಪಡುವ ರಥ ನೋಡುಗರ ಕಣ್ಮಣ ಸೆಳೆಯುತ್ತದೆ. ನೋಡಲು ಬರುವ ಭಕ್ತರ ಭಾವ ಉಕ್ಕಿ ಬರುತ್ತದೆ. ಐತಿಹಾಸಿಕ ಹಿನ್ನಲೆಯ ರಥವು ಇಂದಿನ ಜನತೆಗೆ ಇತಿಹಾಸದ ಅನೇಕ ಸಂಗತಿಗಳನ್ನು ತಿಳಿಸುತ್ತಿದೆ. ಈ ರಥ ನಿಜವಾಗಿಯೂ ಶ್ರೀ ಕಾಡಸಿದ್ದೇಶ್ವರ ಜಾತ್ರೆಗೆ ಒಂದು ಹೆಮ್ಮೆಯೇ ಸರಿ.

-ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.