ಆಧುನಿಕತೆ ಬಳಸಿ ಕಲೆಗೆ ರೂಪ ನೀಡಿದ ಕಲಾಕಾರರು;ಬನಹಟ್ಟಿಯಲ್ಲಿ ವೈವಿದ್ಯಮಯ ಕಾಮಣ್ಣನ ಮೂರ್ತಿಗಳು

Team Udayavani, Mar 15, 2022, 7:11 PM IST

ಆಧುನಿಕತೆ ಬಳಸಿ ಕಲೆಗೆ ರೂಪ ನೀಡಿದ ಕಲಾಕಾರರು;ಬನಹಟ್ಟಿಯಲ್ಲಿ ವೈವಿದ್ಯಮಯ ಕಾಮಣ್ಣನ ಮೂರ್ತಿಗಳು

ರಬಕವಿ-ಬನಹಟ್ಟಿ : ಹೋಳಿ ಹುಣ್ಣಿಮೆ ಎಂದರೆ ಗಂಡು ಮಕ್ಕಳಿಗೆ ಎಲ್ಲಿಲ್ಲದ ಸಂತಸದ ಹಬ್ಬ. ಅಂತೆಯೇ ಕಾಮಣ್ಣ ಪ್ರತಿವರ್ಷ ಒಂದಿಲ್ಲೊಂದು ವೇಷದಲ್ಲಿ ವಿಶೇಷವಾಗಿ ಕಾಣಬೇಕೆನ್ನುವುದು ಅವರ ಹಂಬಲ ಅಂತೆಯೇ ಇಂದಿನ ಆಧುನಿಕತೆಯ ದಿನಗಳಲ್ಲಿ ಇದರ ಪ್ರಭಾವ ನಮ್ಮ ಹಬ್ಬ ಹರಿದಿನಗಳ ಮೇಲೂ ಬೀರಿದೆ ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಕರೆ ಅವರ ಮನೆಯಲ್ಲಿ ತಯಾರಾದ ವೈವಿಧ್ಯಮಯವಾದ ಕಾಮಣ್ಣನ ವಿಗ್ರಹಗಳು ಸಾಕ್ಷಿ.

ಸ್ಥಳೀಯ ನಾರಾಯಣ ಬಕರೆ ಮನೆಯ ಸದಸ್ಯರು ಆರು ದಶಕಗಳಿಂದ ಕಾಮಣ್ಣನ ವಿಗ್ರಹಗಳನ್ನು ಮಾಡುತ್ತ ಬಂದಿದ್ದಾರೆ. ಬಕರೆ ಕುಟುಂಬದವರು ತಯಾರಿಸಿದ ಕಾಮಣ್ಣಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ.  ಯುದ್ದ ಭೂಮಿಯಲ್ಲಿನ ಕಾಮಣ್ಣ, ಜೋಕಾಲಿ ಆಡುತ್ತಿರುವ ಕಾಮಣ್ಣ, ಮೊಸಳೆ ಮೇಲೆ ಕುಳಿತ ಕಾಮಣ್ಣ, ದ್ವಿಚಕ್ರ ವಾಹನದ ಮೇಲೆ ಕುಳಿತ ಕಾಮಣ್ಣ, ಹುಂಜದ ಮೇಲೆ ಕುಳಿತ ಕಾಮಣ್ಣ ಮತ್ತು ಅದೇ ರೀತಿಯಾಗಿ ವಿವಿಧ ಪ್ರಾಣಿಗಳ ಮೇಲೆ ಕುಳಿತ ಕಾಮಣ್ಣನ ವಿಗ್ರಹಗಳು ಆಕರ್ಷಣೀಯವಾಗಿವೆ.  ಆಧುನಿಕತೆಗೆ ತಕ್ಕಂತೆ ಜನರನ್ನು ವಿವಿಧ ಆಕಾರಗಳಲ್ಲಿ ಕಾಮಣ್ಣನ ಮೂರ್ತಿಗಳು ಆಕರ್ಷಿಸುತ್ತಿವೆ.

ಪ್ರತಿ ವರ್ಷ 250 ರಿಂದ 300 ವಿಗ್ರಹಗಳನ್ನು ಮಾಡುತ್ತಿದ್ದ ಸಂಜಯ ಮತ್ತು ನಿತ್ಯಾನಂದ  ಬಕರೆ ಸಹೋದರರು ಈ ಬಾರಿ 400 ಕ್ಕೂ ಹೆಚ್ಚು ವಿಗ್ರಹಗಳನ್ನು ತಯಾರು ಮಾಡಿದ್ದಾರೆ. ಈ ಬಾರಿ ಕಾಮಣ್ಣನ ಮೂರ್ತಿಗಳಿಗೆ ಬೇಡಿಕೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಒಂದು ತಿಂಗಳುಗಳಿಂದ ಈ ವಿಗ್ರಹಗಳನ್ನು ಮಾಡುತ್ತಿದ್ದು, ಈಗ ಬಣ್ಣಗಳನ್ನು ನೀಡಲಾಗುತ್ತಿದೆ ಬಕರೆ ಕುಟುಂಬದವರು ಪತ್ರಿಕೆಗೆ ತಿಳಿಸಿದರು.

ರೂ. 100 ನಿಂದ ಆರಂಭವಾಗುವ ಕಾಮಣ್ಣನ ವಿಗ್ರಹಗಳು ರೂ. 550 ಬೆಲೆಯ ವಿಗ್ರಹಗಳನ್ನು ಅವರು ತಯಾರು ಮಾಡಿದ್ದಾರೆ. ಮಣ್ಣಿನ ಮೂರ್ತಿಗಳಿಗೆ ನೈಸರ್ಗಿಕ ಬಣ್ಣಗಳನ್ನು ನೀಡುತ್ತಿದ್ದಾರೆ.

ಆರೇಳು ವರ್ಷದ ಹಿಂದೆ ಒಂದೇ ನಮೂನೆಯ ವಿಗ್ರಹಗಳನ್ನು ಮಾಡುತ್ತಿದ್ದೇವು. ಆದರೆ ಇಂದಿನ ಯುವಕರು ವಿಶಿಷ್ಠವಾದ ಕಾಮಣ್ಣನ ವಿಗ್ರಹಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಆಧುನಿಕ ಯುವಕ ಬೇಡಿಕೆಯಂತೆ ವೈವಿಧ್ಯಮಯವಾದ ಕಾಮಣ್ಣನ ವಿಗ್ರಹಗಳನ್ನು ಮಾಡುತ್ತಿದ್ದೇವೆ ಎನ್ನುತ್ತಾರೆ ಬಕರೆ ಕುಟುಂಬದವರು.

ಇಂತಹ ಮೂರ್ತಿ ಮಾಡುವ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಬಕರೆ ಕುಟುಂಬ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿ ಹಾಗೂ ವಿವಿಧ ಮೂರ್ತಿಗಳನ್ನು ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

– ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಹೊಲ ಮಾರಿದ ಹಣ ಕಳ್ಕೊಂಡ ದಂಪತಿ; ಮೀಸೋ ಆ್ಯಪ್‌ ಹೆಸರಿನಲ್ಲಿ ದಂಪತಿಗೆ ನಾಮ!

ಹೊಲ ಮಾರಿದ ಹಣ ಕಳ್ಕೊಂಡ ದಂಪತಿ; ಮೀಶೋ ಆ್ಯಪ್‌ ಹೆಸರಿನಲ್ಲಿ ದಂಪತಿಗೆ ನಾಮ!

2

Mudhol: ಸಾಲಬಾಧೆಯಿಂದ ರೈತ ಆತ್ಮಹ*ತ್ಯೆ

1-dee

Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ

ರಬಕವಿ-ಬನಹಟ್ಟಿ: ಜಗದಾಳ ರೈತನ ಬಾಳೆಹಣ್ಣು ಇರಾನ್‌ ದೇಶಕ್ಕೆ ರಫ್ತು

ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್‌ ದೇಶಕ್ಕೆ ರಫ್ತು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.