National Track Cycling ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದ ಹೊನ್ನಪ್ಪ ಧರ್ಮಟ್ಟಿ


Team Udayavani, Oct 9, 2023, 11:03 PM IST

1-sds

ಮಹಾಲಿಂಗಪುರ: ಸಾಧಿಸಿಬೇಕೆಂಬ ಛಲ, ಕಠಿಣ ಪರಿಶ್ರಮವಿದ್ದವರಿಗೆ ವಯಸ್ಸು, ಪ್ರದೇಶ, ಅನುಭವಗಳ ಹಂಗಿಲ್ಲದೇ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಲ್ಲರೂ ಎಂಬುದಕ್ಕೆ ಉತ್ತಮ ಉದಾಹರಣೆಯಾದ ಯುವಪ್ರತಿಭೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಸಮೀಪದ ಮಾರಾಪೂರ ಎಂಬ ಪುಟ್ಟ ಗ್ರಾಮದ ಉದಯೋನ್ಮುಖ ಸೈಕ್ಲಿಂಗ್ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ.

ಮಾರಾಪೂರ ಗ್ರಾಮದ ಉದಯೋನ್ಮುಖ ಸೈಕ್ಲಿಂಗ್ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ  ಅ.8ರಂದು ಬೆಳಗಾವಿ ಜಿಲ್ಲೆ ಚಂದರಗಿ ಕ್ರೀಡಾವಸತಿ ಸಾಲೆಯಲ್ಲಿ ಜರುಗಿದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಆಯ್ಕೆಯ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಹಲವು ಕ್ರೀಡಾಶಾಲೆಗಳ ಒಟ್ಟು 19 ಬಾಲಕರಲ್ಲಿ ಕೇವಲ 1 ನಿಮಿಷ 21 ಸೆಕೆಂಡ್‌ಗಳಲ್ಲಿ 1.ಕೀಮಿ ಕ್ರಮಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟçಮಟ್ಟದ ಟ್ರಾಕ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಇದೇ ಅ 30ರಿಂದ ನವೆಂಬರ್ 3ರವರೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ರಾಷ್ಟçಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನಡೆಯಲಿವೆ.

ಉದಯೋನ್ಮುಖ ಗ್ರಾಮೀಣ ಪ್ರತಿಭೆ
ಬಾಗಲಕೋಟೆ ಜಿಲ್ಲೆಯ ಗಡಿಗ್ರಾಮ ಮಾರಾಪೂರದ ಮಧ್ಯಮ ಕುಟುಂಬದ ಚಿದಾನಂದ ಮತ್ತು ಶಾಂತಾ ಧರ್ಮಟ್ಟಿ ದಂಪತಿಗಳ ಪುತ್ರನಾದ ಹೊನ್ನಪ್ಪ ಸದ್ಯ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ. ಅಪ್ಪಟ ಗ್ರಾಮೀಣ ಭಾಗದ ಯುವಪ್ರತಿಭೆ ಹೊನ್ನಪ್ಪ 1 ರಿಂದ 5ನೇ ತರಗತಿವರೆಗೆ ಸೈದಾಪೂರ-ಸಮೀರವಾಡಿಯ ಸೋಮೈಯಾ ಸಿಬಿಎಸ್‌ಸಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ನಂತರ 6ನೇ ತರಗತಿಯಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಯಾಣ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದಾನೆ. ಮೊದಲಿನಿಂದಲೂ ಬ್ಯಾಟ್ಮಿಟನ್ ಆಟದಲ್ಲಿ ಆಸಕ್ತಿ ಹೊಂದಿದ್ದರು ಸಹ, ಕೋವಿಡ್ ಕಾರಣ ಎರಡು ವರ್ಷ ಯಾವುದೇ ಸ್ಪರ್ಧೆಗಳು ನಡೆಯದಿರುವದು ಹಾಗೂ ಸರಿಯಾದ ಕೋಚ್ ಸಿಗದ ಕಾರಣ ಅನಿವಾರ್ಯವಾಗಿ ಕಳೆದ ಒಂದುವರೆ ವರ್ಷದಿಂದ ಸೈಕ್ಲಿಂಗ್ ತರಬೇತಿಯನ್ನು ಪಡೆಯುತ್ತಿದ್ದಾನೆ.

ಒಂದುವರೆ ವರ್ಷದ ಸೈಕ್ಲಿಂಗ್ ಸಾಧನೆ
8ನೇ ತರಗತಿಯಲ್ಲಿ ಓದುತ್ತಿದ್ದಾಗ, 2022ರ ಜುಲೈ ತಿಂಗಳಿನಿಂದ ಚಂದರಗಿ ಕ್ರೀಡಾವಸತಿ ಶಾಲೆಯ ಸೈಕ್ಲಿಂಗ್ ಕೋಚ್ ಭೀಮಶಿ ವಿಜಯನಗರ ಅವರ ಮಾರ್ಗದರ್ಶನದಲ್ಲಿ ದಿನನಿತ್ಯ ಮುಂಜಾನೆ-ಸಂಜೆ ಸೇರಿ ನಿತ್ಯ 4 ಗಂಟೆಗಳ ಕಠಿಣ ಅಭ್ಯಾಸದ ಫಲವಾಗಿ ಇಂದು ರಾಷ್ಟ್ರಮಟ್ಟದ ಟ್ರಾಕ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು ಹೊನ್ನಪ್ಪನ ಅವಿರತ ಪರಿಶ್ರಮ, ಕ್ರೀಡಾಸಕ್ತಿಯೇ ಕಾರಣ. ಕಳೆದ ವರ್ಷವು ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಗೆದ್ದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅತ್ಯಾಧುನೀಕ ಕ್ರೀಡಾಸೈಕಲ್ ಅವಶ್ಯಕತೆ
ಹೊನ್ನಪ್ಪ ಕಳೆದ ಒಂದುವರೆ ವರ್ಷದಿಂದ ನಮ್ಮ ಶಾಲೆಯ ವಿದ್ಯಾರ್ಥಿ. ಸೈಕ್ಲಿಂಗ್ ಕ್ರೀಡೆಯಲ್ಲಿ ಆತ ತೊಡಗಿಸುಕೊಂಡಿರುವ ಆಸಕ್ತಿ, ಸಾಧಿಸಬೇಕೆಂಬ ಛಲ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಾಲೆಯ ಸಹಕಾರ ಮತ್ತು ಪಾಲಕರ ಪ್ರೋತ್ಸಾಹದಿಂದಾಗಿ ಇಂದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಆದರೆ ರಾಷ್ಟçಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಸಿಪ್‌ನಲ್ಲಿ ಭಾಗವಹಿಸಲು ಇನ್ನು ಹೆಚ್ಚಿನ ಅತ್ಯಾಧುನೀಕ ಕ್ರೀಡಾಸೈಕಲ್ ಅಗತ್ಯವಿದೆ. ಮಧ್ಯಮ ವರ್ಗದ ಹೊನ್ನಪ್ಪ ಧರ್ಮಟ್ಟಿ ಅವರ ತಂದೆಯು ಕ್ರೀಡಾ ಸೈಕಲ್ ಕೊಡಿಸಲು ಕಳೆದ 6 ತಿಂಗಳಿನಿಂದ ಹರಸಾಹಸ ಪಡುತ್ತಿದ್ದಾರೆ. ಕ್ರೀಡಾ ಪ್ರೋತ್ಸಾಹಕರು, ದಾನಿಗಳು ಹೊನ್ನಪ್ಪನ ಸೈಕ್ಲಿಂಗ್ ಕ್ರೀಡೆಗೆ ಅಗತ್ಯ ಪ್ರೋತ್ಸಾಹ ನೀಡಿದರೆ ಪಿಯುಸಿ ಮುಗಿಯುವದರೊಳಗೆ ಭಾರತದ ಬೆಸ್ಟ್ ಸೈಕ್ಲಿಂಗ್ ರೈಡರ್ ಹೊನ್ನಪ್ಪ ಧರ್ಮಟ್ಟಿ ಆಗುತ್ತಾನೆ ಎಂಬ ವಿಶ್ವಾಸವಿದೆ.
-ಭೀಮಶಿ ವಿಜಯನಗರ. ಸೈಕ್ಲಿಂಗ್ ತರಬೇತಿದಾರರು. ಕ್ರೀಡಾ ವಸತಿ ಶಾಲೆ. ಕೆ.ಚಂದರಗಿ.

ಉದಯೋನ್ಮುಖ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ
ನಮ್ಮ ಗ್ರಾಮೀಣ ಭಾಗದ ಉದಯೋನ್ಮುಖ ಕ್ರೀಡಾಪಟು ಹೊನ್ನಪ್ಪನ ಸೈಕ್ಲಿಂಗ್ ಕ್ರೀಡಾ ಪ್ರತಿಭೆಯು ಅಮೋಘವಾಗಿದೆ. ಅತ್ಯಾಧುನೀಕ ಸೈಕಲ್ ಇಲ್ಲದ ಕೊರತೆಯ ನಡುವೆಯೂ ಇಂದು ದ್ವಿತೀಯ ಬಾರಿಗೆ ರಾಷ್ಟ್ರೀಯ ಟ್ರಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ. ಹೊನ್ನಪ್ಪನ ಭವಿಷ್ಯದ ಕ್ರೀಡಾ ಸಾಧನೆಗೆ ಅಗತ್ಯವಾಗಿ ಬೇಕಾದ ಅತ್ಯಾಧುನೀಕ ಕ್ರೀಡಾ ಸೈಕಲ್ ಖರೀದಿಗೆ ನಾನು ವಯಕ್ತಿಯವಾಗಿ ಧನಸಹಾಯ ನೀಡುತ್ತಿದ್ದೇನೆ. ನಮ್ಮ ಜಿಲ್ಲೆಯ ಕ್ರೀಡಾ ಪ್ರೋತ್ಸಾಹಕರು, ಜನಪ್ರತಿನಿಧಿಗಳು, ಉದ್ಯಮಿಗಳು ಈ ಬಾಲಕನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಆತನನ್ನು ರಾಷ್ಟ್ರಮಟ್ಟದ ಕ್ರೀಡಾಪಟುವನ್ನಾಗಿ ಬೆಳೆಸಬೇಕಾಗಿದ್ದು ಅಗತ್ಯವಾಗಿದೆ.

-ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.