ಹಿಂದೂ ಮುಸ್ಲಿಂ ಭಾವೈಕ್ಯತೆಯ ಹೊಸೂರು ಉರೂಸ್: ಸಾವಿರಾರು ಹಿಂದೂಗಳಿಂದ ಸಕ್ಕರೆ ವಿತರಣೆ
ಹಿಂದೂಗಳಿಂದ ತದಡಿಗೆ ದೀರ್ಘದಂಡ ನಮಸ್ಕಾರ
Team Udayavani, Mar 24, 2022, 7:48 PM IST
ರಬಕವಿ-ಬನಹಟ್ಟಿ: ಸಮೀಪದ ಹೊಸೂರಿನ ಸಿರಾಜಸಾಬ್ ಮುರಾದಸಾಬ್‍ರ ಉರೂಸ್ ಗುರುವಾರ ಸಂಭ್ರಮ ಸಡಗರದಿಂದ ನಡೆಯಿತು.
ಹಿಂದೂ ಮುಸ್ಲಿಂ ಒಟ್ಟಾಗಿ ಆಚರಿಸುವ ಉರೂಸ್ ಇದಾಗಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಉರೂಸಿನಲ್ಲಿ ಹಿಂದೂ ಪುರುಷ ಮತ್ತು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಹಿಂದೂಗಳು ಸೇರಿದಂತೆ ಮುಸ್ಲಿಂ ಬಾಂಧವರು ಇಲ್ಲಿರುವ ಸಿರಾಜಸಾನಬ್ ಮುರಾದಸಾಬ್ ತದಡಿಗೆ ಚಾದರ್ ಮತ್ತು ಹೂ ಮಾಲೆಗಳನ್ನು ಅರ್ಪಿಸುತ್ತಾರೆ. ನೂರಾರು ಹಿಂದೂ ಮಹಿಳೆಯರು ದೇವರಿಗೆ ಸಕ್ಕರೆ ನೈವೇದ್ಯವನ್ನು ಅರ್ಪಿಸುವುದರ ಜೊತೆಗೆ ಸುತ್ತ ಮುತ್ತ ಕುಳಿತ ಭಕ್ತರಿಗೆ ಸಕ್ಕರೆಯನ್ನು ಹಂಚುತ್ತಾರೆ. ಹಿಂದೂ ಪುರುಷ ಮತ್ತು ಮಹಿಳೆಯರು ಇಲ್ಲಿ ದೀರ್ಘದಂಡ ನಮಸ್ಕಾರ ಹಾಕುವುದು ವಿಶೇಷವಾಗಿದೆ.
ಚಾದರ್, ಸಕ್ಕರೆ ಮಾರಾಟ ಜೋರು:
ಇಲ್ಲಿಯ ತದಡಿಗೆ ಚಾದರ ಸಲ್ಲಿಸಿ ಭಕ್ತರು ಹರಿಕೆಯನ್ನು ಪೂರೈಸುತ್ತಾರೆ. ರೂ. 500 ರಿಂದ ರೂ 6500 ವರೆಗೆ ಚಾದರ್ ಗಳು ಮಾರಾಟವಾಗುತ್ತವೆ. ಇಲ್ಲಿ ಐದು ದಿನಗಳ ಅವಧಿಯಲ್ಲಿ ಅಂದಾಜು ಐದಾರು ನೂರು ಚಾದರ್ ಗಳು ಮಾರಾಟವಾಗುತ್ತವೆ ಎಂದು ಚಾದರ್ ಮಾರಾಟಗಾರ ಫರೀದಸಾಬ್ ಅತ್ತಾರ ತಿಳಿಸಿದರು.
ಅದೇ ರೀತಿಯಾಗಿ ಇಲ್ಲಿಗೆ ಬರುವವರು ದೇವರಿಗೆ ಸಕ್ಕರೆಯ ನೈವೇದ್ಯವನ್ನು ಸಲ್ಲಿಸುತ್ತಾರೆ. ಆದ್ದರಿಂದ ಹತ್ತಾರು ಕ್ವಿಂಟಲ್ ಸಕ್ಕರೆ ಕೂಡಾ ಮಾರಾಟವಾಗುತ್ತದೆ. ತದಡಿಗೆ ಹೋಗುವ ಮಾರ್ಗದಲ್ಲಿ ಅಪಾರ ಪ್ರಮಾಣದ ಸಕ್ಕರೆಯನ್ನು ಮಾರಾಟ ಮಾಡಲಾತ್ತದೆ.
ಈ ಸಂದರ್ಭದಲ್ಲಿ ನೂರಸಾಬ್ ಮುಜಾವಾರ, ಅಯೂಬಖಾನ ಹೊರಟ್ಟಿ, ವೆಂಕನಗೌಡ ಪಾಟೀಲ, ಶಂಕರೆಪ್ಪ ಭುಜರುಕ, ಮಹಾದೇವ ಚೋಳಿ, ಸತ್ಯಪ್ಪ ಮಗದುಮ್, ಶ್ರೀಶೈಲ ಮುಂಡಗನೂರ, ಅರುಣ ಬುದ್ನಿ, ಅಶೋಕ ಹಳ್ಳೂರ, ರಾಜು ಕುಲ್ಲೊಳ್ಳಿ, ರಾಮಣ್ಣ ದಳಪತಿ ಇದ್ದರು.
ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಮಹಾರಾಷ್ಟ್ರದ ಮಿರಜ, ಸಾಂಗ್ಲಿ, ಇಚಲಕರಂಜಿ ಹಾಗೂ ಗಡಿ ಪ್ರದೇಶದ ನೂರಾರು ಜನರು ಭಾಗವಹಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.