Hunagunda: ಹುನಗುಂದ ಬಸ್ ನಿಲ್ದಾಣ ಅವ್ಯವಸ್ಥೆ ಆಗರ
Team Udayavani, Dec 29, 2023, 3:41 PM IST
ಹುನಗುಂದ: ಕಳೆದ 10 ವರ್ಷಗಳ ಹಿಂದೆ ನಿರ್ಮಿಸಿದ ಹುನಗುಂದ ಬಸ್ ನಿಲ್ದಾಣ ಮೂಲಭೂತ ಸೌಲಭ್ಯಗಳ ಕೊರತೆ
ಎದುರಿಸುತ್ತಿದೆ. ಪ್ರಯಾಣಿಕರು ಬಸ್ ನಿಲ್ದಾಣದಿಂದ ಗ್ರಾಮೀಣ, ಜಿಲ್ಲೆ, ರಾಜ್ಯ ಮತ್ತು ಅಂತಾರಾಜ್ಯಕ್ಕೆ ದಿನನಿತ್ಯ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ.
ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಮಹಿಳಾ ವಿಶ್ರಾಂತಿ ಗೃಹ, ಸ್ವಚ್ಛತೆ, ಕಣ್ಣು ಮುಚ್ಚಾಲೆ ವಿದ್ಯುತ್‌ದೀಪ, ಬೆನ್ನು ಹಚ್ಚಿ ಕೂಡುವ ಆಸನೆಗಳೆ ಇಲ್ಲ. ಮಹಿಳೆಯರು ಮತ್ತು ವೃದ್ಧರೂ ಮತ್ತು ಮಕ್ಕಳು ಆಸನಕ್ಕೆ ಪರದಾಡುವಂತಾಗಿದೆ. ಕರ್ಕಶ ಧ್ವನಿಯಲ್ಲಿ ಕೂಗುವ ಸಾರಿಗೆ ಧ್ವನಿವರ್ಧಕದಿಂದ ಪ್ರಯಾಣಿಕರು ಬೇಸತ್ತು, ಸಮಯಕ್ಕೆ ಬಿಡದ ಮತ್ತು ಸರಿಯಾಗಿ ಪ್ಲಾಟ್‌ಫಾರ¾ಗಳಲ್ಲಿ ನಿಲ್ಲದ ಬಸ್ ಹುಡುಕಲು ಪ್ರಯಾಣಿಕರು ತೊಂದರೆ ಆನುಭವಿಸುವಂತಾಗಿದೆ. ಜತೆಗೆ ಶೌಚಾಲಯ ಮತ್ತು ತೆರೆದ ಚರಂಡಿಗಳಿಂದ ಹರಡುವ ದುರ್ವಾಸನೆಯಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಸಂಚರಿಸುವಾಗಿದೆ.
ನಿಲ್ದಾಣದಲ್ಲಿ ಕಳ್ಳರ ಹಾವಳಿಯಿಂದ ಪ್ರಯಾಣಿಕರ ಮೊಬೈಲ್, ಲಗೇಜ್ ಮತ್ತು ಬೆಲೆ ಬಾಳುವ ವಸ್ತುಗಳು ಕಳ್ಳತನ ಹೀಗೆ
ಇನ್ನಿತರ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ತಾಲೂಕು ಕೇಂದ್ರ ಜತೆಗೆ ಪಕ್ಕದಲ್ಲೆ ಘಟಕವಿದ್ದರೂ ರಾತ್ರಿ ಸೆಕ್ಯುರಿಟಿ ವಾಚ್ ಮನ್‌ಗಳು ಇರುವುದಿಲ್ಲ. ಪ್ರಯಾಣಿಕರು ರಾತ್ರಿ ನಿಲ್ದಾಣದಲ್ಲಿ ಉಳಿಯುವಂತಹ ಅನಿವಾರ್ಯತೆ ಎದುರಾದರೆ ಕಷ್ಟ ಎದುರಿಸುವಂತಾಗಿದೆ.
ಪುರಸಭೆಯ ಟ್ಯಾಂಕ್‌ದಿಂದ 2-3 ಟ್ಯಾಂಕಿನಷ್ಟು ತ್ಯಾಜ್ಯ ಹೊರಹಾಕಿದೆ. ಸೇಫ್ಟಿ ಟ್ಯಾಂಕ್ ಸ್ವಚ್ಛ ಮಾಡಬೇಕಾಗಿದೆ. ನಿಲ್ದಾದಿಂದ ಬಸ್ ಚಲಿಸುವ ದಾರಿಗೆ ಮಲಮೂತ್ರ ಚರಂಡಿ ಇದೆ. ಅದರಿಂದ ದುರ್ವಾಸನೆ ಬರುತ್ತಿದೆ. ನಮ್ಮ ಇಲಾಖಾ ಕಾಂಟ್ರಾಕ್ಟರಗೆ ಚರಂಡಿಯು ಸರಳವಾಗಿ ಚಲಿಸುವಂತೆ ರಿಪೇರಿ ಮಾಡಲು ತಿಳಿಸಿರುವೆ. ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯ ಒದಗಿಸಲು ಹೆಚ್ಚಿನ ಪ್ರಯತ್ನ ನಡೆದಿದೆ.
*ಎಸ್.ಆರ್. ಸೊನ್ನದ, ಘಟಕ
ವ್ಯವಸ್ಥಾಪಕ ಹುನಗುಂದ
ತಾಲೂಕು ಕೇಂದ್ರವಾಗಿರುವ ಹುನಗುಂದ ನಿಲ್ದಾಣದಲ್ಲಿ ಪುರುಷ-ಮಹಿಳೆ ಪ್ರತ್ಯೇಕವಾಗಿ 4 ಕೊಠಡಿಗಳ ಶೌಚಾಲಯ ಮಾತ್ರ ಇದ್ದು, ಹೆಚ್ಚುವರಿ ಕಟ್ಟಡ ನಿರ್ಮಿಸಬೇಕು. ನಿಲ್ದಾಣದ ಸೂಕ್ತ ಸ್ಥಳದಲ್ಲಿ ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಬೇಕು. ಮೂಲಸೌಕರ್ಯಕ್ಕೆ ಅಧಿಕಾರಿಗಳು ಗಮನಹರಿಸಬೇಕು.
ಜಿ.ಬಿ. ಕಂಬಾಳಿಮಠ,
ಹಿರಿಯ ನಾಗರಿಕ
*ವೀರೇಶ ಕುರ್ತಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.