Hungund: ದೇಶ ಸೇವೆ ಮಾಡುವ ಸೈನಿಕರ ಕಾರ್ಯ ಶ್ಲಾಘನೀಯ
Team Udayavani, Nov 8, 2023, 2:37 PM IST
ಹುನಗುಂದ: ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಿಸದೇ ದೇಶ ರಕ್ಷಿಸುವ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ತುರ್ವಿಹಾಳ ಗುರು ಅಮೋಘ ಸಿದ್ದೇಶ್ವರ ಮಠದ ಮಾದಯ್ಯಸ್ವಾಮಿ ಗುರುವಿನವರ ಶ್ರೀ ಹೇಳಿದರು.
ಚಿಕ್ಕಮಳಗಾವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಖೀಲ ಕರ್ನಾಟಕ ಮಾಜಿ ಸೈನಿಕರ ಸಂಘ
ತಾಲೂಕು ಘಟಕ ಮತ್ತು ಚಿಕ್ಕಮಳಗಾವಿ ಗ್ರಾಮಸ್ಥರು ಹಮ್ಮಿಕೊಂಡಿದ್ದ 20ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ
ಆಗಮಿಸಿದ ನಿವೃತ್ತ ಯೋಧ ಚಂದ್ರಶೇಖರ ಬೆಂಚಮಟ್ಟಿ ಅವರಿಗೆ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ
ನೀಡಿದರು.
ಭಾರತೀಯ ಸೇನೆಗೆ ಸೇರಬೇಕಾದರೇ ಪುಣ್ಯ ಮಾಡಿರಬೇಕು. ಅಂತಹ ಪುಣ್ಯವನ್ನು ಚಂದ್ರಶೇಖರ ಬೆಂಚಮಟ್ಟಿ ಪಡೆದಿದ್ದರಿಂದ
ಸೇನೆಯಲ್ಲಿನ ಸುದೀರ್ಘ ಭಾರತಾಂಭೆ ಸೇವೆಗೈದಿದ್ದಕ್ಕೆ ಇಂದು ಗೌರವ ಸಿಕ್ಕಂತಾಗಿದೆ. ಚಂದ್ರಶೇಖರ ಅವರಂತೆ ಈ ಗ್ರಾಮದಲ್ಲಿ
ನೂರಾರು ಸಂಖ್ಯೆ ಯುವಕರು ಸೈನ್ಯವನ್ನು ಸೇರುವಂತಾಗಲಿ ಎಂದು ಹೇಳಿರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ
ಮಾತನಾಡಿದರು.
ನಿವೃತ್ತಿಗೊಂಡು ಸ್ವಗ್ರಾಮಕ್ಕೆ ಮರಳಿದ ಯೋಧ ಚಂದ್ರಶೇಖರ ಬೆಂಚಮಟ್ಟಿ ಮಾತನಾಡಿ, ದೇಶ ರಕ್ಷಣೆ ಜವಾಬ್ದಾರಿ ಕಷ್ಟವಿದ್ದರೂ ಅದನ್ನು ಸಂತಸದಿಂದ ತಾಯಿ ಭಾರತಾಂಭೆಯ ರಕ್ಷಣೆ ಮಾಡುತ್ತಿದ್ದೇನೆ ಎನ್ನುವ ಹೆಮ್ಮೆಯಿಂದ 20 ವರ್ಷ ಸಾರ್ಥಕ ಸೇವೆ ಸಲ್ಲಿಸಿದ್ದೇನೆ. ಭಾರತ ಮಾತೆಯ ಸೇವೆ ಇನ್ನಷ್ಟು ಮಾಡಬೇಕೆಂಬ ಹಂಬಲವಿದೆ ಎಂದರು.
ಸಾಕಷ್ಟು ಕಷ್ಟ ಕಾರ್ಪಣ್ಯಗಳನ್ನು ಸೇವೆಯಲ್ಲಿ ಅನುಭವಿಸುತ್ತಿದ್ದರೂ ಕುಟುಂಬಕ್ಕೆ ಕ್ಷೇಮದಿಂದ ಇದ್ದೇವೆಂದು ತಿಳಿಸುವುದು ಸೆ„ನಿಕರ ಗುಣ ಎಂದರು. ನನ್ನ ತಂದೆ ನಿಧನದ ಕ್ಷಣ ಬರದೆ 3ನೇ ದಿನಕ್ಕೆ ಬಂದು ಕುಟುಂಬದಲ್ಲಿ ದು:ಖ ಹಂಚಿಕೊಂಡಿದ್ದೇನೆ. ಕಷ್ಟ-ಸುಖಗಳ ಜತೆ ದೇಶದ ರಕ್ಷಣೆಯೇ ನಮ್ಮ ಗುರಿ ಎಂದು ತಾಲೂಕು ಮಾಜಿ ಸೈನಿಕ ಸಂಘಕ್ಕೆ 10ಸಾವಿರ ರೂ. ದೇಣಿಗೆ
ನೀಡಿದರು.
ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಅರ್ಜುನ ಕೋರೆ ಮತ್ತು ಮಾಜಿ ಸೈನಿಕ ಗದಿಗೆಪ್ಪ ಅರಕೇರಿ ಮಾತನಾಡಿ, ಸೈನಿಕರು ಲಡಾಖ, ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವಾಗ 40 ಡಿಗ್ರಿ ಚಳಿಯಲ್ಲಿ ಕಾರ್ಯ ಮಾಡುವುದು ಕಷ್ಟದ ಕೆಲಸ. ಸೈನಿಕನಿಗೆ ದೇಶ ರಕ್ಷಣೆಯೊಂದೇ ಗುರಿ. ಇಂತಹ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ಬಂದಾಗ ಅವರ ಕಷ್ಟದಲ್ಲಿ ತಾವೆಲ್ಲರು ಭಾಗಿಯಾಗಿ ಅನುಭವ ಹಂಚಿಕೊಳ್ಳಬೇಕು ಎಂದರು. ಪಿಎಸ್‌ಐ ಚನ್ನಯ್ಯ ದೇವೂರ ಮತ್ತು ಆರ್ ಎಸ್‌ಆಯ್ ರೇವಣ್ಣ ಗುರಿಕಾರ, ಶಿಕ್ಷಕ ಮೇಟಿ ಮಾತನಾಡಿದರು.
ಮಾಜಿ ಸೈನಿಕರ ಸಂಘದ ತಾಲೂಕಧ್ಯಕ್ಷ ಬಾಲಪ್ಪ ಕಿರಸೂರ ಅಧ್ಯಕ್ಷತೆ ವಹಿಸಿದ್ದರು. ವೇ.ಮೂ.ಜಗದೀಶಯ್ಯ ಹಿರೇಮಠ, ಶ್ರೀಕಾಂತ ಹಿರೇಮಠ, ವಕೀಲ ಮಾಧವ ದೇಶಪಾಂಡೆ, ವಸಂತ ದೇಶಪಾಂಡೆ, ಎಲ್.ಎಂ.ಪಾಟೀಲ, ಮಹಾಂತೇಶ ಲಗಮನ್ನನವರ, ಬಸವರಾಜ ಹಲ್ಪಿ, ಸೋಮಶೇಖರ ಬಂಡಿವಡ್ಡರ, ನಾಗಪ್ಪ ಆಲೂರ, ಸಂಗಪ್ಪ ಕಲಾದಗಿ, ಶಿವಾನಂದ ನಿರವಾದಿಲಿ, ಸೇರಿದಂತೆ ಇತರರು ಇದ್ದರು. ವಿಜಯ ದಳವಾಯಿ ಪ್ರಾರ್ಥಿಸಿದರು, ದೈಹಿಕ ಶಿಕ್ಷಕ ಸಿ.ವಾಯ್.ಕುರಿ ಸ್ವಾಗತಿಸಿದರು.
ಮಾಜಿ ಸೈನಿಕ ಪರಪ್ಪ ಅಥಣಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.