ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ
ಜಿಲ್ಲಾ ಆಸ್ಪತ್ರೆಯಲ್ಲಿ 3 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ
Team Udayavani, Jan 21, 2022, 6:17 PM IST
ಬಾಗಲಕೋಟೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ಕೇರ್ ಇಂಡಿಯಾ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶೂಷಾ ಸಿಬ್ಬಂದಿಗೆ ಕಾರ್ಯಾಗಾರ ಜರುಗಿತು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್ ಬಗ್ಗೆ ತರಬೇತಿ ಹೊಂದಿದವರು ವಿರಳವಿರುವುದನ್ನು ಮನಗಂಡ ಜಿಲ್ಲಾ ಧಿಕಾರಿಗಳು ಮಣಿಪಾಲ ಆಸ್ಪತ್ರೆ ಮಲ್ಲೇಶ್ವರಂ ಮತ್ತು ಬೆಂಗಳೂರಿನ ಬಿಎಂಜೆಎಚ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ ಅವರ ಜತೆ ಮಾತನಾಡಿ ತರಬೇತಿ ನೀಡಲು ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ
ಜಿಲ್ಲಾ ಆಸ್ಪತ್ರೆಯಲ್ಲಿ 3 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಕೋವಿಡ್ ಐಸಿಯು ಮತ್ತು ಕೋವಿಡ್ ಅಲ್ಲದ ಐಸಿಯು ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಯ ಪ್ರಸ್ತುತ ಕಾರ್ಯ ಘಟಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ತರಬೇತಿ ಸಹಾಯಕಾರಿಯಾಗಲಿದೆ. ಒಟ್ಟು 17 ವೈದ್ಯರು ಹಾಗೂ 45 ಜನ ಶುಶ್ರೂಷಕರು ತರಬೇತಿ ಪಡೆಯಲಿದ್ದು, ಈ ರೀತಿಯ ತರಬೇತಿ ಹಮ್ಮಿಕೊಂಡಿದ್ದು, ರಾಜ್ಯದಲ್ಲಿಯೇ ಪ್ರಥಮ ಎಂದು ಹೇಳಿದರು.
ನಂತರ ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಮಣಿಪಾಲ ಆಸ್ಪತ್ರೆ ಮಲ್ಲೇಶ್ವರಂ ಮತ್ತು ಬೆಂಗಳೂರಿನ ಬಿ.ಎಂ. ಜೆ.ಎಚ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ ಮತ್ತು ವೈದ್ಯ ಡಾ| ಬಸವರಾಜ ಕುಂಟೋಜಿ ಅವರ ನೇತೃತ್ವದ ತಂಡ ತರಬೇತುದಾರರಾದ ಡಾ| ಬಾಲಸುಬ್ರಮಣ್ಯಂ ಇವಿ, ಡಾ| ರಾಘವೇಂದ್ರ ವನಕಿ (ಮಕ್ಕಳ ತೀವ್ರ ತಜ್ಞ), ಸತೀಶ, ಸಂತೋಷ, ಮತ್ತು ಕೇರ್ ಇಂಡಿಯಾ ತಂಡದ ಬೆಂಬಲದೊಂದಿಗೆ ಡಾ| ಸೆಂಡಿಲ್, ಡಾ|ಆನಂದ್ ರೆಡ್ಡಿ ಮತ್ತು ಬೆಂಗಳೂರಿನ ಜಯಶ್ರೀ ಅವರು ಐಸಿಯು, ವೆಂಟಿಲೇಟರ್ ಹಾಗೂ ಎಮರ್‌ಜೆನ್ಸಿ ಕೇರ್ ಬಗ್ಗೆ ತರಬೇತಿ ನೀಡಿದರು.
ತರಬೇತಿ ತಂಡವು ಐಸಿಯು ಮತ್ತು ತುರ್ತು ಆರೈಕೆಯ ಬಗ್ಗೆ ವಿವರವಾದ ಚರ್ಚೆ ನಡೆಸಿತು. ಮತ್ತು ವಯಸ್ಕ ಐಸಿಯು ಮತ್ತು ಮಕ್ಕಳ ಐಸಿಯುಗಾಗಿ ವಿಶೇಷವಾಗಿ 3 ಆರ್ಡಿ ಕೋವಿಡ್ ತರಂಗವನ್ನು ಮನಸ್ಸಿನಲ್ಲಿಟ್ಟುಕೊಂಡು ವೆಂಟಿಲೇಟರ್‌ಗಳು ಮತ್ತು ಎಚ್‌ಎಫ್ ಎನ್‌ಸಿ ಮತ್ತು ಆಮ್ಲಜನಕ ಸಾಧನ ಬಳಸಲು ಅನುಭವವನ್ನು ನೀಡಿದರು. ವಯಸ್ಕರು, ಮಗು ಮತ್ತು ಶಿಶುಗಳಿಗೆ ಬೇಸಿಕ್ ಜೀವನ ಬೆಂಬಲ ಕೌಶಲ್ಯಗಳ ತರಬೇತಿ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.