ಅಭ್ಯರ್ಥಿಗಳ ಭವಿಷ್ಯಕ್ಕೆ ಮತದಾನ ಮುದ್ರೆ
Team Udayavani, Apr 23, 2019, 12:03 PM IST
ಹೌದು, ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಎರಡು ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳು ಕ್ಷೇತ್ರದ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಬಹಿರಂಗ ಸಮಾವೇಶ ಹಾಗೂ ಪಾದಯಾತ್ರೆ ಮೂಲಕ ಮತದಾರರ ಮನೆ ಮನೆಗೆ ತೆರಳಿ ಮತ ನೀಡಲು ಮನವಿ ಮಾಡಿದ್ದರು.
ಹಳೆ ಮುಖ ಅಥವಾ ಹೊಸ ಮುಖ: ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತದಾರರ ಮನವೊಲಿಸಲು ಎರಡು ಪಕ್ಷಗಳ ನಾಯಕರು ಹರಸಾಹಸ ಪಟ್ಟಿದ್ದಾರೆ. ಮತದಾರರು ಈ ಚುನಾವಣೆಯಲ್ಲಿ 15 ವರ್ಷಗಳ ಆಡಳಿತ ನಡೆಸಿದ ಬಿಜೆಪಿಯ ಅಭ್ಯರ್ಥಿ ಪಿ.ಸಿ. ಗದ್ದಿಗೌಡರನ್ನು ಮತ್ತೂಮ್ಮೆ ತಮ್ಮ ಸಂಸದರನ್ನಾಗಿ ಮಾಡಿಕೊಳ್ಳುತ್ತಾರೋ ಅಥವಾ ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಕೈ ಹಿಡಿಯುತ್ತಾರೋ ಎಂಬ ನಿರ್ಣಯವನ್ನು ಮತದಾರರು ಮಂಗಳವಾರ ಬರೆದರೂ, ಅದು ತಿಳಿಯಲು ಮತ್ತೂಂದು ತಿಂಗಳು ಕಾಯಲೇಬೇಕು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟು 13 ಜನ ಕಣದಲ್ಲಿದ್ದರು. ಈ ಬಾರಿ ಬಿಜೆಪಿಯ ಪಿ.ಸಿ. ಗದ್ದಿಗೌಡರ, ಕಾಂಗ್ರೆಸ್‌ನ ವೀಣಾ ಕಾಶಪ್ಪನವರ ಸೇರಿದಂತೆ ಒಟ್ಟು 14 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸಕಲ ಸಿದ್ಧತೆ ಪೂರ್ಣ: ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1938 ಮತಗಟ್ಟೆಗಳಿದ್ದು, 405 ಕ್ರಿಟಿಕಲ್ (ಅತಿಸೂಕ್ಷ್ಮ) ಮತಗಟ್ಟೆಗಳಿವೆ. ಅತಿಸೂಕ್ಷ್ಮವಾಗಿರುವ 102 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್, 218 ಮತಗಟ್ಟೆಗಳಲ್ಲಿ ಮೈಕ್ರೊ ಅಬ್ಜರವರ್, 85 ಮತಗಟ್ಟೆಗಳಲ್ಲಿ ಚುನಾವನೆ ಪ್ರಕ್ರಿಯೆ ಸಂಪೂರ್ಣ ಚಿತ್ರಣಗೊಳ್ಳಲು ವಿಡಿಯೋಗ್ರಾಫರ್ ನೇಮಕ ಮಾಡಲಾಗಿದೆ.
ಪ್ರತಿ ಮತಗಟ್ಟೆಗೆ ಒಬ್ಬ ಪ್ರಿಸೈಡಿಂಗ್ ಅಧಿಕಾರಿ, 3 ಜನ ಪೋಲಿಂಗ್ ಅಧಿಕಾರಿ ಸೇರಿ ಒಟ್ಟು ನಾಲ್ವರು ಅಧಿಕಾರಿಗಳಿರುತ್ತಾರೆ. ಚುನಾವಣೆ ಕಾರ್ಯಕ್ಕೆ ಒಟ್ಟು 8,527 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಶೇ.10ರಷ್ಟು ಹೆಚ್ಚುವರಿ ಸಿಬ್ಬಂದಿ ಒಳಗೊಂಡಿದ್ದಾರೆ.
ಚುನಾವಣೆ ಕಾರ್ಯಕ್ಕೆ ನೇಮಕಗೊಂಡ ಎಲ್ಲ ಸಿಬ್ಬಂದಿ, ಸೋಮವಾರ ಸಂಜೆಯೇ ಮಸ್ಟರಿಂಗ್ ಆವರಣಕ್ಕೆ ಹಾಜರಾಗಿ, ಮತಯಂತ್ರಗಳ ಜತೆಗೆ ಆಯಾ ಮತಗಟ್ಟೆ ಕೇಂದ್ರಕ್ಕೆ ತೆರಳಿದ್ದಾರೆ.
2600 ಪೊಲೀಸರು: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಜಿಲ್ಲಾ ಪೊಲೀಸ್ ಇಲಾಖೆಗೆ ಮತದಾನದಂದು ಬಿಗಿಭದ್ರತೆ ಕಲ್ಪಿಸಿದೆ. 7 ಜನ ಡಿವೈಎಸ್ಪಿ, 21 ಸಿಪಿಐ ಒಳಗೊಂಡು ಒಟ್ಟು 2600 ಜನ ಪೊಲೀಸ್ ಸಿಬ್ಬಂದಿ, ಚುನಾವಣೆಯ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲದೇ 106 ವಿಶೇಷ ತಂಡ ರಚಿಸಲಾಗಿದ್ದು, ಎಲ್ಲೇ ಗಲಾಟೆ ನಡೆದರೂ, 10ರಿಂದ 15 ನಿಮಿಷದೊಳಗೆ ಆ ಸ್ಥಳಕ್ಕೆ ಹಾಜರಾಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಒಟ್ಟಾರೆ, ಲೋಕಸಭೆ ಚುನಾವಣೆಯ ಮತದಾನವನ್ನು ಶಾಂತಿ-ಸುವ್ಯವಸ್ಥೆಯಿಂದ ನಡೆಸಲು ಜಿಲ್ಲಾಡಳಿತ ಸಿದ್ಧತೆ ಪೂರ್ಣಗೊಳಿಸಿದ್ದು, ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಸಂಜೆ 6ಕ್ಕೆ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಒಂದು ಟೋಕನ್ ನೀಡಿ, ಆ ಬಳಿಕವೂ ಮತ ಚಲಾಯಿಸಲು ಅವಕಾಶವಿದೆ. ಆದರೆ, 6 ಗಂಟೆಯ ಬಳಿಕ ಮತಗಟ್ಟೆ ಕೇಂದ್ರಕ್ಕೆ ಬಂದರೆ ಮತದಾನ ಹಕ್ಕಿನಿಂದ ವಂಚಿತರಾಗಲಿದ್ದಾರೆ.
ಮತ ಹಾಕಲು 12ರಲ್ಲಿ ಒಂದು ದಾಖಲೆ ತನಿ
ಮತದಾನಕ್ಕೆ ಚುನಾವಣಾ ಆಯೋಗವು ಈ ಕೆಳಗೆ ತಿಳಿಸಿದ 12 ಗುರುತಿನ ದಾಖಲೆಗಳ ಪೈಕಿ ಒಂದನ್ನು ಮಾತ್ರ ತೋರಿಸಿ ಮತದಾನ ಮಾಡಬಹುದಾಗಿದೆ. ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್, ಕೇಂದ್ರ, ರಾಜ್ಯ ಸರ್ಕಾರ ಇಲ್ಲವೇ ಪಿಎಸ್‌ಯು, ಸಾರ್ವಜನಿಕ ಕಂಪನಿಗಳಿಂದ ವಿತರಿಸಲಾದ ಭಾವಚಿತ್ರವಿರುವ ಗುರುತಿನ ಚೀಟಿ, ಬ್ಯಾಂಕ್/ಅಂಚೆ ಕಚೇರಿಯ ಪಾಸ್‌ಬುಕ್, ಪ್ಯಾನ್‌ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆ ಅಡಿಯಲ್ಲಿ ನೀಡಿರುವ ಸ್ಮಾರ್ಟ್ ಕಾರ್ಡ್, ನರೇಗಾ ಜಾಬ್‌ಕಾರ್ಡ್, ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ವಿಮೆ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಎಂ.ಪಿ, ಎಂ.ಎಲ್.ಎ, ಎಂ.ಎಲ್.ಸಿ, ಇವರಿಗೆ ನೀಡಲಾದ ಕಚೇರಿ ಗುರುತಿನ ಚೀಟಿ ಹಾಗೂ ಆಧಾರ ಕಾರ್ಡ್ ತೋರಿಸಿ ಮತ ಹಾಕಲು ಅವಕಾಶವಿದೆ.
ಸಖೀಗೆ ಇಳಕಲ್ಲ ಸೀರೆ-ಗುಳೇದಗುಡ್ಡ ಖಣ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 12 ಸಖೀ (ಮಹಿಳಾ ಮತದಾರರು ಹೆಚ್ಚಿರು ಮತಗಟ್ಟೆಯಲ್ಲಿ ಪೂರ್ಣ ಮಹಿಳಾ ಸಿಬ್ಬಂದಿ) ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರತಿ ಬಾರಿ ಸಖೀ ಮತಗಟ್ಟೆ ಸಿಬ್ಬಂದಿಗೆ ಗುಲಾಬಿ ಬಣ್ಣದ ವಸ್ತ್ರ ನೀಡಲಾಗುತ್ತಿತ್ತು. ಈ ಬಣ್ಣ, ರಾಜಕೀಯ ಪಕ್ಷವೊಂದು ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಯಾ ಸ್ಥಳೀಯ ಸಾಂಸ್ಕೃತಿಕ ವಿಶೇಷತೆ ಒಳಗೊಂಡ ವಸ್ತ್ರ ಬಳಸಲು ಆಯೋಗ ನಿರ್ಧರಿಸಿದೆ. ಹೀಗಾಗಿ ಜಿಲ್ಲೆಯ 12 ಸಖೀ ಮತಗಟ್ಟೆಯ ಮಹಿಳಾ ಸಿಬ್ಬಂದಿಗೆ ಇಳಕಲ್ಲ ಸೀರೆ, ಗುಳೇದಗುಡ್ಡದ ಖಣ ವಸ್ತ್ರ ನೀಡಲಾಗುತ್ತಿದೆ.
ಎಲ್ಲೆಲ್ಲಿ ಸಖೀ ಮತಗಟ್ಟೆ
ಮುಧೋಳ ಮತಕ್ಷೇತ್ರ ವ್ಯಾಪ್ತಿಯ ಮುಧೋಳ ಪಟ್ಟಣದ ಸರ್ಕಾರಿ ಮಾದರಿ ಶಾಲೆ, ಬೆಳಗಲಿಯ ಹಿರಿಯ ಪ್ರಾಥಮಿಕ ಶಾಲೆ, ತೇರದಾಳ ಮತಕ್ಷೇತ್ರದಲ್ಲಿ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕೆಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಮಖಂಡಿ ತಾಲೂಕಿನಲ್ಲಿ ನಗರದ ಸರ್ಕಾರಿ ಪಿ.ಬಿ.ಕಿರಿಯರ ಕಾಲೇಜು ಮತ್ತು ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಬೀಳಗಿಯಲ್ಲಿ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ, ಸರ್ಕಾರಿ ಕನ್ನಡ ಮಾದರಿ ಗಂಡು ಮಕ್ಕಳ ಶಾಲೆ, ಬಾದಾಮಿ ಕ್ಷೇತ್ರದಲ್ಲಿ ಪಟ್ಟಣದ ಉರ್ದು ಗಂಡು ಮಕ್ಕಳ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಗಲಕೋಟೆ ನವನಗರದ ಯುಕೆಪಿ ಆಯುಕ್ತರ ಕಚೇರಿ (ಭೂಸ್ವಾಧೀನ), ಹಳೆಯ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಹೆಣ್ಣು ಮಕ್ಕಳ ಶಾಲೆ, ಹುನಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಹುನಗುಂದ ಪಟ್ಟಣದ ಸರ್ಕಾರಿ ಕೇಂದ್ರೀಯ ಮತ್ತು ಸಮಾಜಾ ಕೇಂದ್ರ, ಇಳಕಲ್ಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖೀ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.
ವಿಕಲಚೇತನರ ಪ್ರತ್ಯೇಕ ಮತಗಟ್ಟೆ
ಇದೇ ಮೊದಲ ಬಾರಿಗೆ ವಿಕಲಚೇತನ ಮತದಾರರು ಇರುವ ಪ್ರದೇಶಗಳಲ್ಲಿ ವಿಕಲಚೇತನ ಸಿಬ್ಬಂದಿಯನ್ನೇ ನೇಮಕ ಮಾಡಿದ ವಿಶೇಷ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯ ಬೀಳಗಿ ತಾಲೂಕಿನ ಹೆರಕಲ್ ಪುನರ್ವಸತಿ ಕೇಂದ್ರದ ಪ್ರಗತಿ ಪ್ರಾಥಮಿಕ ಶಾಲೆ, ಕಮತಗಿಯ ಶ್ರೀ ಸೇವಾಲಾಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷಚೇತನರ ಮತಗಟ್ಟೆ ಇವೆ.
77ದಿನದಲ್ಲಿ 13 ಸಾವಿರ ಮತದಾರರು ಹೆಚ್ಚಳ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 77 ದಿನಗಳಲ್ಲಿ 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 13,430 ಮತದಾರರು ಹೆಚ್ಚಳವಾಗಿದ್ದಾರೆ. ವಿಶೇಷ ಅಂದರೆ, ಬಾಗಲಕೋಟೆ ಕ್ಷೇತ್ರದಲ್ಲಿ 3,392 ಅತಿಹೆಚ್ಚು ಮತದಾರರು ಹೆಸರನ್ನು ಸೇರಿಸಿದ್ದಾರೆ. ಜನವರಿ 16ರವರೆಗೆ ಒಟ್ಟು 16,87,117 ಮತದಾರರಿದ್ದರು. ನಾಮಪತ್ರ ಸಲ್ಲಿಕೆಯ ಕೊನೆ ದಿನವಾಗಿದ್ದ ಏ.4ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಸದ್ಯ 17,00,547 ಮತದಾರರು, ಈ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಮುಧೋಳದಲ್ಲಿ 251 ಮತದಾರರು ಪಟ್ಟಿಯಿಂದ ಹೊರಗೆ (ವಿವಿಧ ಕಾರಣಗಳಿಗೆ ಡಿಲೀಟ್) ಹೋಗಿದ್ದಾರೆ. ತೇರದಾಳ-1,860, ಜಮಖಂಡಿ-2,443, ಬೀಳಗಿ-1,798, ಬಾದಾಮಿ-781, ಬಾಗಲಕೋಟೆ-3,392, ಹುನಗುಂದ-1,766 ಹಾಗೂ ನರಗುಂದ-1,641 ಸೇರಿ ಒಟ್ಟು 13,430 ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.