ಮಕ್ಕಳಲ್ಲಿನ ಕೌಶಲ್ಯಗಳನ್ನು ಗುರುತಿಸುವ ಕೆಲಸವಾಗಬೇಕು: ಶಾಸಕ ಸಿದ್ದು ಸವದಿ
Team Udayavani, Dec 24, 2022, 6:01 PM IST
ರಬಕವಿ-ಬನಹಟ್ಟಿ: ಮಕ್ಕಳು ತಮ್ಮದೇ ಆದ ಕೌಶಲ್ಯಗಳನ್ನು ಹೊಂದಿರುತ್ತಾರೆ ಅವುಗಳನ್ನು ಗುರುತಿಸಿ ಹೊರತೆಗೆಯುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಹೇಳಿದರು.
ಶನಿವಾರ ನಗರದ ಹಂಸವೇಣಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿನ ಸೃಜನಶೀಲತೆ ಹೊರ ಹೊಮ್ಮಿಸಲು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ತುಂಬಾ ಸಂತಸದ ವಿಷಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವ ನೀಡುವುದು ಅನಿವಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮದನಮಟ್ಟಿ ಶಾಲೆಯ ಮುಖ್ಯ ಗುರುಗಳಾದ ಡಿ. ಬಿ. ಜಾಯಗೊಂಡ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಇಗೀನಿಂದಲೇ ಮೂಡಿಸುವುದು ಸೂಕ್ತ. ಇಂದಿನ ದಿನಮಾನಗಳಲ್ಲಿ ಕೆಎಎಸ್ ಮತ್ತು ಐಎಎಸ್ ಮಾಡಿಸುವ ಸಂದರ್ಭದಲ್ಲಿ ಇಂತಹ ಜ್ಞಾನಗಳು ಸಹಾಯಕ್ಕೆ ಬರುತ್ತವೆ. ಜೊತೆಗೆ ಇದರಿಂದ ಮಕ್ಕಳಿಗೆ ಜೀವನ ಶೈಲಿ ಯಾವ ರೀತಿ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯುತ್ತದೆ ಎಂದರು.
ಮಕ್ಕಳು ವ್ಯವಹಾರ ಯಾವ ರೀತಿ ಮಾಡಬೇಕು. ಎಂಬುದನ್ನು ತಮ್ಮ ಸಂತೆ ವ್ಯಾಪಾರದಲ್ಲಿ ತೋರಿಸಿಕೊಟ್ಟರು. ಮಕ್ಕಳು ಹಮ್ಮಿಕೊಂಡಿದ್ದ ಸಂತೆಗೆ ಬಹಳಷ್ಟು ಜನ ಆಗಮಿಸಿ ಪ್ರೋತ್ಸಾಹ ನೀಡಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಸುಭಾಷ ಚೋಳಿ, ಶ್ರೀಶೈಲ ದಲಾಲ, ಸಂಗಮೇಶ ಗೌಡಾ ಪಾಟೀಲ, ಘಡಾಲಟ್ಟಿ, ಜಗದಾಳ ಗ್ರಾಮಪಂಚಾಯಿತಿ ಅಧ್ಯಕ್ಷ ಗುರುಲಿಂಗಪ್ಪ ಚಿಂಚಲಿ, ಗಂಗಪ್ಪ ಉಳ್ಳಾಗಡ್ಡಿ, ಸದಾಶಿವ ಭಂಗಿ, ವಕೀಲರಾದ ಮುತ್ತುರಾಜ ಶಿರಹಟ್ಟಿ, ಚನ್ನಪ್ಪ ಕೋಕಟನೂರ, ವೀರಭದ್ರಪ್ಪ ಕುಂಚನೂರ, ಬಸವರಾಜ ಯಾದವಾಡ, ಯುವನಾಯಕ ಮಾಹಾವೀರ ಬಿಲೋಡಿ, ರಾಮಣ್ಣ ತಮದಡ್ಡಿ, ಶ್ರೀಶೈಲ ಶಿಂದೆ, ಅರ್ಜುನ ಸಾಲ್ಗುಡೆ, ಸಂಸ್ಥೆಯ ಅಧ್ಯಕ್ಷ ಸಂಗಮೇಶ ಗುಟ್ಲಿ, ಶಾಲೆಯ ಕೋ ಆರ್ಡಿನೆಟರ್ ಉಷಾ ಗುಟ್ಲಿ, ಮುಖ್ಯಗುರುಮಾತೆ ಅಶ್ವಿನಿ ಸಿದ್ದವಗೊಳ, ಶಿಕ್ಷಕರಾದ ನಂದೇಶ ಸಿಂಹಾಸನ, ಮಲ್ಲು ಬೆಳ್ಳಂಕಿ, ಗೀತಾ ಬುರ್ಲಿ, ಶಿಲ್ಪಾ ಪಾಟೀಲ್, ಸಾವಿತ್ರಿ ಹೊಸೂರ್, ಸುನಂದಾ ದಿವಾನದರ್, ಭಾಗ್ಯಶ್ರೀ ಮಂಡಿ, ನಿಖೀತಾ ಗೊಂದಕರ, ಸಿಮರಿನ ಮಾಹಾಲಿಂಗಪೂರ, ಪ್ರಿಯಾಂಕಾ ಬುದ್ನಿ, ರವಿ ಸಿದ್ದವಗೊಳ, ನಾಗು ಮಾಲಾಪೂರ, ಅಬ್ದುಲ್ ಬಿಜಾಪುರ, ಸುರೇಶ ಚರಕಿ ಸೇರಿದಂತೆ ಅನೇಕರು ಇದ್ದರು.
ರೂ. 1.15 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ತೇರದಾಳ ಮತಕ್ಷೇತ್ರದ ಪ್ರಮುಖ ಕಾಲೇಜುಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ನೀಡಲಾಗಿದೆ. ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾ ಮೈದಾನ ಮತ್ತು ಕಂಪೌಂಡ್ ನಿರ್ಮಾಣಕ್ಕೆ ರೂ. 1.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯ ಮೂಲಕ ಮೂಲ ಸೌಕರ್ಯಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶನಿವಾರ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಈಗಾಗಲೇ ಎಂಟು ಹೆಚ್ಚುವರಿ ಕೋಣೆಗಳಿಗೆ ಅನುದಾನವನ್ನು ನೀಡಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವರ್ಗ ಕೊಣೆಗಳ ಕೊರತೆ ಬರುವುದಿಲ್ಲ. ಕಂಪೌAಡ್ ನಿರ್ಮಾಣದಿಂದಾಗಿ ಕಾಲೇಜಿಗೆ ಸೂಕ್ತ ರಕ್ಷಣೆ ದೊರೆಯಲಿದೆ.
ತೇರದಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಬಕವಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಅಭಿವೃದ್ದಿಗಾಗಿಯೂ ಕೂಡಾ ರೂ. 1 ಕೋಟಿಯಷ್ಟು ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನಗಳನ್ನು ನೀಡುವುದಾಗಿ ಉನ್ನತ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಕ್ಷೇತ್ರದ ಸರ್ಕಾರಿ ಕಾಲೇಜುಗಳನ್ನು ಆದರ್ಶ ಕಾಲೇಜುಗಳನ್ನಾಗಿ ನಿರ್ಮಾಣ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ಆಸಂಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಕ್ಕ ಕಾಂಬಳೆ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ಪ್ರಾಚಾರ್ಯ ಶಂಕರ ಅರಬಳ್ಳಿ, ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಡಾ.ಎಸ್.ಎಸ್.ಹೂಲಿ, ಜಯಪ್ರಕಾಶ ಸೊಲ್ಲಾಪುರ, ಬಾಬಾಗೌಡ ಪಾಟೀಲ, ಶ್ರೀಶೈಲ ದಲಾಲ, ಮಹಾದೇವ ಕೋಟ್ಯಾಳ, ರಜನಿ ಶೇಠೆ, ಚಿದಾನಂದ ಹೊರಟ್ಟಿ, ವಿಶ್ವನಾಥ ಸವದಿ, ಹೀರಾಚಂದ ಕಾಸರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.