ಜೆ.ಟಿ ದೇವೇಗೌಡ ಬಿಜೆಪಿಗೆ ಬಂದ್ರೆ ಸ್ವಾಗತ : ಡಿಸಿಎಂ ಕಾರಜೋಳ ಹೇಳಿಕೆ
Team Udayavani, Sep 15, 2019, 12:35 PM IST
ಬಾಗಲಕೋಟೆ : ಸಾರಿಗೆ ವ್ಯವಸ್ಥೆಯಲ್ಲಿ ಹೊಸ ನಿಯಮದ ಅನುಸಾರ ದುಬಾರಿ ದಂಡ ವಿಧಿಸುತ್ತಿರುವುದು, ದಂಡಕ್ಕೆ ಹೆದರಿ ಕಾನೂನು ಪಾಲನೆ ಮಾಡಲಿ ಅನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಡ ಸ್ವಲ್ಪ ಹೆಚ್ಚಾಗಿದೆ ಅಂತ ಎಲ್ಲ ರಾಜ್ಯದವರು ಹೇಳುತ್ತಿದ್ದಾರೆ. ದಂಡದ ಸ್ವರೂಪ ಹೆಚ್ಚಾಗಿರುದನ್ನು ಕೆಲವು ರಾಜ್ಯದವರು ಮಾರ್ಪಾಡು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅದರ ಬಗ್ಗೆ ನಮಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ನಾವು ಕೂಡಾ ಪುನರ್ ಪರಿಶೀಲನೆ ಮಾಡೋ ವಿಚಾರದಲ್ಲಿದ್ದೇವೆ ಎಂದರು. ಆದರೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಕಾನೂನು ಜಾರಿಗೆ ತಂದಿದೆ. ಸಾರಿಗೆ ನಿಯಮ ಪಾಲಿಸಬೇಕು, ಅಪಘಾತ ಕಡಿಮೆಯಾಗಬೇಕು ಅನ್ನೋದೆ ಹೊಸ ದಂಡ ಜಾರಿ ಉದ್ದೇಶವಾಗಿದೆ ಎಂದು ಹೇಳಿದರು.
ಸಾರಿಗೆಯಲ್ಲಿ ಹೊಸ ದಂಡ ಗುಜರಾತ್ ಮಾದರಿ ರಾಜ್ಯದಲ್ಲಿ ನಮ್ಮಲ್ಲಿ ಇನ್ನೂ ಚರ್ಚೆಯಾಗಿಲ್ಲ. ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
17 ಅನರ್ಹ ಕ್ಷೇತ್ರದಲ್ಲಿ ಚುನಾವಣೆ ವಿಚಾರ:
ನಮ್ಮದು ರಾಜಕೀಯ ಪಕ್ಷ. ಚುನಾವಣೆ ಬಂದಾಗ ಎದುರಿಸುತ್ತೇವೆ. 17 ಕ್ಷೇತ್ರದಲ್ಲೂ ನಮ್ಮದೂ ತಯಾರಿ ಇದೆ..ಅಷ್ಟೂ ಕ್ಷೇತ್ರದಲ್ಲೂ ಗೆಲುತ್ತೇವೆ. ಅನರ್ಹ ಶಾಸಕರ ಅಸಮಾಧಾನ ತೋಡಿಕೊಳ್ಳುವ ಪ್ರಶ್ನೆಯಿಲ್ಲ. ಕೋರ್ಟ್ ನಲ್ಲಿ ಕಾನೂನಾತ್ಮಕ ನಡೆಯುವಂಥ ಕೆಲಸ. ಕೋರ್ಟ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದರು..
ಬಿಜೆಪಿ ಆಪರೇಷನ್ ಪಾರ್ಟ್ 2 : ಜೆ ಟಿ ದೇವೆಗೌಡ ಬಿಜೆಪಿಗೆ ಬರುವ ವಿಚಾರ ಪ್ರತಿಕ್ರಿಯೆ ನೀಡಿದ ಕಾರಜೋಳ, ನಾವು ನಮ್ಮ ನಾಯಕರು ಪದೇ ಪದೇ ಹೇಳುತ್ತಿದ್ದೇವೆ. ಬಿಜೆಪಿ ನಿಂತ ನೀರಲ್ಲ,ಹರಿಯುವ ನೀರು. ಬಿಜೆಪಿ ಬಾಗಿಲು ಓಪನ್ ಇರುತ್ತೇ ಯಾರು ಬಿಜೆಪಿ ತತ್ವ,ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತ ಎಂದರು. ಜೆಟಿ ದೇವೇಗೌಡ ಬಿಜೆಪಿ ಬರುವುದು ನನಗೆ ಗೊತ್ತಿಲ್ಲ. ನನ್ನೊಂದಿಗೆ ಈ ಬಗ್ಗೆ ಯಾರೂ ಮಾತನಾಡಿಲ್ಲ ಎಂದು ತಿಳಿಸಿದರು.
ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಭೇಟಿ, ಹೈಕಮಾಂಡ್ ಹತ್ತಿರ, ಬಿಎಸ್ವೈ ಸೈಡ್ ಲೈನ್ ಮಾಡುವ ವಿಚಾರದ ಬಗ್ಗೆ ಕೇಳಿದಾಗ ಸ್ವಾರಿ,ಆ ರೀತಿ ಏನಿಲ್ಲ ಎಂದು ಪ್ರತಿಕ್ರಿಯೆ ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.