ಇಳಕಲ್ಲ: ಹುನಗುಂದ-ಇಳಕಲ್ಲ ಬರ ಪೀಡಿತವೆಂದು ಘೋಷಿಸಿ
ಮುಂಗಾರು ಮಳೆ ವಿಫಲವಾಗಿ ರೈತರು ಬೆಳೆದ ಬೆಳೆಗಳು ಒಣಗಿವೆ
Team Udayavani, Jul 20, 2023, 11:00 AM IST
ಇಳಕಲ್ಲ: ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕುಗಳಲ್ಲಿ ಮುಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ತಾಲೂಕಿನ ರೈತರ ಬೆಳೆಗಳು ಒಣಗುತ್ತಿದ್ದು, ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿ ರೈತರಿಗೆ ಸಹಾಯಧನ ಮಂಜೂರು ಮಾಡಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್
ಬಸವರಾಜ ಮೆಳವಂಕಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ ಮಾತನಾಡಿ, ಇಳಕಲ್ಲ ತಾಲೂಕು ಸಂಪೂರ್ಣ
ನೀರಾವರಿ ವ್ಯಾಪ್ತಿಗೆ ಒಳಪಡಬೇಕು. ಅವಳಿ ತಾಲೂಕಿನ ಕೆರೆಗಳ ಅಭಿವೃದ್ಧಿಪಡಿಸಿ ನೀರು ತುಂಬಿಸಬೇಕು, ಹೊಲಗಳಿಗೆ ಹೋಗುವ ರಸ್ತೆ ಸುಧಾರಣೆ ಮಾಡಬೇಕು, ಅವಳಿ ತಾಲೂಕಿನ ರೈತರ ಪಂಪಸೆಟ್ ಗಳಿಗೆ ಹಗಲು ಸಮಯದಲ್ಲಿ ಗುಣಮಟ್ಟದ ತ್ರಿಫೇಸ್ 10 ತಾಸು ವಿದ್ಯುತ್ ಪೂರೈಸಬೇಕು. ಇಳಕಲ್ಲ ತಾಲೂಕಿನಲ್ಲಿ ಪೂರ್ಣಾವಧಿಯ ನ್ಯಾಯಾಲಯ ಸ್ಥಾಪಿಸಿ ಜನರಿಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡಲು ಅನುಕೂಲ ಮಾಡಿಕೊಡಬೇಕು, ಈ ಮೊದಲಿನ ಸರಕಾರ ಜಾರಿಗೆ ತಂದ ಕೃಷಿ ಕಾನೂನು ವಾಪಸ್ ಪಡೆಯಬೇಕು. ರೈತರ ಜಮೀನಿನ ಪಹಣಿ ಪತ್ರಿಕೆ ಪಡೆಯಲು ಈಗ 25 ರೂ.ಗಳನ್ನು ಮಾಡಿದ್ದು ಅದನ್ನು ಹಿಂದಿನಂತೆ ರೂ.10 ಗಳಿಗೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ, ಜಿಲ್ಲೆಯ ಇಳಕಲ್ಲ ಹುನಗುಂದ ತಾಲೂಕಿನಲ್ಲಿ
ಮುಂಗಾರು ಮಳೆ ವಿಫಲವಾಗಿ ರೈತರು ಬೆಳೆದ ಬೆಳೆಗಳು ಒಣಗಿವೆ. ಸಾಲ ಸೂಲ ಮಾಡಿ ಭರವಸೆ ಇಟ್ಟುಕೊಂಡು ಬೀಜಗಳನ್ನು ಖರೀದಿಸಿ ಹೊಲಗಳಲ್ಲಿ ಬಿತ್ತನೆ ಮಾಡಿದ್ದು, ಆ ಭರವಸೆ ಈಡೇರುವಂತೆ ಕಾಣುತ್ತಿಲ್ಲ. ಅದಕ್ಕಾಗಿ ರೈತರ ಸಂಕಷ್ಟ ಅರಿತು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿ ಸಹಾಯಧನ ನೀಡಬೇಕು. ರೈತರ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಲುಪಿಸಿ ಶೀಘ್ರ ರೈತರಿಗೆ ಸಹಾಯಧನ ನೀಡಬೇಕು ಎಂದು ಮನವಿ ಮಾಡಿದರು.
ವಿಜಯ ಮಹಾಂತೇಶ ದಾಸೋಹ ಭವನದಿಂದ ರೈತರು ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ
ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಮೆರವಣಿಗೆಯಲ್ಲಿ ಇಳಕಲ್ಲ ತಾಲೂಕು ಅಧ್ಯಕ್ಷ ಮೋಹಶಿನ್ ನಧಾಪ್, ಹುನಗುಂದ ಅಧ್ಯಕ್ಷ
ಬಸನಗೌಡ ಪೈಲ್, ಸದಸ್ಯರಾದ ಎಂ.ಆರ್.ಪಾಟೀಲ, ರಸೂಲ್ ಸಾಬ್ ತಶಿಲ್ದಾರ್, ಮಹಾಲಿಂಗಪ್ಪ ಅವಾರಿ, ಬಸವರಾಜ ಹುಡೆದಮನಿ, ಬಸನಗೌಡ ಪಾಟೀಲ ಕಿಲಾ. ಅಜಯಕುಮಾರ. ಹಾಲಗಂಗಾಧರಮಠ.ಮುತ್ತುರಾಜ ಕರಡಿ. ಉಸ್ಮಾನಾಬ ಹುಣಚಗಿ. ಹನಮಂತಪ್ಪ ಕರಕಪ್ಪ ತೊಪಲಕಟ್ಟಿ, ಕನಸಾವಿ, ವೆಂಕಣ್ಣ ತೆಗ್ಗಿಮನೆ, ರಾಜಮಹ್ಮದ ನದಾಫ, ವಿಷ್ಣು ರಜಪೂತ ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.