ಅಕ್ರಮ ಮರಳು ದಂಧೆ ಅವ್ಯಾಹತ
ಮರಳು ಮಾಫಿಯಾಕ್ಕೆ ಭಯವಿಲ್ಲ,ಗಣಿ ಸಚಿವರ ಕಣ್ತಪ್ಪಿಸಿ ನಡೆಯುತ್ತಿದೆ ವ್ಯವಹಾರ
Team Udayavani, Mar 17, 2021, 3:27 PM IST
ಬೀಳಗಿ: ಕೃಷ್ಣೆಯ ಒಡಲಲ್ಲಿ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಲಾಗುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಸಚಿವರ ತವರಲ್ಲಿಯೇ ಅವರಕಣ್ತಪ್ಪಿಸಿ ಇಂತಹ ವ್ಯವಹಾರ ನಡೆಯುತ್ತಿದೆ. ಹೌದು. ತಾಲೂಕಿನ ಸಿದ್ದಾಪುರ, ಕೊಂತಿಕಲ್‌ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ನಿತ್ಯವೂಮರಳು ಎತ್ತುವ ಅಕ್ರಮ ಕಾರ್ಯ ನಡೆಯುತ್ತಲೇ ಇದೆ.
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ಅವರು ಜನರಿಗೆ ಸಮಸ್ಯೆಯಾಗದಿರಲಿ, ಅವರಿಗೆ ಕಡಿಮೆ ದರದಲ್ಲಿ ಮರಳು ದೊರೆಯಲೆಂಬ ಕಾಳಜಿಯೊಂದಿಗೆ ಮರಳು ನೀತಿಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಟ್ರ್ಯಾಕ್ಟರ್, ಎತ್ತಿನ ಬಂಡಿ, ಬೈಕ್ ಮೇಲೆ ಮರಳು ಸಾಗಿಸಿದರೆ ಹೆಚ್ಚಿನ ದಂಡ ವಿಧಿಸುವಂತಿಲ್ಲ. ಅಲ್ಲದೇ ಆಶ್ರಯ ಮನೆ ಕಟ್ಟುವವರಿಗೆ,ಬಡ ಜನರಿಗೆ ಕೈಗೆಟಕುವ ದರದಲ್ಲಿ ಮರಳು ದೊರೆಯಬೇಕೆಂಬುದು ಸಚಿವರ ಆಶಯ.ಆದರೆ, ಸಚಿವರ ಆಶಯಕ್ಕೆ ವಿರುದ್ಧವಾಗಿಸಿದ್ದಾಪುರ, ಕೊಂತಿಕಲ್ ಬಳಿ ಕೃಷ್ಣೆಯ ಒಡಲುಬಗೆದು ಮರಳು ತೆಗೆಯಲಾಗುತ್ತಿದೆ ಎಂಬ ಆರೋಪ ಪ್ರಬಲವಾಗಿ ಕೇಳಿ ಬಂದಿದೆ.
ನಮ್ಮ ಭಾಗದಲ್ಲಿ ಸರಿಯಾದ ಮಳೆ ಇಲ್ಲದೆ ನೀರಿನ ಸಮಸ್ಯೆ ಎದುರಾಗಿದೆ. ಭೂಗರ್ಭಕ್ಕೆಕೈ ಹಾಕಿ ಮರಳನ್ನು ತೆಗೆಯುದರಿಂದಅಂತರ್ಜಲ ಕುಸಿತವಾಗುತ್ತದೆ. ಇದರಿಂದ ನೀರಿನ ಉಂಟಾಗುತ್ತದೆ. ನದಿಯಲ್ಲಿ ನೀರಿನಮಟ್ಟವೂ ಇಳಿಕೆಯಾಗುತ್ತದೆ. ಕಾರಣ ಸರಕಾರಸಂಪೂರ್ಣ ಅಕ್ರಮ ಮರಳು ದಂಧೆಗೆ ಕಡಿವಾಣಹಾಕಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.ಆದರೆ, ಜನರಿಗೆ ತೊಂದರೆ ಆಗದ ಹಾಗೆಸರಕಾರ ಸೂಕ್ತ ಕಾನೂನು ಚೌಕಟ್ಟಿನಲ್ಲಿ ಮರಳಿಗೆಪರವಾನಗಿ ನೀಡಿತ್ತು. ಅಂತಹವರಿಗೆ ಮಾತ್ರ ಮರಳು ಸಾಗಣಿಕೆಗೆ ಅವಕಾಶ ನೀಡಿತ್ತು.
ಲೋಕೋಪಯೋಗಿ ಇಲಾಖೆ ದಾಖಲೆ ಪ್ರಕಾರ, ಸಿದ್ದಾಪುರ, ಕೊಂತಿಕಲ್ ಬಳಿ ಮರಳುಪಾಯಿಂಟ್‌ಗಳಿಲ್ಲ. ಅದರಲ್ಲೂ ನದಿಯಿಂದ ಮರಳು ಕೆಲವೊಂದು ನಿಯಮಗಳಿವೆ. ಆಯಾವ ನಿಯಮಗಳೂ ಇಲ್ಲಿ ಪಾಲನೆಯಾಗುತ್ತಿಲ್ಲ ಎಂಬ ಆರೋಪವಿದೆ.
ನಮ್ಮ ತಾಲೂಕಿನಲ್ಲಿ ಅಕ್ರಮಮರಳು ವ್ಯವಹಾರ ಕಡಿವಾಣಹಾಕುತ್ತೇವೆ. ಈಗಾಗಲೇ ಎಲ್ಲಾ ಮರಳಿನಪಾಯಿಂಟ್‌ಗಳನ್ನು ಬಂದ್ ಮಾಡಲುಸೂಚಿಸಲಾಗಿದೆ. ಕೆಲವೆಡೆ ಅಕ್ರಮ ಮರಳು ವ್ಯವಹಾರ ನಡೆಸಿದವರ ಮೇಲೆಪ್ರಕರಣ ಕೂಡ ದಾಖಲಿಸಲು ಕ್ರಮಕೈಗೊಳ್ಳಲಾಗುವುದು. – ಆನಂದ ಕೋಲಾರ, ತಹಶೀಲ್ದಾರ ಬೀಳಗಿ
-ಚೇತನ ಆರ್.ಕಣವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.