ವಿಶ್ವಕ್ಕೆ ಗುರುವಾಗುತ್ತಿದೆ ಭಾರತ: ಸೂಲಿಬೆಲೆ
•ಪರಿಸರ ಉಳಿಸಲು ಗಿಡ-ಮರ ಬೆಳೆಸಿ•ಸಸಿ ನೆಟ್ಟು ಉಸಿರು ಹಂಚೋಣ ಕಾರ್ಯಕ್ರಮ ಯಶಸ್ವಿಗೊಳಿಸಿ
Team Udayavani, Jul 8, 2019, 10:00 AM IST
ಬನಹಟ್ಟಿ: ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಸಸಿ ನೆಡಲು ಕಾರ್ಯಕರ್ತರು, ಜೈನ ಸಮಾಜದ ಶ್ರಾವಕ- ಶ್ರಾವಕಿಯರು ಗಿಡ ಹಿಡಿದುಕೊಂಡು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬನಹಟ್ಟಿ: ಭಾರತ ವಿಶ್ವ ಗುರುವಾಗುತ್ತಿದೆ. ಇದಕ್ಕೆ ದೇಶದ ಮಣ್ಣಿನ ಗುಣವೇ ಕಾರಣ ಎಂದು ಯುವ ಬ್ರಿಗೇಡ್ ನೇತಾರ ಸೂಲಿಬೆಲೆ ಚಕ್ರವರ್ತಿ ಹೇಳಿದರು.
ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಕುಲರತ್ನಭೂಷಣ ಮಹಾರಾಜ ನೇತೃತ್ವದಲ್ಲಿ 10 ಸಾವಿರಕ್ಕೂ ಅಧಿಕ ಸಸಿ ನೆಟ್ಟು ಉಸಿರು ಹಂಚೋಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಉಳಿಸಲು ಗಿಡಮರಗಳನ್ನು ಬೆಳೆಸಬೇಕು. ಅದನ್ನು ಕಡಿದು ಹಾಳು ಮಾಡಿದರೆ ಮುಂದಿನ ಪೀಳಿಗೆ ಬದುಕುವುದು ಕಷ್ಟವಾಗುತ್ತದೆ. ಗಿಡಮರ ಹಚ್ಚಿ ಪರಿಸರ ಬೆಳೆಸಲಾಗದಿದ್ದರೆ ಸುಮ್ಮನಿದ್ದು ಬಿಡಿ, ಅದನ್ನು ಕಡಿಯಬೇಡಿ. ರಾಜ್ಯದಲ್ಲಿ ಹಲವು ವರ್ಷಗಳಿಂದ ಲಕ್ಷಾಂತರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 2015ರಲ್ಲಿ ಭದ್ರಗಿರಿ ಬೆಟ್ಟದಲ್ಲಿ ನೆಟ್ಟ ಗಿಡಗಳು ಬೃಹತ್ತಾಗಿ ಬೆಳೆದಿದ್ದು ಖುಷಿ ನೀಡಿದೆ ಎಂದರು.
ಹಳಿಂಗಳಿ ಭದ್ರಗಿರಿ ಬೆಟ್ಟ ಇತಿಹಾಸ ಪ್ರಸಿದ್ದವಾಗಿದ್ದು, ಜೈನ್ ಮುನಿಗಳಾದ ಕುಲರತ್ನಭೂಷಣ ಮಹಾರಾಜರು ಲಕ್ಷಾಂತರ ಗಿಡ ನೆಟ್ಟು ಇಲ್ಲಿ ಕದಂಭವನ, ಇನ್ನೊಂದು ಅಶೋಕವನ ಎಂದು ಎರಡು ವನಗಳ ನಿರ್ಮಾಣದ ಮಾಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕಿನ ಅನೇಕ ಶಾಲೆ ಕಾಲೇಜಿನ ಅನೇಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಯುವಕರು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಮಹಿಳಾ ಸಂಘದ ಸದಸ್ಯರು, ಜೈನ್‌ಸಮಾಜದ ಯುವಕರು, ಜೈನೇತರ ಯುವಕರು ಗಿಡ ನೆಡುವ ಕಾರ್ಯಕರ್ಮದಲ್ಲಿ ಭಾಗಿಯಾಗಿದ್ದರು.
‘ಉಸಿರು ಹಂಚೋಣ’ ಕಾರ್ಯಕ್ರಮದಲ್ಲಿ ಭಾರತೀಯ ಥ್ರೋಬಾಲ್ ತಂಡದ ನಾಯಕಿ ಕೃಪಾ ಜಿ.ಪಿ., ಯುವ ಬ್ರಿಗೇಡ್‌ನ ರಾಜ್ಯ ಸಂಚಾಲಕ ಕಿರಣ ರಾಮ್, ಚಂದ್ರಶೇಖರ, ವರ್ಧಮಾನ, ವಿಭಾಗ ಸಂಚಾಲಕ ಸಿದ್ದು ಉಳ್ಳಾಗಡ್ಡಿ, ರಾಹುಲ್ ಉಪಾಧ್ಯೆ, ಶಾಸಕರಾದ ಆನಂದ ನ್ಯಾಮಗೌಡ ಹಾಗೂ ಸಿದ್ದು ಸವದಿ, ಸಂಜಯ ಪಾಟೀಲ, ಶಶಿಕಾಂತ ನಾಯಕ, ಲಕ್ಷ್ಮಣ ಸವದಿ, ಹಿಂದುಪರ ಸಂಘಟನೆಗಳ ಮುಖಂಡ ನಂದಕುಮಾರ ಗಾಯಕವಾಡ, ಸಿಎಂ ಆಪ್ತ ಕಾರ್ಯದರ್ಶಿ ಡಾ| ವೆಂಕಟಾಚಲ, ದೇವಲ ದೇಸಾಯಿ, ನೇಕಾರ ಮುಖಂಡರಾದ ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ಕಲ್ಲಪ ಹಿಪ್ಪರಗಿ, ಈರಪ್ಪ ಹಿಪ್ಪರಗಿ, ಭುಜಬಲಿ ವೆಂಕಟಾಪುರ, ದಾನಿಗೊಂಡ ಶಿಕ್ಷಣ ಸಂಸ್ಥೆಗಳ ಚೇರಮನ್ ಎಂ. ಎಸ್. ದಾನಿಗೊಂಡ, ಸಿಪಿಐ ಅಶೋಕ ಸದಲಗಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.