ಭಾರತೀಯ ಸಂವಿಧಾನ ವಿಶ್ವಕ್ಕೆ ಮಾದರಿ: ನಂಜಯ್ಯನಮಠ
ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವೆ ಸಂವಿಧಾನ
Team Udayavani, May 14, 2022, 6:14 PM IST
ಬಾಗಲಕೋಟೆ: ಡಾ|ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ್ದಾರೆ. ವಿಶ್ವದ 250 ದೇಶಗಳಿಗೆ ಹೋಲಿಕೆ ಮಾಡಿದರೆ, ಅತ್ಯಂತ ಶ್ರೇಷ್ಠವಾಗಿದೆ ಎಂದು ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಡಿಎಸ್ ಎಸ್‌ನಿಂದ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಹಳ್ಳದಮನಿ ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕೆಲವು ಜನಪ್ರತಿನಿ ಧಿಗಳು ಈ ಸಂವಿಧಾನ ಬದಲಿಸಲು ಅಧಿ ಕಾರಕ್ಕೆ ಬಂದಿದ್ದೇವೆ ಎಂದು ಹೇಳುತ್ತಾರೆ. ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನೇ ಬದಲಿಸುತ್ತೇವೆ ಎಂಬುವರಿಂದ ನಾವು ಜಾಗೃತರಾಗಿರಬೇಕು ಎಂದು ಹೇಳಿದರು. ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ, ಡಾ| ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ನಮ್ಮ ಮನದಲ್ಲಿ ಮೂಡಿಸಿಕೊಂಡು ಶಿಕ್ಷಣವಂತರಾಗಬೇಕು ಎಂದು ತಿಳಿಸಿದರು.
ಎಚ್.ಟಿ. ಪೋತೆ ಮಾತನಾಡಿ, ಮೀಸಲಾತಿ ಬೇಡ ಎಂದು ಹೇಳುವುದು ಮೂಲಭೂತ ವಾದಿಗಳ ಹುನ್ನಾರ. ಎಲ್ಲಿಯವರೆಗೆ ಸಾಮಾಜಿಕ ಸಮಾನತೆ ಬರುವುದಿಲ್ಲವೊ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಸಾಗರ ಬಣ) ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಅದನ್ನು ರಕ್ಷಣೆ ಮಾಡಬೇಕಾದರೆ. ಸಂಘಟಿತರಾಗಿ ಹೋರಾಟದ ಮುಖಾಂತರ ಸಂವಿಧಾನ ರಕ್ಷಣೆ ಮಾಡಬೇಕು. ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವೆ ಸಂವಿಧಾನ ಎಂದು ಹೇಳಿದರು. ಈ ದೇಶದಲ್ಲಿ ನಾಗರಿಕ ಹಕ್ಕು ದಮನವಾಗಿದೆ ಎಂದು
ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ಡಾ| ವಿನಾಯಕ ಕುಸಬಿ, ಹಾಜಿಸಾಬ ದಂಡಿನ, ಜಿಲ್ಲಾ ಖಜಾಂಚಿ ಬಸವರಾಜ ಪಾತ್ರೋಟ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಸಂಚಾಲಕ ಕಾಶಿಂಅಲಿ ಗೋಠೆ, ರಬಕವಿ ಬನಹಟ್ಟಿ ತಾಲೂಕು ಸಂಚಾಲಕ ಬಸವರಾಜ ದೊಡಮನಿ, ಜಮಖಂಡಿ ತಾಲೂಕು ಸಂಚಾಲಕ ಸದಾಶಿವ ಐನಾಪುರ, ಗುಳೆದಗುಡ್ಡ ತಾಲೂಕು ಸಂಚಾಲಕ ಸದಾಶಿವ ಪಾದನಕಟ್ಟಿ, ಬಾದಾಮಿ ತಾಲೂಕ ಸಂಚಾಲಕ ರಂಗಪ್ಪ ಚಲವಾದಿ, ಬಾಗಲಕೋಟೆ ತಾಲೂಕ ಸಂಚಾಲಕ ಹುಲ್ಲಪ್ಪ ಅಂಟರಠಾಣಾ, ವಿಠಲ ಸಿಂಗೆ, ರಾಜು ಪೋಳ, ಪ್ರಕಾಶ ಗೊಡೆಪ್ಪನವರ, ರಮೇಶ ಪೂಜಾರಿ, ಪರಶು ಕಾಂಬಳೆ, ಅಪ್ಪಶಿ ಕಾಂಬಳೆ, ಪರಮಾನಂದ ಕಾಂಬಳೆ, ಬಸವರಾಜ ಬನ್ನೂರ, ಹನಮಂತ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು. ಎಚ್.ಎನ್. ನೀಲನಾಯಕ ಸ್ವಾಗತಿಸಿದರು. ಪ್ರೊ| ಸದಾಶಿವ ಮರ್ಜಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದೆ ಸಿಂಗೆ ನೆರವೆರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.