ಗ್ರಾಮೀಣ ಭಾಗಕ್ಕೂ ಸೋಂಕು: ಕೃಷಿ ಚಟುವಟಿಕೆ ಕುಂಠಿತ
Team Udayavani, Jun 29, 2020, 1:20 PM IST
ರಾಂಪುರ: ಕೋವಿಡ್ ಮಹಾಮಾರಿ ಹಳ್ಳಿ ಹಳ್ಳಿಗೂ ವಿಸ್ತರಿಸಿದ್ದು, ಗ್ರಾಮೀಣ ಭಾಗದ ಜನರು ಭೀತಿಯಲ್ಲೇ ಬದುಕು ನಡೆಸುವಂತಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಮಾತ್ರ ದುಷ್ಪರಿಣಾಮ ಬೀರುತ್ತಿದೆ.
ಇದೀಗ ಪ್ರಾರಂಭವಾದ ಮುಂಗಾರು ಹಂಗಾಮು ಮಳೆರಾಯನ ಕಣ್ಣು ಮುಚ್ಚಾಲೆ ನಡುವೆ ಡೋಲಾಯಮಾನವಾಗಿದೆ. ಬೇಸಾಯ ಮಾಡಿ ಭೂಮಿಯಲ್ಲಿ ಬಿತ್ತನೆ ಮತ್ತಿತರ ಚಟುವಟಿಕೆ ನಡೆಸುವ ಕೆಲಸ ಚುರುಕುಗೊಳ್ಳುವ ಮೊದಲೇ ಕೋವಿಡ್ ರೋಗಬಾಧೆ ಕೃಷಿ ಕಾರ್ಯಕ್ಕೆ ತೊಡಕನ್ನುಂಟು ಮಾಡುತ್ತಿದೆ.
ತಲ್ಲಣಗೊಂಡ ಗ್ರಾಮಗಳು: ಆರಂಭದಲ್ಲಿ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಸೋಂಕು ಇದೀಗ ಗ್ರಾಮೀಣ ಭಾಗಕ್ಕೂ ತನ್ನ ಕೆನ್ನಾಲಿಗೆ ಚಾಚಿದೆ. ಮುಡಪಲಜೀವಿ ಗ್ರಾಮದ ವ್ಯಕ್ತಿಯೊಬ್ಬ ಸೋಂಕಿನಿಂದ ಮೃತಪಟ್ಟ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಅಕ್ಷರಶಃ ಸುತ್ತಲಿನ ಗ್ರಾಮಗಳ ಜನರು ತಲ್ಲಣಗೊಂಡಿದ್ದಾರೆ.
ಕೃಷಿಗೆ ಹಿನ್ನೆಡೆ: ಸೋಂಕು ಹಿನ್ನೆಲೆ ಕೆಲವು ಗ್ರಾಮಗಳಲ್ಲಿ ಕೃಷಿ ಕಾರ್ಯಕ್ಕೆ ಹಿನ್ನಡೆಯುಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಒಕ್ಕುಲುತನವನ್ನೇ ಅವಲಂಬಿಸಿರುವವರ ಪರಿಸ್ಥಿತಿ ಚಿಂತೆಗೀಡಾಗಿಸಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುವ ಹಂತದಲ್ಲಿ ಬರೋಬ್ಬರಿ ಕೆಲವು ದಿನಗಳಿಂದ ಮಳೆ ಮರೆಯಾಗಿದೆ. ಕೋವಿಡ್ ಹಾವಳಿ ಮನೆಬಿಟ್ಟು ಹೊರಬಾರದಂತೆ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.