Love: ಇನ್ಸ್ಟಾಗ್ರಾಂನಲ್ಲಿ ಪ್ರೀತಿಸಿ ಮದುವೆ; ಐದೇ ದಿನಕ್ಕೆ ಕೈ ಕೊಟ್ಟು ನಾಪತ್ತೆಯಾದ ಪತಿ!
Team Udayavani, Oct 8, 2023, 11:33 AM IST
ಬಾಗಲಕೋಟೆ: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಪತ್ನಿಗೆ ಕೈಕೊಟ್ಟು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಶಿಗಿಕೇರಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೊಹ್ಮದ ಇಮ್ರಾನ್ ಎಂಬಾತ, ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯ ಕರುಣಾ ಬಾಡೀಜ್ ಮೂಲದ ನರಿಜಾಬೇಗಂ ಎಂಬಾಕೆಯನ್ನು ಮದುವೆಯಾಗಿ ಐದೇ ದಿನಕ್ಕೆ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬಾಗಲಕೋಟೆಯಲ್ಲಿ ವಾಹನ ಚಾಲಕನಾ ಗಿರುವ ಮೊಹ್ಮದ ಇಮ್ರಾನ್ ಮತ್ತು ಬಿಹಾರದ ನರೀಜಾಬೇಗಂ ಇಬ್ಬರೂ ಈ ಮೊದಲೇ ಬೇರೆ ಬೇರೆ ಮದುವೆಯಾಗಿದ್ದರು. ಇಮ್ರಾನ್ ತನ್ನ ಪತ್ನಿಗೆ, ನರೀಜಾಬೇಗಂ ತನ್ನ ಪತಿಗೆ ತಲಾಖ್ ನೀಡಿದ್ದರು. ಬಳಿಕ ಇವರಿಬ್ಬರೂ, ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ, ಪ್ರೀತಿಸುತ್ತಿದ್ದರು. ಬಿಹಾರಕ್ಕೆ ಹೋಗಿ ನರೀಜಾಬೇಗಂ ಅವರನ್ನು ಕರೆದುಕೊಂಡು ಹಿರಿಯರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ದರು. ಆದರೆ ಈಕೆ ಈಗ ಪತಿ ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾಳೆ.
ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.