ನೀರಾವರಿಗೆ ಶೇ. 15 ಹಣ ಮೀಸಲಿಡಿ; ಎಸ್. ಆರ್. ಪಾಟೀಲ
ಅನುಷ್ಟಾನಗೊಳ್ಳದೇ ಇರುವುದರಿಂದ ಉತ್ತರ ಕರ್ನಾಟಕದ ಜನ ಅಧಿಕವಾಗಿ ವಲಸೆ ಹೊಗುತ್ತಿದ್ದಾರೆ
Team Udayavani, Apr 16, 2022, 5:25 PM IST
ಕೂಡಲಸಂಗಮ: ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಉತ್ತರ ಕರ್ನಾಟಕ ಮಹಾದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ನವಲಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕೃಷ್ಣಾ, ಮಹಾದಾಯಿ, ನವಲಿ ಸಂಕಲ್ಪ ಯಾತ್ರೆ ಆರಂಭಿಸಲಾಗಿದೆ ಎಂದು ಯಾತ್ರೆಯ ನೇತೃತ್ವ ವಹಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಆರ್. ಪಾಟೀಲ ಹೇಳಿದರು.
ಕೂಡಲಸಂಗಮ ಸಭಾಭವನದಲ್ಲಿ ನಡೆದ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಈ ನೀರಾವರಿ ಯೋಜನೆಗೆ ಶೇ. 15ರಷ್ಟು ಹಣ ಮೀಸಲಿಟ್ಟಾಗ ಯೋಜನೆ ಯಶಸ್ವಿಯಾಗುವುದು. ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಬಜೆಟ್‌ನಲ್ಲಿ ಐದು ಸಾವಿರ ಕೋಟಿ ಮೀಸಲಿಟ್ಟಿದೆ. ಇದರಿಂದ ಯೋಜನೆಗಳು ವಿಳಂಬವಾಗುತ್ತವೆ. 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಗೆ 60 ಸಾವಿರ ಕೋಟಿ ಅಗತ್ಯ ಇದ್ದು, ಇದರಿಂದ 7 ಜಿಲ್ಲೆಯ
14 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಪಕ್ಷಾತೀತವಾಗಿ ನಡೆಸುತ್ತಿರುವ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರಕಿದೆ. ಸ್ವಪಕ್ಷದಿಂದ ನೀರಾವರಿ ಯೋಜನೆಗೆ ಅನ್ಯಾಯವಾದರೂ ವಿರೋಧಿ ಸುವ ಕಾರ್ಯ ಮಾಡುತ್ತೇನೆ. ಉತ್ತರ ಕರ್ನಾಟಕದ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಹೋರಾಟ ಅಗತ್ಯ ಇದ್ದು, ಎಲ್ಲರೂ ಬೆಂಬಲಿಸಬೇಕು ಎಂದು ಕರೆಕೊಟ್ಟರು.
ನಾರಾಯಣಪುರ ಜಲಾಶಯ ಹಿನ್ನಿರಿನಲ್ಲಿ ಮುಳುಗಡೆಗೊಂಡ ಪುನರ್ ವಸತಿ ಗ್ರಾಮಗಳಿಗೆ ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸಲು ವಿಫಲವಾಗಿದೆ. 40 ವರ್ಷ ಗತಿಸಿದರೂ ಈ ಯೋಜನೆಗೆ ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರು ಇನ್ನೂ ತಗಡಿನ ಶೆಟ್ಟಿನಲ್ಲಿ ವಾಸವಿರುವರು. ಇಂದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ನೀರಾವರಿ ಯೋಜನೆಗಳು ಸಮರ್ಪಕ ಅನುಷ್ಟಾನಗೊಳ್ಳದೇ ಇರುವುದರಿಂದ ಉತ್ತರ ಕರ್ನಾಟಕದ ಜನ ಅಧಿಕವಾಗಿ ವಲಸೆ ಹೊಗುತ್ತಿದ್ದಾರೆ. ಈ ಮೂರು ನೀರಾವರಿ ಯೋಜನೆಗಳು ಅನುಷ್ಟಾನಗೊಂಡರೆ ಯಾರು ವಲಸೆ ಹೋಗುವುದಿಲ್ಲ, ಬೇರೆ ರಾಜ್ಯದವರು ನಮ್ಮ ಕಡೆ ವಲಸೆ ಬರುವರು. ನವಲಿ ಬಳಿ ತುಂಗಭದ್ರಾ ನದಿಗೆ ಸಮತೋಲನ ಜಲಾಶಯ ನಿರ್ಮಿಸಿ 37 ಟಿ.ಎಂ.ಸಿ ನೀರು ಸಂಗ್ರಹಿಸಿ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಯ ಜಮೀನುಗಳನ್ನು ನೀರಾವರಿಗೆ ಒಳಪಡಿಸಬಹುದು ಎಂದು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ನೀರಾವರಿ ಯೋಜನೆಗಳ ಶಾಶ್ವತ ಅನುಷ್ಠಾನಕ್ಕೆ ಆಂದೋಲನದ ಅಗತ್ಯವಿದ್ದು, ಈ ಯಾತ್ರೆಗೆ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದರು. ಎಸ್‌ಆರ್‌ಎನ್‌ಇ ಫೌಂಡೇಶನ್ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಪ್ರಾಸ್ತಾವಿಕವಾಗಿ ಮತನಾಡಿದರು. ಕಳಸಾ ಬಂಡೂರಿ ಹೋರಾಟ ವೇದಿಕೆಯ ವೀರೇಶ ಸೊಬರದಮಠ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡರಾದ ಎಲ್.ಎಂ.ಪಾಟೀಲ, ಎಂ.ಎಸ್. ಪಾಟೀಲ, ಬಸಪ್ಪ ಹೆಸರೂರ, ಅಬ್ದುಲರಜಾಕ್ ತಟಗಾರ, ಜಗದೀಶ ಹೊಸಮನಿ, ಚೇತನ ಮುಕ್ಕನವರ, ಶಿವಪ್ಪ ಹೊರಕೇರಿ, ಎಸ್.ಟಿ.ಪಾಟೀಲ, ಎಮ್.
ಎನ್.ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.