ನೇಕಾರರಿಗೆ ಸಾಲಮನ್ನಾ ಆದೇಶ ಪ್ರತಿ ವಿತರಣೆ
Team Udayavani, Mar 16, 2020, 2:51 PM IST
ಬನಹಟ್ಟಿ: ಸಹಕಾರಿ ಸಂಘಗಳು ನೇಕಾರರಿಗೆ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಪರಿಶೀಲನೆ ಮಾಡಿ ನಂತರ ಪ್ರಮಾಣ ಪತ್ರ ನೀಡಬೇಕು. ಈ ಸಂದರ್ಭದಲ್ಲಿ ಸಹಕಾರಿ ಸಂಘಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಮೂಡಲಗಿ ಕುರುಹಿನಶೆಟ್ಟಿ ಕೊ-ಆಫ್ ಕ್ರೆಡಿಟ್ ಸೊಸೈಟಿಯ ಸ್ಥಳೀಯ ಶಾಖೆಯಲ್ಲಿ ಸಾಲ ಪಡೆದ ನೇಕಾರರ ಸಾಲ ಮನ್ನಾ ಮರುಪಾವತಿ ಅದೇಶದ ಪ್ರತಿಗಳನ್ನು ನೇಕಾರರಿಗೆ ವಿತರಣೆ ಮಾಡಿ ಅವರು ಮಾತನಾಡಿದರು. ನೇಕಾರರಿಗೆ ಸಾಲ ನೀಡುವ ವಿಧಾನವೂ ಕೂಡಾ ರೈತರಂತೆ ಸರಳೀಕರಣಗೊಳ್ಳಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಇನ್ನೂ ನೇಕಾರರ ಕ್ಯಾಶ್ ಕ್ರೆಡಿಟ್ ಸೌಲಭ್ಯ ಗೊಂದಲದ ಗೂಡಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ನೇಕಾರರ ಕ್ಯಾಶ್ ಕ್ರೆಡಿಟ್ ಸೌಲಭ್ಯವನ್ನು ಕೂಡಾ ಮನ್ನಾ ಮಾಡಲಾಗುವುದು. ಸಾಲ ಮನ್ನಾ ಸೌಲಭ್ಯ ಪಡೆದುಕೊಂಡ ನೇಕಾರರು ಮುಂದಿನ ದಿನಗಳಲ್ಲಿ ಸ್ವಾವಲಂಬಿಗಳಾಗಿ ಬದುಕಲಿ ಎಂದರು.
ಇದೇ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯ ಕಚೇರಿಯ ಅಧ್ಯಕ್ಷ ಬಿ.ಸಿ. ಮುಗಳಖೋಡ, ಸ್ಥಳೀಯ ಸಲಹಾ ಸಮಿತಿ ಕಾರ್ಯಾಧ್ಯಕ್ಷ ಗಂಗಪ್ಪ ಮಂಟೂರ ಮಾತನಾಡಿ, ಸಹಕಾರಿ ಸಂಘದ 67 ಜನ ಫಲಾನುಭವಿಗಳ 29,83,668 ರೂ. ಖಾತೆಗೆ ಜಮೆ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ 24 ಫಲಾನುಭವಿಗಳ ರೂ.27,16,216 ಸಾಲ ಮನ್ನಾ ಮೊತ್ತ ಜಮೆ ಆಗಬೇಕಾಗಿದೆ ಎಂದರು.
ಉಪಾಧ್ಯಕ್ಷ ಎಲ್.ಎಲ್. ಪೂಜೇರಿ, ವಿಷ್ಣುಕಾಂತ ಲಡ್ಡಾ, ಎಸ್.ಬಿ. ವಸ್ತದ, ಬಿ.ಎಸ್. ಗಿಡದಾನಪ್ಪಗೋಳ, ವಿ.ಎನ್. ಡುಮಕಿಮಠ, ಈಶ್ವರ ಪಟಗುಂಡಿ, ಎಚ್.ಐ. ಮುಲ್ಲಾ, ರಾಜು ಅಂಬಲಿ, ಚನಮಲ್ಲಪ್ಪ ಮೂಲಿಮನಿ, ಕುಮಾರ ಕದಂ, ಲಕ್ಕಪ್ಪ ಪಾಟೀಲ, ಪ್ರವೀಣ ಧಬಾಡಿ, ಬಸು ಅಮಟಿ ಇದ್ದರು. ಸಂಘದ ವ್ಯವಸ್ಥಾಪಕ ಪ್ರಮೋದ ಯಲಬುರ್ಗಿಮಠ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.