ಹಳ್ಳ ಹಿಡಿಯದಿರಲಿ ಮತ್ತೂಂದು ಹಳ್ಳಿ ಯೋಜನೆ!

366 ಕೋಟಿ ವ್ಯಯಿಸಲು ಜಿಲ್ಲಾಡಳಿತ ನಿರ್ಧಾರ

Team Udayavani, May 22, 2020, 9:32 AM IST

ಹಳ್ಳ ಹಿಡಿಯದಿರಲಿ ಮತ್ತೂಂದು ಹಳ್ಳಿ ಯೋಜನೆ!

ಬಾಗಲಕೋಟೆ: ಜಿಲ್ಲೆಯ ಗ್ರಾಮೀಣ ಜನರಿಗೆ ಕುಡಿಯುವ ನೀರು ಪೂರೈಸಲು ಈಗಾಗಲೇ ಬಹುಹಳ್ಳಿ ಕುಡಿಯುವ ನೀರು (ಎಂವಿಎಸ್‌) ಪೂರೈಕೆ ಯೋಜನೆ ಕೈಗೊಂಡ ಬೆನ್ನಲ್ಲೇ ಸರ್ಕಾರ ಜಲಜೀವನ ಮಿಷನ್‌ ಯೋಜನೆಯಡಿ ನೂರಾರು ಕೋಟಿ ಖರ್ಚು ಮಾಡಲು ಮುಂದಾಗಿದೆ. ಆದರೆ, ಈ ಯೋಜನೆ, ಹಳ್ಳಿ ಜನರಿಗೆ ನೀರು ಕೊಡುವಲ್ಲಿ ಮೈಲಿಗಲ್ಲಾಗಬೇಕು ಹೊರತು ಹಳ್ಳ ಹಿಡಿದ ಹಳ್ಳಿಯ ಯೋಜನೆಯಂತಾಗದಿರಲಿ ಎಂಬ ಮಾತು ಕೇಳಿ ಬರುತ್ತಿದೆ.

ಹೌದು, ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳ ಕುರಿತು ಹಲವಾರು ತಕರಾರು ಇವೆ. ಒಂದು ಯೋಜನೆ ಕೈಗೊಳ್ಳಲು ಮುಖ್ಯವಾಗಿ ಇರಬೇಕಿರುವ ಜಲಮೂಲವನ್ನೇ ಮರೆತು ಕೋಟ್ಯಂತರ ಖರ್ಚು ಮಾಡಿ, ಯೋಜನೆ ಹಳ್ಳ ಹಿಡಿಸಿದ ಪ್ರಸಂಗ ಜಿಲ್ಲೆಯಲ್ಲಿ ನಡೆದಿವೆ. ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ, ಪೈಪ್‌ಲೈನ್‌ ಅಳವಡಿಕೆ, ಜಲ ಶುದ್ಧೀಕರಣ ಘಟಕ ಹೀಗೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು, ಗುತ್ತಿಗೆದಾರರು ತೋರುವ ಅತಿಯಾದ ಕಾಳಜಿ, ಜನರಿಗೆ ನೀರು ಪೂರೈಸುವ ನಿಟ್ಟಿನಲ್ಲಿ ತೋರಿಸಿಲ್ಲ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಜಲ ಜೀವನ ಮಿಷನ್‌ ಯೋಜನೆ, ಎಂವಿಎಸ್‌ ರೀತಿ ಆಗದೇ, ಹಳ್ಳಿ ಜನರಿಗೆ ನೀರು ಕೊಡುವಂತಾಗಬೇಕು ಎಂಬುದು ಜನರ ಒತ್ತಾಯ.

ಏನಿದು ಜಲ ಜೀವನ ಮಿಷನ್‌: ಕೇಂದ್ರ ಸರ್ಕಾರ, ಪ್ರತಿಯೊಂದು ಹಳ್ಳಿ ಮನೆಗೂ ನಳ ಜೋಡಿಸುವ ಜತೆಗೆ 55 ಎಲ್‌ಪಿಸಿಡಿ ನೀರು ಕೊಡಲು ಜಲ ಜೀವನ ಮಿಷನ್‌ (ಜೆಜೆಎಂ) ಎಂಬ ಯೋಜನೆ ರೂಪಿಸಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.45ರಷ್ಟು ಅನುದಾನ, ಸ್ಥಳೀಯ ಗ್ರಾ.ಪಂ.ಗಳು ಶೇ.10ರಷ್ಟು ಅನುದಾನ ಭರಿಸಬೇಕು. 1 ವರ್ಷ ಯೋಜನೆ ಸಂಪೂರ್ಣ ಸಫಲವಾಗಿ ನಡೆದರೆ, ಶೇ.10ರಷ್ಟು ಅನುದಾನವನ್ನು ಆಯಾ ಗ್ರಾಪಂಗೆ ಇನ್ಸೆಂಟಿವ್‌ ಎಂದು ಪುನ ನೀಡಲು ಯೋಜನೆಯಲ್ಲಿ ಅವಕಾಶವಿದೆ. ಈ ಯೋಜನೆಯಡಿ ಜಿಲ್ಲೆಯ 662 ಹಳ್ಳಿಗಳ ಮನೆ ಮನೆಗೂ ನಳದ ಸಂಪರ್ಕ, 55 ಎಲ್‌ಪಿಸಿಡಿ ನೀರು, ಮೀಟರ್‌ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಯೋಜನೆ ಕೈಗೊಳ್ಳುತ್ತಿಲ್ಲ. ಬದಲಾಗಿ ಈಗಾಗಲೇ ಇರುವ ಎಂವಿಎಸ್‌ ಯೋಜನೆಯಡಿಯಲ್ಲೇ ಪ್ರತಿ ಮನೆ ಮನೆಗೆ ನಳದ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ.

366.935 ಕೋಟಿ ವ್ಯಯಿಸಲು ನಿರ್ಧಾರ: ಜಿಲ್ಲೆಯ ಹೊಸ ತಾಲೂಕು ಒಳಗೊಂಡ 10 ತಾಲೂಕು, 198 ಗ್ರಾ.ಪಂ ವ್ಯಾಪ್ತಿಯ 662 ಗ್ರಾಮಗಳಿದ್ದು, ಗ್ರಾಮೀಣ ಭಾಗದಲ್ಲಿ 3,20,877 ಮನೆಗಳಿವೆ. ಅದರಲ್ಲಿ ಈಗಾಗಲೇ 13,563 ಮನೆಗಳಿಗೆ ನಳದ ಸಂಪರ್ಕ ಇವೆ. ಇನ್ನುಳಿದ 3,07,314 ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಒಟ್ಟು 366.935 ಕೋಟಿ ಮೊತ್ತದ ಕ್ರಿಯಾ ಯೋಜನೆ ತಯಾರಿಸಲಾಗಿದೆ.

2020-21 ವರ್ಷಕ್ಕೆ 63.662 ಕೋಟಿ ವೆಚ್ಚದಲ್ಲಿ 47,514 ಮನೆಗಳು, 2021-22ನೇ ವರ್ಷದಲ್ಲಿ 100.547 ಕೋಟಿ ವೆಚ್ಚದಲ್ಲಿ 84,765 ಮನೆಗಳು, 2022-23ನೇ ಸಾಲಿನಲ್ಲಿ 89.423 ಕೋಟಿ ವೆಚ್ಚದಲ್ಲಿ 79,075 ಮನೆಗಳಿಗೆ ಹಾಗೂ 2023-24ನೇ ಸಾಲಿಗೆ 113.603 ಕೋಟಿ ವೆಚ್ಚದಲ್ಲಿ 95,960 ಮನೆಗಳು ಸೇರಿ ಒಟ್ಟು 3,07,314 ಮನೆಗಳಿಗೆ ಪ್ರತ್ಯೇಕ ನಳಗಳ ಜೋಡಣೆಗೆ 366.935 ಕೋಟಿ ಅನುದಾನ ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ. ಇದು ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯಂತೆ, ಮತ್ತೂಂದು ಹಗರಣವಾಗದೇ ಹಳ್ಳಿ ಜನರಿಗೆ ವಾಸ್ತವಿಕ ನೀರು ಕೊಡಲು ಬಳಕೆಯಬೇಕಿದೆ.

ಹಳ್ಳ ಹಿಡಿದ ಹಳ್ಳಿ ಯೋಜನೆಗಳು : ಜಿಲ್ಲೆಯಲ್ಲಿ ಈಗಾಗಲೇ 41 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿದ್ದು, ಅದರಲ್ಲಿ 39 ಯೋಜನೆ ಚಾಲ್ತಿ ಇವೆ. ಅವುಗಳ ಮೂಲಕ 361 ಹಳ್ಳಿಗೆ ನೀರು ಕೊಡುತ್ತಿದ್ದೇವೆ. 2 ಯೋಜನೆಗಳು, ಜಲಮೂಲವಿಲ್ಲದ ಕಾರಣ ವಿಫಲವಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ 361 ಹಳ್ಳಿಗೂ ಸರಿಯಾಗಿ ನೀರು ಹೋಗುತ್ತಿಲ್ಲ. ಇಸ್ಲಾಂಪುರ, ಕಟಗೇರಿ-ಅನವಾಲ, ಕನ್ನೊಳ್ಳಿ-ಗದ್ಯಾಳ, ಮೆಟಗುಡ್ಡ ಹೀಗೆ ಹಲವು ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಸಫಲವಾಗಿಲ್ಲ. ಇಸ್ಲಾಂಪುರ, ಇಲ್ಯಾಳ ಬಹುಹಳ್ಳಿ ಯೋಜನೆ, ಐಹೊಳೆ ಮತ್ತು ಇತರೆ ಬಹುಹಳ್ಳಿ ಯೋಜನೆ ಕುರಿತು ಐದು ವರ್ಷಗಳ ಕಾಲ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುತ್ತಲೇ ಇವೆ.

ಗ್ರಾಮೀಣ ಭಾಗದ 3,07,314 ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಿ ಕುಡಿಯುವ ನೀರು ಪೂರೈಕೆಗೆ ಕೇಂದ್ರ-ರಾಜ್ಯ ಸರ್ಕಾರಗಳ ಜಂಟಿ ಅನುದಾನದಲ್ಲಿ ಜಲ ಜೀವನ ಮಿಷನ್‌ ಯೋಜನೆ ಜಾರಿಗೊಳಿಸಿದ್ದು, ಇದಕ್ಕಾಗಿ 336.935 ಕೋಟಿ ಮೊತ್ತದ ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. -ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯತ್‌ ಸಿಇಒ

ಜಿಲ್ಲೆಯಲ್ಲಿ 41 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿದ್ದು, ಅದರಲ್ಲಿ ಎರಡು ವಿಫಲವಾಗಿವೆ. 39 ಯೋಜನೆಗಳ ಮೂಲಕ ನೀರು ಕೊಡಲಾಗುತ್ತಿದ್ದು, ಅವುಗಳ ಅಡಿಯಲ್ಲಿಯೇ ಇನ್ನುಳಿದ ಹಳ್ಳಿಯ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಮೀಟರ್‌ ಅಳವಡಿಕೆಯೂ ಈ ಯೋಜನೆಯಡಿ ಇದ್ದು, ನೀರು ಪೋಲಾಗುವುದಿಲ್ಲ. ಇದೊಂದು ಮಹತ್ವದ ಯೋಜನೆಯಾಗಿದ್ದು, ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲಾಗುವುದು.-ಆರ್‌.ಎನ್‌. ಪುರೋಹಿತ, ಕಾರ್ಯನಿರ್ವಾಹಕ ಅಭಿಯಂತರ, ಆರ್‌ಡಬ್ಲ್ಯೂಎಸ್‌

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

ತಹಸೀಲ್ದಾರ್ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ

ತಹಶೀಲ್ದಾರ್‌ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.