ಕೋವಿಡ್ ಹೊಡೆತಕ್ಕೆ ನಲುಗಿದ ಮಾರುಕಟ್ಟೆ

30 ದಿನಗಳಿಂದ ಜಮಖಂಡಿ ಮಾರುಕಟ್ಟೆ ಸ್ತಬ್ಧ

Team Udayavani, May 23, 2021, 5:40 PM IST

21-jkd-2

ಜಮಖಂಡಿ: ಕೋವಿಡ್ ಭೀತಿಯಿಂದ ಕಳೆದ 30 ದಿನಗಳಿಂದ ಮಾರುಕಟ್ಟೆ ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ನಗರದ ಮಾಲ್‌, ಸಂಕೀರ್ಣ, ಥೇಟರ್‌ ಮತ್ತು ರಸ್ತೆ ವ್ಯಾಪಾರ ಸ್ಥಗಿತಗೊಂಡು 455 ಕೋಟಿ ರೂ. ಹಾನಿಯಾಗಿದೆ. ನಗರದಲ್ಲಿ ಕಿರಾಣಿ ವ್ಯಾಪಾರದಿಂದ 75 ಕೋಟಿ, ಬಟ್ಟೆ ವ್ಯಾಪಾರ 38 ಕೋಟಿ, ಸಾರಾಯಿ ಅಂಗಡಿ 17 ಕೋಟಿ, ಬಂಗಾರ ಅಂಗಡಿ 45 ಕೋಟಿ, ಪುಸ್ತಕ ಅಂಗಡಿ 13 ಕೋಟಿ, ಪ್ರಿಟಿಂಗ್‌ ಪ್ರಸ್‌ 2 ಕೋಟಿ, ಸಾರಿಗೆ ಸಂಸ್ಥೆ 105 ಕೋಟಿ ಖಾಸಗಿ ಸಾರಿಗೆ 135 ಕೋಟಿ, ಎಪಿಎಂಸಿ 25 ಕೋಟಿ ಸಹಿತ ಎಲ್ಲ ರೀತಿಯ ವಹಿವಾಟದಿಂದ 455 ಕೋಟಿಯಷ್ಟು ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ತಾಲೂಕಿನಲ್ಲಿ ಒಂದು ತಿಂಗಳ ಕೊರೊನಾ ಕರ್ಫ್ಯೂ ಅವಧಿಯಲ್ಲಿ ಅತಿಹೆಚ್ಚು ವಹಿವಾಟು ಸ್ಥಗಿತಗೊಂಡಿದೆ. ಕೊರೊನಾ ನಿಯಮಾವಳಿ ನಿರ್ದೇಶನದಂತೆ ಕೇವಲ 80 ಕೋಟಿಯಷ್ಟು ವಹಿವಾಟು ನಡೆದಿದೆ. ರೈತರು ಬೆಳೆದ ತರಕಾರಿ ಮಾತ್ರ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಅತೀ ಅವಶ್ಯಕ ವಸ್ತುಗಳಾದ ಪೆಟ್ರೋಲ್‌, ಹಾಲು, ಪತ್ರಿಕೆ ಮಳಿಗೆ ಆರಂಭವಿದ್ದರೂ ಗ್ರಾಹಕರಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಔಷಧ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಆದಾಯದಲ್ಲಿ ಕಡಿಮೆಯಾಗಿಲ್ಲ. ಕಳೆದು ಒಂದು ತಿಂಗಳಿನಿಂದ ನೈಟ್‌ ಕರ್ಫ್ಯೂ, ಕೊರೊನಾ ಕರ್ಫ್ಯೂ ಸಹಿತ ಲಾಕ್‌ಡೌನ್‌ ಆರಂಭದಿಂದ ಬಸ್‌ ನಿಲ್ದಾಣ, ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿವೆ.

ಬ್ಯಾಕ್‌ ಫಂಗಸ್‌ ಪತ್ತೆ: ತಾಲೂಕಿನ ಕಂಕಣವಾಡಿ, ಶೂರ್ಪಾಲಿ ಮತ್ತು ಜಮಖಂಡಿ ನಗರದಲ್ಲಿ ಬ್ಲಾಕ್‌ ಫಂಗಸ್‌ ಕಾಯಿಲೆ ಪತ್ತೆಯಾಗಿದೆ. ಮೂವರು ಕೊರೊನಾ ಸೋಂಕಿನಿಂದ ಜೀವ ಉಳಿದ ನಂತರ ಅವರಲ್ಲಿ ಬ್ಲಾಕ್‌ ಫಂಗಸ್‌ ಕಂಡು ಬಂದಿದೆ. ಪ್ರಥಮ ಹಂತದ ವರದಿಯಲ್ಲಿ ಪತ್ತೆಯಾಗಿದೆ. ಜಮಖಂಡಿ ನಗರದ ವ್ಯಕ್ತಿ ಧಾರವಾಡದ ಎಸ್‌.ಡಿ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉಳಿದ ಇಬ್ಬರು ಟೆಸ್ಟಿಂಗ್‌ ನಡೆದಿದ್ದು, ವರದಿ ಬರಬೇಕಾಗಿದೆ. ಒಟ್ಟಾರೆಯಾಗಿ ಈಗ ಮೂರು ಜನರಲ್ಲಿ ಕಾಯಲೆ ಪತ್ತೆಯಾಗಿದೆ. ಚಿಕಿತ್ಸೆಗೆ ಸಿದ್ಧತೆ ನಡೆದಿದೆ ಎಂದು ತಾಲೂಕು ವೈದಾಧಿ ಕಾರಿ ಡಾ| ಜಿ.ಎಸ್‌.ಗಲಗಲಿ ಹೇಳಿದ್ದಾರೆ.

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

voter

RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್‌: ವಸಂತ

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.