ಜಾನಪದ ಕಲೆಗಳ ತವರೂರು ಜಮಖಂಡಿ; ಡಾ| ಬಸು ಬೇವಿನಗಿಡದ
ಕಲಾವಿದರು ದೇಹವನ್ನು ದೇಗುಲವನ್ನಾಗಿ ಮಾಡಿ ಕಾಪಾಡಿಕೊಂಡರೆ ಯಶಸ್ಸು ಬೆನ್ನುಹತ್ತಿ ಬರುತ್ತದೆ
Team Udayavani, Jun 1, 2022, 5:53 PM IST
ಜಮಖಂಡಿ: ಜಾನಪದ ಕಲೆಗಳ ತವರೂರು ಜಮಖಂಡಿ ಗುರುತಿಸಿಕೊಂಡಿದೆ. ಕಲೆಗಳಿಗಾಗಿ ಉಪಾಸಣೆ ಮಾಡುವವರನ್ನು ಬೆಳಕಿಗೆ ತರುವ ಕೆಲಸವನ್ನು ಧಾರವಾಡ ಆಕಾಶವಾಣಿ ಕೇಂದ್ರ ಮಾಡುತ್ತಿದೆ ಎಂದು ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ| ಬಸು ಬೇವಿನಗಿಡದ ಹೇಳಿದರು.
ನಗರದ ಬಸವ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಬಸವ ಸಮಿತಿ ಮತ್ತು ಸಾಹಿತ್ಯ ಸೌರಭ ವೇದಿಕೆ ಸಹಯೋಗದಲ್ಲಿ ನಡೆದ ದೆಹಲಿಯ ಆಕಾಶವಾಣಿ ಕೇಂದ್ರದಿಂದ ಎ-ಗ್ರೇಡ್ ಮಾನ್ಯತೆ ಪಡೆದ ಚಿಕ್ಕಪಡಸಲಗಿಯ ಮಾದೇವ ಕಲ್ಯಾಣಿ ಕರಡಿಮೇಳ ಕಲಾತಂಡವದ ಅಭಿನಂದನಾ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಾಡಿನ ಅಪೂರ್ವ ಕಲೆಗಳಿಗೆ ಜನಮನ್ನಣೆ ನಿರಂತರವಾಗಿ ದೊರೆಯಬೇಕು. ಜಾನಪದ ಕಲೆಗಳಿಗೆ ಆಧುನಿಕ ಸ್ಪರ್ಶ ನೀಡಿ ಹೊಸತನ ತರುವ ಬಗ್ಗೆ ಕಲಾವಿದರು ಆಲೋಚನೆ ಮಾಡಬೇಕು. ಆಧುನಿಕತೆಯ ಭರಾಟೆಯಲ್ಲೂ ಸಹ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿ ಜೋಪಾನವಾಗಿ ಕಾಪಾಡಬೇಕಾಗಿದೆ ಎಂದರು.
ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಶರಣಬಸವ ಚೋಳಿನ ಮಾತನಾಡಿ, ಇಂದಿನ ಒಳ್ಳೆಯ ಯುವ ಕಲಾವಿದರು ದುಶ್ಚಟಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ. ಕಲಾವಿದರು ದೇಹವನ್ನು ದೇಗುಲವನ್ನಾಗಿ ಮಾಡಿ ಕಾಪಾಡಿಕೊಂಡರೆ ಯಶಸ್ಸು ಬೆನ್ನುಹತ್ತಿ ಬರುತ್ತದೆ ಎಂದರು.
ತಹಶೀಲ್ದಾರ್ ಪ್ರಶಾಂತ ಚನಗೊಂಡ ಉದ್ಘಾಟಿಸಿ ಮಾತನಾಡಿ, ಕಲಾವಿದರಿಗೆ ರಾಜ್ಯ ಸರ್ಕಾರ ಮಾಸಿಕ 3 ಸಾವಿರ ಮಾಸಾಶನ ನೀಡುತ್ತಿದ್ದು, ಕಲಾವಿದರು ಪ್ರಯೋಜನ ಪಡೆದುಕೊಳ್ಳಬೇಕು. ನಗರದಲ್ಲಿ ರಾಜ್ಯಮಟ್ಟದ ಕಲಾಪ್ರದರ್ಶನ ಹಮ್ಮಿಕೊಂಡರೆ ತಾಲೂಕಾಡಳಿತ ಸಹಕಾರ ನೀಡಲಿದೆ ಎಂದರು.
ಇದೇ ಸಂದರ್ಭದಲ್ಲಿ ದೆಹಲಿಯ ಆಕಾಶವಾಣಿ ಕೇಂದ್ರದಿಂದ ಎ-ಗ್ರೇಡ್ ಮಾನ್ಯತೆ ಪಡೆದ ಕಲಾವಿದರಾದ ಮಾದೇವ ಕಲ್ಯಾಣಿ, ಸದಾಶಿವ ನ್ಯಾಮಗೌಡ, ಸಿದ್ದಪ್ಪ ಮಟೋಳಿ, ಶಂಕರ ನ್ಯಾಮಗೌಡ, ಸದಾಶಿವ ಮಟೋಳಿ, ಶಂಕರ ಭಜಂತ್ರಿ, ರಾಮು ಭಜಂತ್ರಿ, ಮಾರುತಿ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.
ಸಿದ್ಧಕ್ಷೇತ್ರದ ಸಿದ್ಧಮುತ್ಯಾ ಶ್ರೀ ಸಾನ್ನಿಧ್ಯ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಸಂಗಮೇಶ ಮಟೋಳಿ, ಡಾ.ಟಿ.ಪಿ. ಗಿರಡ್ಡಿ, ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ, ಸಾಹಿತಿ ಗುರುನಾಥ ಸುತಾರ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಚಿತ್ತರಂಜನ ನಾಂದ್ರೇಕರ, ಸಾರಿಗೆ ಘಟಕ ವ್ಯವಸ್ಥಾಪಕ ಸಂಗಮೇಶ ಮಟೋಳಿ, ರಮೇಶ ದೇಸಾಯಿ ಸಹಿತ ಹಲವರು ಇದ್ದರು. ಬಿ.ಎನ್.ಅಸ್ಕಿ ಪ್ರಾರ್ಥಿಸಿದರು. ಸಾಹಿತಿ ಶಂಕರ ಲಮಾಣಿ ಸ್ವಾಗತಿಸಿದರು. ಶಿಕ್ಷಕಿ ಸರಿತಾ ಶಿರಗುಪ್ಪಿ ನಿರೂಪಿಸಿದರು. ಪ್ರೊ| ರಾಜಶೇಖರ ಹೊಸಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.