ಸಹಜ ಸ್ಥಿತಿಯತ್ತ ಜಮಖಂಡಿ
Team Udayavani, May 18, 2020, 1:42 PM IST
ಜಮಖಂಡಿ: ಕಳೆದ 54 ದಿನಗಳಿಂದ ಕೋವಿಡ್ ಹೊಡೆತದಿಂದ ನಲುಗಿದ್ದ ಜಮಖಂಡಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಗರ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡ 10 ಜನರಲ್ಲಿ 9 ಜನರು ಗುಣಮುಖರಾಗಿದ್ದು ಮನೆಗೆ ಮರಳಿದ್ದಾರೆ.
ನಗರದಲ್ಲಿ ಏ. 15ರಿಂದ 29ರವರೆಗೆ 10 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಅಂದಿನಿಂದ ಸ್ಥಗಿತಗೊಂಡಿದ್ದ ತರಕಾರಿ ವ್ಯಾಪಾರ ರವಿವಾರ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದ್ದು, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2ಗಂಟೆವರೆಗೆ ವಹಿವಾಟು ನಡೆಯಿತು. ಎಂದಿನಂತೆ ಮಾರುಕಟ್ಟೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದರು. ಸಾವಿರಾರು ಜನರ ಆಗಮನದಿಂದ ಜನದಟ್ಟಣೆ ಹೆಚ್ಚಾಗುವ ಮೂಲಕ ರಸ್ತೆ ಸಂಚಾರ ಅಡಚಣೆಗೊಂಡಿತು.
ಕಳೆದ ಎರಡು ತಿಂಗಳಿಂದ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ಕೋವಿಡ್ ಭೀತಿ ಹಾಗೂ ಸೋಂಕಿತರ ಪ್ರದೇಶ ಸೀಲ್‌ಡೌನ್ ಮಾಡಲಾದ ಸ್ಥಳಗಳಾದ ನಗರದ ಹನುಮಾನ ಚೌಕ್, ಅರ್ಬನ್ ಬ್ಯಾಂಕ್, ಅಂಚೆ ಕಚೇರಿ ರಸ್ತೆ, ಕಿರಾಣಿ ಮಾರ್ಕೆಟ್, ಅಶೋಕ ಸರ್ಕಲ್, ಕೋರ್ಟ್ ರೋಡ್ ಜನದಟ್ಟಣೆಯಿಂದ ಕೂಡಿತ್ತು. ಕಿರಾಣಿ, ಬಟ್ಟೆ, ಮೊಬೈಲ್, ಇಲೆಕ್ಟ್ರಿಕಲ್ ಅಂಗಡಿ ಸಹಿತ ನೂರಾರು ಅಂಗಡಿಗಳು ವಹಿವಾಟು ನಡೆಸಿದವು. ಕೆಲವರು ಸಾಮಾಜಿಕ ಅಂತರ, ಮಾಸ್ಕ್ ಸಹ ಧರಿಸದೆ ಸಂಚಾರ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.