ಉತ್ತಮ ಸಂಸ್ತಾರ ನೀಡುವವರೇ ಜಂಗಮರು: ಗುಡಗುಂಟಿಮಠ
ಸಾಧಕರನ್ನು ಗುರುತಿಸಿ ಗೌರವಿಸುವುದು ಮುಖ್ಯವಾಗಿದೆ.
Team Udayavani, Nov 1, 2021, 7:58 PM IST
ಜಮಖಂಡಿ: ವೀರಶೈವ ಧರ್ಮ ಸನಾತನ ಧರ್ಮವಾಗಿದೆ. ವೀರಶೈವ ಧರ್ಮದಲ್ಲಿ ಬಹಳಷ್ಟು ಒಳಪಂಡಗಳಿವೆ. ಜಂಗಮ ಸಮಾಜಕ್ಕೆ ಹೆಚ್ಚಿನ ಗೌರವ ಸ್ಥಾನಮಾನವಿದೆ. ಉತ್ತಮ ಸಂಸ್ಕಾರ ನೀಡುವ ಜಂಗಮ ಸಮಾಜದವರು ಮಾದರಿಯಾಗಬೇಕು ಎಂದು ನಾಡೋಜ ಪ್ರಶಸ್ತಿ
ಪುರಸ್ಕೃತ, ಉದ್ಯಮಿ ಜಗದೀಶ ಗುಡಗುಂಟಿಮಠ ಹೇಳಿದರು.
ನಗರದ ನಾಡೋಜ ಗುಡಗುಂಟಿಮಠರ ಸಾಕ್ಷಾತ್ಕಾರ ಭವನದಲ್ಲಿ ರವಿವಾರ ತಾಲೂಕು ಜಂಗಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜಂಗಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
.
ಧರ್ಮ ಪ್ರಚಾರ ಜಂಗಮ ಸಮಾಜದ ಮುಖ್ಯ ಕಾಯಕವಾಗಿದೆ. ಜಂಗಮರಲ್ಲಿ ಸ್ಥಿರ ಮತ್ತು ಚರ ಜಂಗಮರಿದ್ದಾರೆ. ಆಚಾರ-ವಿಚಾರಗಳಲ್ಲಿ ಎಲ್ಲರೂ ಉತ್ತಮವಾಗಿದ್ದರೇ ನಮ್ಮೆಲ್ಲರ ಜೀವನ ಆದರ್ಶಮಯವಾಗಲಿದೆ. ಜಂಗಮರು ಉತ್ತಮ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಭವ್ಯ ಭಾರತ ದೇಶದಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಪ್ರಜೆಗಳಾಗಬೇಕು ಎಂದರು.
ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ಓಲೇಮಠದ ಡಾ| ಚನ್ನಬಸವ ಶ್ರೀ, ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ಕೊಣ್ಣೂರ ಹೊರಗಿನ ಮಠದ ಡಾ| ವಿಶ್ವಪ್ರಭುದೇವರು ಸಾನ್ನಿಧ್ಯ ವಹಿಸಿದ್ದರು.
ಬೆಳಗಾವಿಯ ನಿವೃತ್ತ ಉಪನ್ಯಾಸಕ ಸಿ.ಜಿ.ಮಠಪತಿ ಮಾತನಾಡಿ, ಸಮಾಜದ ಅಭಿವೃದ್ದಿಗೆ ಕೈಜೋಡಿಸುವ ಕೆಲಸ ಮಾಡಬೇಕು. ಸಾಧನೆಯಲ್ಲಿ ಸಣ್ಣ-ದೊಡ್ಡದು ಮುಖ್ಯವಲ್ಲ. ಸಾಧಕರನ್ನು ಗುರುತಿಸಿ ಗೌರವಿಸುವುದು ಮುಖ್ಯವಾಗಿದೆ. ಸಮಾಜಮುಖೀಯಾಗಿ ಕೆಲಸ ಮಾಡುವ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಿದರೇ ಮಾತ್ರ ಸಮಾಜ ಹೆಮ್ಮರವಾಗಿ ಬೆಳೆಯಲು ಸಾಧ್ಯ. ವಿದೇಶಿ ಸಂಸ್ಕೃತಿಯಿಂದ ದೂರವಿದ್ದು, ಭಾರತೀಯ ಸಂಸ್ಕೃತಿ ಆಚರಿಸಬೇಕು.
ವಿದೇಶಿ ಸಂಸ್ಕೃತಿ ಅಳವಡಿಸಿಕೊಂಡರೇ ಹೆತ್ತ ತಂದೆ-ತಾಯಿಗಳು ಅನಾಥಶ್ರಮದಲ್ಲಿ ಜೀವಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿ ವಿದೇಶಿ ಆಚರಣೆಯಲ್ಲಿ ಬಹಳಷ್ಟು ಅಂತರವಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ,
ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಜಂಗಮದ ಸಮಾಜದ ಚುನಾಯಿತ ಪ್ರತಿನಿಧಿಗಳಿಗೆ, ಪದೋನ್ನತಿ ಹೊಂದಿದ ಮತ್ತು ನಿವೃತ್ತಿ ಹೊಂದಿರುವ ಹಾಗೂ ವಿಶೇಷ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಅಜಯ ಕಡಪಟ್ಟಿ, ಸಿಪಿಐ ಶಿವಯ್ಯ ಮಠಪತಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸಿ.ಎಸ್. ಗಡ್ಡದೇವರಮಠ, ಎಸ್.ಎಸ್.ನಾಯ್ಕಲಮಠ, ರುದ್ರಯ್ಯ ಕರಡಿ, ಸಂಗು ಮುತ್ತಿನಕಂತಿಮಠ, ಗುರುಮೂರ್ತಯ್ಯ ಮಠಪತಿ, ಆರ್.ಎಸ್.ಅಕ್ಕಿ, ಅಶೋಕ ಗಾವಿ, ಡಾ| ಮಲ್ಲು ಮಠ, ಚಿಕ್ಕಯ್ಯ ಮಠಪತಿ, ಆಶಾದೇವಿ ಗುಡಗುಂಟಿಮಠ, ಭಾರತಿ ಮಠಪತಿ, ಸೋಮಲಿಂಗ ಹಿರೇಮಠ, ವಿರೂಪಾಕ್ಷಯ್ಯ ಕಂಬಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್ ದೇಶಕ್ಕೆ ರಫ್ತು!
ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ
Rabakavi: ರೈತರ ಬದುಕಿನ ರೊಟ್ಟಿಯನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಶಾಸಕ ಸಿದ್ದು ಸವದಿ
Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.