K. S. Eshwarappa: ಸಂಕ್ರಾಂತಿಗೆ ಸಂತರಿಂದಲೇ ಹೊಸ ಸಂಘಟನೆ
ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಚಾಲನೆ
Team Udayavani, Oct 20, 2024, 8:26 PM IST
ಬಾಗಲಕೋಟೆ: ತೀವ್ರ ಕುತೂಹಲ ಕೆರಳಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ಹೊಸ ಬ್ರಿಗೇಡ್ ರಚನೆಗೆ ಈಗ ಮುಂದಿನ ವರ್ಷದ ಸಂಕ್ರಾಂತಿ ಮುಹೂರ್ತ ಸಿಕ್ಕಿಯಾಗಿದೆ.
ನಗರದಲ್ಲಿ ಭಾನುವಾರ ನಡೆದ ಚಿಂತನ-ಮಂಥನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ ಅವರು, ಈ ವಿಷಯ ತಿಳಿಸಿ, ಅಂದೇ ಬ್ರಿಗೇಡ್‌ಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಪ್ರಕಟಿಸಿದರು.
2025ರ ಜನವರಿ 15ರ ಸಂಕ್ರಾಂತಿಯಂದು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಮೊದಲ ಹಂತದ ಕಾರ್ಯಕ್ರಮ ನಡೆಯಲಿದೆ.
ಸುಮಾರು ಒಂದು ಸಾವಿರ ಜನ ಮಠಾಧೀಶರು, 50 ಸಾವಿರ ಜನ ಪ್ರಮುಖರು ಭಾಗವಹಿಸಲಿದ್ದಾರೆ.
ಆ ಸಭೆಯಲ್ಲಿ ಸ್ವಾಮೀಜಿಗಳೇ ನೂತನ ಬ್ರಿಗೇಡ್‌ನ ಹೆಸರು, ಅದರ ಕಾರ್ಯ ವ್ಯಾಪ್ತಿ, ಮುಂದೆ ದಲಿತ-ಹಿಂದುಳಿದವರ ಹಾಗೂ ಹಿಂದೂ ಸಮಾಜ ಬಾಂಧವರಿಗಾಗಿ ನಡೆಸಬೇಕಾದ ಸಂಘಟನೆಯ ರೂಪುರೇಷೆ ಕುರಿತು ತಿಳಿಸಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚಿಸಿದ್ದು, ಅದನ್ನು ಪಕ್ಷದ ಕೇಂದ್ರ ನಾಯಕರ ಮಾತು ಕೇಳಿ ಹಿಂಪಡೆದಿದ್ದೆ. ಈ ಬಾರಿ ಯಾವುದೇ ಸಂದರ್ಭ ಬಂದರೂ ಹೊಸ ಬ್ರಿಗೇಡ್ ಹಿಂದಕ್ಕೆ ಪಡೆಯಲ್ಲ. ಇದು ನನಗಾಗಿ ಅಥವಾ ನನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಅಲ್ಲ. ರಾಜ್ಯದ ದಲಿತ, ಹಿಂದುಳಿದವರ, ಸಮಸ್ತ ಹಿಂದೂ ಸಮಾಜದವರ ಹಿತರಕ್ಷಣೆಗೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಅವರು, ಸುಮಾರು 50ಕ್ಕೂ ಹೆಚ್ಚು ಸ್ವಾಮೀಜಿಗಳು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಗದಗ ಹೀಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರಮುಖರನ್ನೊಳಗೊಂಡ ಚಿಂತನ-ಮಂಥನ ಸಭೆಯಲ್ಲಿ ಹೊಸ ಬ್ರಿಗೇಡ್ ರಚನೆ ಕುರಿತು ಘೋಷಣೆ ಮಾಡಿದರು.
ಈ ಚಿಂತನ-ಮಂಥನ ಸಭೆ ನನಗಾಗಿ ಅಥವಾ ನನ್ನ ಪುತ್ರನಿಗಾಗಿ ಅಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವ ಹೊಂದಾಣಿಕೆ, ಕುಟುಂಬ ರಾಜಕಾರಣ ಕೊನೆಗಾಣಿಸಲು. ಈ ಸಭೆಗೆ ಬರದಂತೆ ಎಷ್ಟೋ ಜನರನ್ನು ತಡೆಯಲಾಗಿದೆ. ಆದರೂ ಬಹಳಷ್ಟು ಜನ ಬಂದಿದ್ದಾರೆ. ಇಲ್ಲಿ ಬಂದವರ ಮಾಹಿತಿ ಎಲ್ಲ ಅವರಿಗೆ(ಯಡಿಯೂರಪ್ಪ ಕುಟುಂಬಕ್ಕೆ) ಹೋಗಬಹುದು. ಬಂದವರು ಇಲಿಗಳಲ್ಲ. ಹುಲಿಗಳು. ಹೀಗಾಗಿ ಯಾರೂ ಭಯ ಬೀಳುವವರಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
MUST WATCH
ಹೊಸ ಸೇರ್ಪಡೆ
UV Fusion: ಇಂಗ್ಲೆಂಡ್ ಟು ಕೋಲ್ಕತಾ ಬಸ್ ಒಂದು ನೆನಪು
UV Fusion: ಮರೆಯಾಗದಿರಲಿ ಪಾಡ್ದನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Sandalwood: ಸಂತು ಡಬಲ್ ಧಮಾಕಾ: ಡಿಸ್ಕೋ ಜೊತೆ ಕಂಗ್ರಾಜ್ಯುಲೇಶನ್ಸ್ ಬ್ರದರ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.