ಕಾಳಿ ನದಿ ಯೋಜನೆ; ಹಾಲಿ-ಮಾಜಿ ಸಿಎಂಗಳಿಗೆ ಸನ್ಮಾನ
ಶೀಘ್ರ ಕಾರ್ಯರೂಪಕ್ಕೆ ತರಲು ಆಗ್ರಹ
Team Udayavani, Mar 25, 2022, 12:49 PM IST
ಬಾಗಲಕೋಟೆ:ಉತ್ತರ ಕರ್ನಾಟಕದ ಪ್ರಮುಖ ನಾಲ್ಕೈದು ಜಿಲ್ಲೆಗಳಿಗೆ ಕಾಳಿ ನದಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸುವ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ ಘೋಷಿಸಿದ್ದು, ಈ ಯೋಜನೆ ರೂಪಿಸಿದ ಸಂಗಮೇಶ ನಿರಾಣಿ ನೇತೃತ್ವದ ತಂಡ ರಾಜ್ಯದ ಹಾಲಿ ಮತ್ತು ಮಾಜಿ ಸಿಎಂಗಳನ್ನು ಭೇಟಿ ಮಾಡಿ ಸನ್ಮಾನಿಸಿದರು.
ಉ.ಕ. ಸಮಗ್ರ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಸಂಗಮೇಶ ನಿರಾಣಿ ನೇತೃತ್ವದ ನಿಯೋಗದಿಂದ ಸಿಎಂ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸಿದರು.
ಕಳೆದ 3 ವರ್ಷಗಳ ಹಿಂದೆ ಸಂಗಮೇಶ ನಿರಾಣಿಯವರು ತಯಾರಿಸಿದ ಕಾಳಿ ನದಿ ಯೋಜನೆಯನ್ನು ಉತ್ತರ ಕರ್ನಾಟಕದ 5 ಜಿಲ್ಲೆಗಳ ಕುಡಿಯುವ ನೀರು ಹಾಗೂ ಕೆರೆ ತುಂಬಲು ಕಾಳಿ ಮಲಪ್ರಭಾ, ಘಟಪ್ರಭಾ ನದಿ ಜೋಡಣೆ ಯೋಜನೆ ಅನುಷ್ಟಾನಗೊಳಿಸುವುದಾಗಿ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ಮನವಿ ಮಾಡಿದರು.
ಇದೇ ಸಮಿತಿಯು ಈ ಹಿಂದೆ ಕಾಳಿ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಸಂಗಮೇಶ ನಿರಾಣಿ ತಿಳಿಸಿದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಪಿ.ಎಚ್. ಪೂಜಾರ, ನಿಯೋಗದಲ್ಲಿ ಭೀಮಶಿ ಮಗದುಮ್ಮ, ವೆಂಕಣ್ಣ ಗಿಡ್ಡಪ್ಪನವರ, ರಾಜೇಂದ್ರ ದೇಸಾಯಿ, ಬಸವರಾಜ ದಲಾಲ, ಲಕ್ಷ್ಮಣ ದೊಡ್ಡಮನಿ, ಬಸವರಾಜ ಕುಂಬಾರ, ದುಂಡಪ್ಪ ಪಾಟೀಲ, ಮಲ್ಲಪ್ಪ ಪೂಜೇರಿ, ಮಹೇಶ ಚನ್ನಂಗಿ, ಭರಮು ಉಳ್ಳಾಗಡ್ಡಿ, ಪ್ರಕಾಶ ಉಳ್ಳಾಗಡ್ಡಿ, ಗಣಪತಿ ಹೊಟಕರ್, ಮಲ್ಲಪ್ಪ ಕೊಣ್ಣೂರ, ಇಐ ಟೆಕ್ನೋಲೊಜಿಸ್‌ನ ಸಂದೀಪ ನಾಡಿಗೇರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.