Kaladagi: ತುಳಸಿಗೇರಿ ಜಾತ್ರಾ ಮಹೋತ್ಸವ ಯಶಸ್ವಿಗೆ ಸಹಕರಿಸಿ
ಜಾತ್ರೆಯ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ 24x7 ನಿಗಾವಹಿಸಲು ಸೂಚನೆ
Team Udayavani, Dec 20, 2023, 1:25 PM IST
ಕಲಾದಗಿ: ತಿಳಸಿಗೇರಿ ಮಾರುತೇಶ್ವರ ದೇವಸ್ಥಾನದ ಜಾತ್ರೆಯ ಪೂರ್ವಭಾವಿ ಸಭೆ ತುಳಸಿಗೇರಿ ಗ್ರಾಮಸ್ಥರು ಹಾಗೂ ಊರಿನ
ಮುಖಂಡರು ಹಾಗೂ ದೇವಸ್ಥಾನದ ಅರ್ಚಕರ ಉಪಸ್ಥಿತಿಯಲ್ಲಿ ನಡೆಯಿತು. ಬಾಗಲಕೋಟೆ ತಹಶೀಲ್ದಾರ್‌ರು ಹಾಗೂ ಶ್ರೀ ಮಾರುತೇಶ್ವರ ದೇವಸ್ಥಾನ ತುಳಸಿಗೇರಿಯ ಆಡಳಿತಾಧಿಕಾರಿ ಅಮರೇಶ ಪಮ್ಮಾರ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಜಾತ್ರೆ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.
ಪ್ರಸಕ್ತ ವರ್ಷದ ಜಾತ್ರೆಯು ಡಿ. 30ರಂದು ಆರಂಭಗೊಳ್ಳಲಿದೆ. ಡಿ 31ರಂದು ಬೆಳಿಗ್ಗೆ 3 ಗಂಟೆಗೆ ಕಾರ್ತಿಕೋತ್ಸವ, ಜನವರಿ 1ರಂದು
ಪಲ್ಲಕ್ಕಿ ಉತ್ಸವ, ಜನವರಿ 6ರಿಂದ ಜ 7 ರವರೆಗೆ ನಡೆಯಲಿರುವ ಮರಿ ಕಾರ್ತಿಕೋತ್ಸವ ನಡೆಯಲಿರುವ ಜಾತ್ರಾ ಮಹೋತ್ಸವನ್ನು
ಅದ್ದೂರಿಯಾಗಿ ಆಚರಿಸಲು ಗ್ರಾಮಸ್ಥರ, ಮುಖಂಡರ ಸಲಹೆ ಪಡೆದುಕೊಳ್ಳಲಾಯಿತು.
ಸಭೆಯಲ್ಲಿ ಉಪಸ್ಥಿತಿ ಇದ್ದ ಆರೋಗ್ಯ ಇಲಾಖಾ ಅಧಿಕಾರಿಗಳನ್ನು ಜಾತ್ರೆಯ ಸಮಯದಲ್ಲಿ ಭಕ್ತರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾದಲ್ಲಿ ತುರ್ತು ಚಿಕಿತ್ಸೆಗೆ ತಮ್ಮ ಸಿಬ್ಬಂದಿ ನಿಯೋಜಿಸಲು ಸೂಚನೆ ನೀಡಲಾಯಿತು.
ಹೆಸ್ಕಾಂ ಸಿಬ್ಬಂದಿಗಳಿಗೂ ಜಾತ್ರೆಯ ಸಮಯದಲ್ಲಿ ಯಾವುದೇ ರೀತಿಯ ವಿದ್ಯುತ್ ಅವಘಡ ಲೈಟಿಂಗ್ ವ್ಯವಸ್ಥೆಯಲ್ಲಿ ಕೊರತೆ
ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿ ಜಾತ್ರೆಯ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ 24×7 ನಿಗಾವಹಿಸಲು ಸೂಚನೆ ನೀಡಲಾಯಿತು.
ಪೋಲಿಸ್ ಸಿಬ್ಬಂದಿಗಳ ಜಾತ್ರೆಯ ಸಮಯದಲ್ಲಿ ಬೆಳಗಾವಿ- ರಾಯಚೂರು ಹೆದ್ದಾರಿಯಲ್ಲಿ ಟ್ರಾಫಿಕ್ ಆಗದಂತೆ ನಿಗಾವಹಿಸುವುದು, ಪಾರ್ಕಿಂ ಗ್ ವ್ಯವಸ್ಥೆ ಸರಿಯಾಗಿ ವಾಹನಗಳನ್ನು ಪಾರ್ಕಿಂಗ್‌ನಲ್ಲಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ತಮ್ಮ ಸಿಬ್ಬಂದಿ ನಿಯೋಜನೆ, ಅಗ್ನಿಶಾಮಕ ಸಿಬ್ಬಂದಿಯವರಿಗೆ ಜಾತ್ರೆಯ ಸಮಯದಲ್ಲಿ ಯಾವುದೇ ರೀತಿಯ ಬೆಂಕಿ ಅವಘಡಗಳು ತಪ್ಪಿಸಲು ತಮ್ಮ ಸಿಬ್ಬಂದಿ ನಿಯೋಜಿಸಲು ತಿಳಿಸಿ ತಮ್ಮ ಸಿಬ್ಬಂದಿಗಳ ಹೆಸರು ನೀಡಲು ಸೂಚಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಅಂಗಡಿಕಾರರು ಮತ್ತು ಮಾಲೀಕರುಗಳಿಗೆ ಜಾತ್ರೆಯ ಸಮಯದಲ್ಲಿ ಸ್ವಚ್ಛತೆ ಕಾಪಾಡಲು ತಿಳಿಸಲಾಯಿತು.
ಸಭೆಯಲ್ಲಿ ಕಲಾದಗಿ ನಾಡ ಕಚೇರಿ ಉಪ ತಹಶೀಲ್ದಾರ್ ಎಸ್.ಬಿ.ಇಟಗಿ, ಕಲಾದಗಿ ಕಂದಾಯ ನಿರೀಕ್ಷಕ ಪ್ರಕಾಶ ನಾಯಕ,
ಅಗ್ನಿಶಾಮಕ ಇಲಾಖೆ, ಬಾಗಲಕೋಟೆ, ಹೆಸ್ಕಾಂ ಇಲಾಖೆ, ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿ, ಗ್ರಾಮ
ಆಡಳಿತಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.