ಚಿಹ್ನೆ ಅದಲು-ಬದಲು: ಕಲಾದಗಿ ಗ್ರಾ.ಪಂ ಮತದಾನ ರದ್ದು, 29ಕ್ಕೆ ಮರು ಮತದಾನ
Team Udayavani, Dec 27, 2020, 1:59 PM IST
ಬಾಗಲಕೋಟೆ: ತಾಲೂಕಿನ ಕಲಾದಗಿ ಗ್ರಾ.ಪಂ. ಚುನಾವಣೆಯ ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು ಬದಲು ಆಗಿದ್ದರಿಂದ ಮತದಾನ ರದ್ದುಮಾಡಿ, 29ಕ್ಕೆ ಮರು ಮತದಾನ ನಡೆಸಲು ನಿರ್ಧರಿಸಲಾಗಿದೆ.
ಕಲಾದಗಿ ಗ್ರಾಮದ ಮತಗಟ್ಟೆ ಸಂಖ್ಯೆ 51 ರ ಅಭ್ಯರ್ಥಿಗಳಾದ ಹಸನ್ಮಹದ್ ರೋಣದ ಹಾಗೂ ಶಹನಾಜ ಬೇಗಂ ಅವರ ಚಿಹ್ನೆಗಳು ಅದಲು ಬದಲಾಗಿವೆ.
ಇದನ್ನೂ ಓದಿ:‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ದಂಪತಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಮತದಾನ ಆರಂಭದಲ್ಲೇ ಈ ದೋಷ ಗಮನಕ್ಕೆ ಬಂದಿದ್ದು, ತಕ್ಷಣ ಮತದಾನ ಸ್ಥಗಿತಗೊಳಿಸಿದರು. ಹೊಸದಾಗಿ ಮತಪತ್ರಗಳ ಮುದ್ರಣ ಮಾಡಿ, ಡಿ.29ರಂದು ಮತದಾನ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.