Kaladgi:ಜೆಸಿಬಿಚಾಲಕನ ನಿರ್ಲಕ್ಷ್ಯ ಕಾಮಗಾರಿ;ಪೈಪ್ ಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರುಪೋಲು
ರಸ್ತೆ ನಿರ್ವಹಣೆ ಕಾಮಗಾರಿಯ ಗುತ್ತಿಗೆದಾರನ ವಿರುದ್ದ ಆಕ್ರೋಶ
Team Udayavani, Oct 8, 2024, 3:43 PM IST
ಕಲಾದಗಿ: ವಾರ್ಷಿಕ ರಸ್ತೆ ನಿರ್ವಹಣೆ ದುರಸ್ತಿ ಕಾಮಗಾರಿ ಮಾಡುವ ವೇಳೆ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಪೋಲಾಗುವಂತೆ ಮಾಡಿದ್ದಲ್ಲದೆ ಸಮ್ಮಂದಿಸಿದವರಿಗೆ ವಿಷಯ ತಿಳಿಸದೆ ನಿರ್ಲಕ್ಷ್ಯ ವಹಿಸಿದ ಕಾಮಗಾರಿ ಗುತ್ತಿಗೆದಾರ ಹಾಗೂ ರಸ್ತೆ ಬದಿ ಮುಳ್ಳು ಕಂಟಿ ತೆರವು ಮಾಡುತ್ತಿದ್ದ ಜೆಸಿಬಿ ಚಾಲಕನ ವಿರುದ್ದ ಶರದಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಸ್ತೆ ದುರಸ್ತಿ ನಿರ್ವಹಣೆ ಕಾಮಗಾರಿಯಲ್ಲಿ ರಸ್ತೆ ಬದಿಯ ಮುಳ್ಳು ಕಂಟಿ ಕಿತ್ತು ವಾಹನ ಸಂಚಾರ ಸವಾರರಿಗೆ ಅನುಕೂಲ ಮಾಡಲು ಲೋಕೋಪಯೋಗಿ ಇಲಾಖೆಯಿಂದ ಪ್ರತೀ ವರ್ಷವೂ ಜಿಲ್ಲಾ ವ್ಯಾಪ್ತಿಯ ಒಳ ರಸ್ತೆಗಳ ನಿರ್ವಹಣೆ ದುರಸ್ತಿ ಕಾರ್ಯ ನಡೆಯುತ್ತದೆ, ಈ ವರ್ಷವೂ ಕಲಾದಗಿ ಉದಗಟ್ಟಿ ರಸ್ತೆ ನಿರ್ವಹಣೆ ಕಾಮಗಾರಿ ಮಾಡುವ ವೇಳೆ ಜೆಸಿಬಿ ಚಾಲಕ ಮಿಡ್ಚಿ ಹಳ್ಳ ಬಳಿ ಬಹುಗ್ರಾಮ ಕುಡಿಯುವ ನೀರಿನ ಪೈಪಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರು ಪೋಲಾಗುವಂತೆ ಮಾಡಿದ್ದಲ್ಲದೆ, ಸಂಬಂಧಿಸಿದ ಇಲಾಖೆಗೆ, ಸ್ಥಳೀಯ ಗ್ರಾಮಸ್ಥರಿಗೂ ತಿಳಸದೆ ಹಾಗೇ ತೆರಳಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದು, ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಶಾರದಾಳ ಗ್ರಾಮಸ್ಥರು ವೀಕ್ಷಣೆ ಮಾಡಿ ನೀರು ಸರಬರಾಜು ವಾಲ್ ತಿರುವಿ ನೀರು ಹರಿಯದಂತೆ ನಿಲ್ಲಿಸಿದ್ದಾರೆ, ನಿರ್ಲಕ್ಷ ತೋರಿದ ಚಾಲಕ ವಿರುದ್ದ ಹಾಗೂ ರಸ್ತೆ ದುರಸ್ತಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ದ ಸೂಕ್ತಕ್ರಮ ಕೈಗೊಳ್ಳಬೇಕು ಜೊತೆಗೆ ಒಡೆದು ಹೋದ ಪೈಪ್ ಲೈನ್ ಜೋಡಣೆ ಮಾಡಿಸಿಕೊಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾರದಾಳ ಗ್ರಾಮದ ಲಕ್ಷ್ಮಣ ಶಿರಬೂರ ಆಗ್ರಹಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರಿನ ಪೈಪಲೈನ್ ಒಡೆದು ಹಾಗೆಯೇ ಹೋಗಿದ್ದು ಸಾಕಷ್ಟು ಪ್ರಮಾಣದ ನೀರು ಪೋಲಾಗಿದೆ, ವಾಲ್ ಬಂದ್ ಮಾಡಿ ನೀರು ಪೊಲಾಗದಂತೆ ಮಾಡಿದ್ದೇವೆ, ಕೂಡಲೇ ಪೈಪ್ ಲೈನ್ ರಿಪೇರಿ ಮಾಡಿಸಿ ಕೊಡಬೇಕು.
ಲಕ್ಷ್ಮಣ ಶಿರಬೂರ, ಶಾರದಾಳ ಗ್ರಾಮಸ್ಥ
ಪೈಪ್ ಲೈನ್ ಒಡೆದದ್ದು ನಮ್ಮ ಗಮನಕ್ಕೆ ಬಂದಿಲ್ಲ ಹಾಗೇನಾದರೂ ಒಡೆದಿದ್ದರೆ ಯಾರು ಒಡೆದಿದ್ದಾರೆ ಅವರಿಂದಲೇ ಅದನ್ನು ಸರಿಮಾಡಿಕೊಡಲು ಆದೇಶಿಸಲಾಗುವುದು ಒಂದು ವೇಳೆ ಮಾಡದೇ ನಿರ್ಲಕ್ಷ್ಯ ವಹಿಸಿದರೆ ಇಲಾಖೆಯಿಂದ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು.
ಆಕಾಶ್ ವಂದೆ, ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಾಗಲಕೋಟೆ
ಬೇಕಂತಲೇ ಪೈಪ್ ಲೈನ್ ಒಡೆದಿಲ್ಲ, ಸ್ಥಳಿಯ ವಾಟರ್ ಮ್ಯಾನಗೆ ತಿಳಿಸಲಾಗಿದೆ, ರಸ್ತೆ ಬದಿ ಮುಳ್ಳು ಕಂಟಿ ಕೀಳುವ ವೇಳೆ ಕಂಟಿಯ ಕೆಳ ಭಾಗದಲ್ಲಿದ್ದ ನೀರಿನ ಪೈಲ್ ಲೈನ್ ಒಡೆದಿದೆ, ಒಂದೆರಡು ದಿನದಲ್ಲಿ ಪೈಪಲೈನ್ ರಿಪೇರಿ ಮಾಡಿಸಿ ಕೊಡಲಾಗುವುದು.
ಅರ್ಜುನ್ ಹಿರೇಮಠ, ಗುತ್ತಿಗೆದಾರರ ಪರವಾಗಿ ಕೆಲಸಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್.ಕೆ.ಪಾಟೀಲ್
ಮಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ
Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.