ಕಂಠಿ ರಿಫಿಲಿಂಗ್‌ ಘಟಕವೇ ಆಪತ್ಭಾಂದವ!

ಜಿಲ್ಲೆಗೂ ಆಮ್ಲಜನಕ ಕೊರತೆ ಸಂಭವ ! | ನಿತ್ಯ 13 ಕೆ.ಎಲ್‌. ಅಗತ್ಯ| ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ ಆಕ್ಸಿಜನ್‌ ­

Team Udayavani, May 5, 2021, 7:58 PM IST

yjtytrytr

ವರದಿ: ಶ್ರೀಶೈಲ ಕೆ. ಬಿರಾದಾರ

ಬಾಗಲಕೋಟೆ: ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೆ ಜಿಲ್ಲೆಗೆ ಆಕ್ಸಿಜನ್‌ ಕೊರತೆ ಎದುರಾಗುವ ಭೀತಿಯೂ ಎದುರಾಗಿದೆ. ಜಿಲ್ಲೆಯ ಜಿಲ್ಲಾ ಕೋವಿಡ್‌ ಆಸ್ಪತ್ರೆಯೂ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ನಗರ ಹೊರ ವಲಯದ ಕಂಠಿ ರಿಫಿಲಿಂಗ್‌ ಘಟಕವೇ ಆಪತ್ಭಾಂದವ ಆಗಿದೆ.

ಹೌದು, ಜಿಲ್ಲೆಯಲ್ಲಿ ಆಕ್ಸಿಜನ್‌ ರಿಫಿಲಿಂಗ್‌ ಘಟಕ ಏಕೈಕವಾಗಿದೆ. ಕಂಠಿ ರಿಫಿಲಿಂಗ್‌ ಘಟಕ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಬೇರ್ಯಾವ ಘಟಕವೂ ಇಲ್ಲ. ನಗರದ ಬಾದಾಮಿ ರಸ್ತೆಯ ಶಿಗಿಕೇರಿ ಕ್ರಾಸ್‌ ಬಳಿ ಇರುವ ಕಂಠಿ ರಿಫಿಲಿಂಗ್‌ ಘಟಕದಿಂದ ನಿತ್ಯವೂ 400ರಿಂದ 450 ಸಿಲಿಂಡರ್‌ ಹಾಗೂ ಒಂದು ಕಂಟೇನರ್‌ ಲಿಕ್ವಿಟ್‌ ಜಿಲ್ಲೆಯಾದ್ಯಂತ ಪೂರೈಕೆಯಾಗುತ್ತಿದೆ. ಆದರೆ, ಈ ಆಕ್ಸಿಜನ್‌ ರಿಫಿಲಿಂಗ್‌ ಮಾಡಿ ಪೂರೈಸುವ ಕಂಠಿ ರಿಫಿಲಿಂಗ್‌ ಘಟಕಕ್ಕೇ ಈಗ ಮೂಲ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎನ್ನಲಾಗಿದೆ.

ನಿತ್ಯ 13 ಕೆ.ಎಲ್‌ ಅಗತ್ಯ: ಜಿಲ್ಲಾ ಕೋವಿಡ್‌ ಆಸ್ಪತ್ರೆ ಸೇರಿದಂತೆ ಒಟ್ಟು 38 ಆಸ್ಪತ್ರೆಗಳಿಗೆ ನಿತ್ಯ 13 ಕೆ.ಎಲ್‌ (ಕಿಲೋ ಲೀಟರ್‌) ಆಕ್ಸಿಜನ್‌ ಅಗತ್ಯವಿದೆ. ಆದರೆ, ಜಿಲ್ಲೆಗೆ 16 ಕೆ.ಎಲ್‌ ಬೇಡಿಕೆ ಇಟ್ಟಿದ್ದು, ಇಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್‌ ಪೂರೈಕೆ ಆಗುತ್ತಿಲ್ಲ. ಕಂಠಿ ರಿಫಿಲಿಂಗ್‌ ಘಟಕಕ್ಕೆ ಬಳ್ಳಾರಿಯ ಜಿಂದಾಲ್‌ ಕಂಪನಿಯಿಂದ ಆಕ್ಸಿಜನ್‌ ಪೂರೈಕೆಯಾಗುತ್ತಿದೆ. ಅಲ್ಲಿಯೂ ಆಮ್ಲಜನ ಕೊರತೆ ಇರುವುದರಿಂದ ಜಿಲ್ಲೆಗೆ ಒಂದು ದಿನ 6 ಕೆ.ಎಲ್‌ ಬಂದರೆ, ಮತ್ತೂಂದು ದಿನ 10 ಕೆ.ಎಲ್‌. ಬರುತ್ತಿದೆ. ಹೀಗಾಗಿ ಅದರಲ್ಲಿಯೇ ನಿತ್ಯ 13 ಕೆ.ಎಲ್‌ ಜಿಲ್ಲೆಗೆ ಪೂರೈಸಲು ಕಂಠಿ ರಿಫಿಲಿಂಗ್‌ ಘಟಕದ ಸರ್ಕಸ್‌ ಮಾಡುತ್ತಿದೆ.

ಜಿಲ್ಲೆಯಲ್ಲಿ 382 ಆಕ್ಸಿಜನ್‌ ಬೆಡ್‌ಗಳು: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟಾರೆ 1595 ಬೆಡ್‌ಗಳಿವೆ. ಅದರಲ್ಲಿ 108 ಐಸಿಯು (ವೆಂಟಿಲೇಟರ್‌ ಸಹಿತ), 103 ಎಚ್‌ಡಿಯು ಹಾಗೂ 171 ಐಸಿಯು ಯೂನಿಟ್‌ ಸೇರಿದಂತೆ 382 ಆಕ್ಸಿಜನ್‌ ಬೆಡ್‌ಗಳಿವೆ. ಸಧ್ಯ ಜಿಲ್ಲೆಯಲ್ಲಿ 34 ಖಾಸಗಿ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆ ನೀಡುತ್ತಿವೆ. ಅಲ್ಲದೇ 2481 ಆಕ್ಸಿವ್‌ ಕೇಸ್‌ಗಳಿದ್ದು, ಎಲ್ಲರೂ ಆಸ್ಪತ್ರೆಗೆ ದಾಖಲಾಗಿಲ್ಲ. 1990 ಜನರು ಹೋಂ ಐಸೋಲೇಶನ್‌ನಲ್ಲಿದ್ದು, ಉಳಿದವರು ಮಾತ್ರ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೇ ಸೋಂಕಿತರಿಗೇ ಸಧ್ಯ ಆಕ್ಸಿಜನ್‌ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲು ತೊಂದರೆ ಆಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿತರು ಹೆಚ್ಚಾದರೆ, ವೆಂಟಿಲೇಟರ್‌ ಮೂಲಕ ಚಿಕಿತ್ಸೆ ಕೊಡಬೇಕಾದರೆ ಆಕ್ಸಿಜನ್‌ ಪೂರೈಕೆಯ ವ್ಯವಸ್ಥೆ ಏನು ಎಂಬ ಭೀತಿ ಎದುರಾಗಿದೆ.

ಫಿಟ್ಟೆಡ್‌ ಆಂಬ್ಯುಲೆನ್ಸ್‌ ಇಲ್ಲವೇ ಇಲ್ಲ: ವೈದ್ಯಕೀಯ ಸೇವೆಯ ವಿಷಯದಲ್ಲಿ ಬಾಗಲಕೋಟೆಯನ್ನು 2ನೇ ಮೀರಜ್‌ ಎಂದು ಕರೆಯಲಾಗುತ್ತದೆ. ಕ್ಲಿನಿಕ್‌ ಗಳು ಸೇರಿದಂತೆ ಜಿಲ್ಲೆಯಲ್ಲಿ 817 ಆಸ್ಪತ್ರೆಗಳಿವೆ. ಬಾಗಲಕೋಟೆ ನಗರವೊಂದರಲ್ಲೇ 192 ಆಸ್ಪತ್ರೆಗಳಿದ್ದು, ಬಹುತೇಕ ಹೈಟೆಕ್‌ ಮತ್ತು ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಗಳಿವೆ. ಆದರೆ, ವೆಂಟಿಲೇಟರ್‌ ಫಿಟ್ಟೆಡ್‌ ಅಂಬ್ಯುಲೆನ್ಸ್‌ ಮಾತ್ರ ಜಿಲ್ಲೆಯಲ್ಲಿ ಒಂದೂ ಇಲ್ಲ ಎಂಬುದೇ ದೊಡ್ಡ ಕೊರಗು. ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಒಂದು ಮಾತ್ರ ಫಿಟ್ಟೆಡ್‌ ಅಂಬ್ಯುಲೆನ್ಸ ಇದ್ದು, ಅದು ಕಳೆದೆರಡು ದಿನಗಳಿಂದ ದುರಸ್ಥಿಗೆ ಹೋಗಿದೆ. ಹೀಗಾಗಿ ಸದ್ಯಕ್ಕೆ ಫಿಟ್ಟೆಡ್‌ ವೆಂಟಿಲೇಟರ್‌ ಇಲ್ಲ.

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.