ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ: Murugesh Nirani
ಜನತೆಯ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯ ; ಪ್ರತಿ ಹಳ್ಳಿ ದೇವಾಲಯ ಜೀರ್ಣೋದ್ಧಾರ
Team Udayavani, Apr 26, 2023, 8:08 AM IST
ಬಾಗಲಕೋಟೆ: ಅಭಿವೃದ್ಧಿಯ ಕಾರ್ಯಾಚರಣೆ ಬೀಳಗಿ ಮತಕ್ಷೇತ್ರದಲ್ಲಿ ಪ್ರತಿ ಹಳ್ಳಿಗಳಲ್ಲಿ ಸಮಾನಾಂತರವಾಗಿ
ನಡೆದಿದೆ. ವಿಶಾಲವಾದ ಮತಕ್ಷೇತ್ರದ ಕಟ್ಟಕಡೆಯ ಹಳ್ಳಿಗೂ ಜನತೆಯ ಅವಶ್ಯಕ ಮೂಲಭೂತ ಸೌಕರ್ಯಗಳು ತಲುಪಿವೆ. ಜನರ ಜೀವನ ಮಟ್ಟವನ್ನು ಉನ್ನತಿಕರಿಸುವಲ್ಲಿ ಹಾಗೂ ಉತ್ತಮ ದರ್ಜೆಯ ಸೌಕರ್ಯ ಕಲ್ಪಿಸುವ ನನ್ನ ಕನಸು ಸಾಕಾರಗೊಳ್ಳುತ್ತಿದೆ ಎಂದು ಮುರುಗೇಶ ನಿರಾಣಿ ಹೇಳಿದರು.
ಗಲಗಲಿ, ಮುಂಡಗನೂರು ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದ ಬಳಿಕ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ, ಪ್ರತಿ ಮನೆ ಹಾಗೂ ರೈತನ ಜಮೀನಿಗೆ ನೀರು,
ಎಲ್ಲರಿಗೂ ಗುಣಮಟ್ಟದ ವಿದ್ಯುತ್, ವೈದ್ಯಕೀಯ ಸೇವೆಗಳು, ಉತ್ತಮ ರಸ್ತೆಗಳು ಕಲ್ಪಿಸುವುದು ಪ್ರಥಮ ಆದ್ಯತೆಯಾಗಿತ್ತು. ಸರ್ವಜನಾಂಗಕ್ಕೂ ಸಮುದಾಯ ಭವನ, ದೇವಸ್ಥಾನಗಳ ಜೀರ್ಣೋದ್ಧಾರದ ಜತೆಗೆ
ಸೌಹಾರ್ದಯುತ ಬದುಕು ನಮ್ಮ ಜನರದ್ದಾಗಬೇಕು ಎಂಬುದು ನನ್ನ ಬಯಕೆಯಾಗಿತ್ತು. ಅದನ್ನು
ಸಾಕಾರಗೊಳಿಸಲು ಸರ್ಕಾರ ಹಾಗೂ ಜನತೆಯ ಸಹಕಾರ ದೊರೆತಿದೆ. ಇನ್ನಷ್ಟು ಕನಸುಗಳನ್ನು ನನ್ನ ಜನತೆಗಾಗಿ ನಾನು ಕಂಡಿದ್ದೇನೆ. ಹೀಗಾಗಿ ಈ ಬಾರಿ ನಿಮ್ಮ ಮತ ಬಿಜೆಪಿಗೆ ಮುಡಿಪಾಗಿರಲಿ ಎಂದು ಹೇಳಿದರು.
ಬೀಳಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸೂತ್ರ ಹರಿದ ಗಾಳಿಪಟದಂತಾಗಿದೆ. ಕಾಂಗ್ರೆಸ್ ಎಂಬ ಡಕ್ಕಲ್
ಬಸ್ಸಿನ ಸ್ಟೇರಿಂಗ್ ಮಾತ್ರ ಜೆ.ಟಿ. ಪಾಟೀಲರ ಕೈಯಲ್ಲಿದೆ. ಕ್ಲಚ್, ಗೇರ್, ಎಕ್ಸಿಲೇಟರ್ ಹಿಡಿದವರು ಬೇರೆಯೇ
ಇದ್ದಾರೆ. ಮುಂದೊಂದು ದಿನ ಎಕ್ಸಿಡೆಂಟ್ ಆಗುವ ಬಸ್ಸಿನಲ್ಲಿ ಯಾರೂ ಹತ್ತಲು ಬಯಸುವುದಿಲ್ಲ. ಎಂದು
ಮುರುಗೇಶ ನಿರಾಣಿ ಹೇಳಿದರು.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಡಬಲ್ ಇಂಜಿನ್ ಸರ್ಕಾರ ರಾಜ್ಯದ 25-30 ವರ್ಷಗಳ
ದೂರದೃಷ್ಟಿ ಇಟ್ಟುಕೊಂಡು ಹಲವು ಯೋಜನೆ ಜಾರಿಗೆ ತಂದಿದೆ. ಅಭಿವೃದ್ಧಿ ಕಾರ್ಯಗಳು ವೇಗದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಾಜ್ಯದ ಜನತೆ ಬಿಜೆಪಿಯ ಮೇಲೆ ಭರವಸೆ ಇಟ್ಟಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿ ಕಾರಕ್ಕೆ ಬರುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮೋಹನ್ ಜಾಧವ, ವ್ಹಿ. ಜಿ. ರೇವಡಿಗಾರ, ಎಂ. ಎಂ. ಶಂಭೋಜಿ, ಮಲ್ಲಪ್ಪ ಪೂಜೇರಿ,
ಹೊಳಬಸು ಬಾಳಶೆಟ್ಟಿ, ಲಕ್ಷ್ಮಣ ದೊಡಮನಿ, ಶ್ರೀಶೈಲ ಯಂಕಚಿಮಠ, ಸಿದ್ದಪ್ಪ ಕಡಪಟ್ಟಿ, ನಾಮದೇವ ಬಾಡಗಿ,
ಸುರೇಶ ಮೀಸಿ, ಅಶೋಕ ತಿಪ್ಪರೆಡ್ಡಿ, ಬಸವರಾಜ ಬಿರಾದರ, ರಾಯಪ್ಪ ಗಡಾದ, ಹರೀಶ ದೇಶಪಾಂಡೆ,
ಅರವಿಂದ ನರಗುಂದ ಉಪಸ್ಥಿತರಿದ್ದರು.
ಅಣ್ಣನ ಪರ ತಮ್ಮ ಬಿರುಸಿನ ಪ್ರಚಾರ: ಬಾದಾಮಿ ತಾಲೂಕಿನ ಒಣಬೆಸಾಯ ಭೂಮಿಗಾಗಿ ಮುರುಗೇಶ ನಿರಾಣಿಯವರು ಸಾಲು-ಸಾಲು ಏತ ನೀರಾವರಿ ಯೋಜನೆಗಳನ್ನು ತಂದು ಬರದ ನಾಡನ್ನು ಹಸಿರಾಗಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅನುಮೋದನೆಗೊಂಡ ಎಲ್ಲ ಯೋಜನೆಗಳು ಪುರ್ಣಗೊಂಡರೆ ಬಾದಾಮಿ ತಾಲೂಕಿನ ರೈತರು ಸಹ ಆರ್ಥಿಕವಾಗಿ ಹಾಗೂ ಔದ್ಯೋಗಿಕವಾಗಿ ಹೆಚ್ಚು ಸದೃಢರಾಗುತ್ತಾರೆ ಎಂದು ಸಂಗಮೇಶ ನಿರಾಣಿ
ಹೇಳಿದರು. ಸಹೋದರ ಹಾಗೂ ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರ ಶಿಪ್ಪರಮಟ್ಟಿ, ಮಾಳಗಿ, ಮೊಹನಪುರ, ಕೈನಕಟ್ಟಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಶಿಪ್ಪರಮಟ್ಟಿ, ಮಾಳಗಿ, ಮೊಹನಪುರ ಗ್ರಾಮದ ಸಂಗಮೇಶ ಗುತ್ತನ್ನವರ, ಬಿರಪ್ಪ ಜುಡಸಲಮನಿ, ಸಿದ್ದಪ್ಪ ಪಚಾತ, ವೆಂಕಪ್ಪ ಪಚಾತ, ಯಮನಪ್ಪ ಪಚಾತ, ಕರಿಯಪ್ಪ, ಪಚಾತ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ರಾಮನಗೌಡ ಪಾಟೀಲ, ನಿಂಗನಗೌಡ ಹೊಸಮನಿ, ಅಶೋಕ ನಾಯ್ಕ, ಬಸವರಾಜ ಕೆರಕಲಮಟ್ಟಿ, ಮಹಾದೇವ ಕುಂದರಗಿ, ಶೇಖರ ಕುಂದರಗಿ, ಚುಳಚಪ್ಪ ನಾಯ್ಕ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.