ಮೋದಿ ಭದ್ರತೆಗೆ ಮುಧೋಳ ಶ್ವಾನ: ಸೇನೆ-ಎನ್‌ಎಸ್‌ಜಿ ಪಡೆಗೂ ಆಯ್ಕೆಯಾಗಿದ್ದ ವಿಶಿಷ್ಟ ತಳಿ
; ಮುಧೋಳ ನಾಯಿಗೆ ಮತ್ತೊಂದು ಗರಿ
Team Udayavani, Aug 18, 2022, 7:10 AM IST
ಬಾಗಲಕೋಟೆ: ತನ್ನ ಅತ್ಯುತ್ತಮ ಮೈಮಾಟ, ಚಾಣಾಕ್ಷತನ, ವೇಗವಾಗಿ ಓಡುವ ಛಾತಿಯಂಥ ಹಲವು ವಿಶೇಷತೆ ಹೊಂದಿರುವ ಮುಧೋಳ ಶ್ವಾನ ಇದೀಗ ಮತ್ತೊಂದು ಗರಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತೀಯ ಸೇನೆಯ ಗಡಿಯಲ್ಲಿ ಉಗ್ರರ ನುಸುಳುವಿಕೆ ಪತ್ತೆಗಾಗಿ ಆಯ್ಕೆಯಾಗಿದ್ದ ವಿಶಿಷ್ಟ ತಳಿಯ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಭದ್ರತೆಗೂ ಆಯ್ಕೆಯಾಗಿದೆ.
ಮುಧೋಳ ತಾಲೂಕಿನ ತಿಮ್ಮಾಪುರದ ಮುಧೋಳ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ|ಸುಶಾಂತ ಹಂಡಗೆ ಈ ವಿಷಯ ದೃಢಪಡಿಸಿದ್ದು, ಏ.25ರಂದು ಮುಧೋಳ ತಳಿಯ ಎರಡು ತಿಂಗಳ ವಯಸ್ಸಿನ ಎರಡು ಶ್ವಾನ ಮರಿಗಳನ್ನು ಕೇಂದ್ರದ ಎನ್‌ಎಸ್‌ಜಿ ಪಡೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷತೆ ಏನು?:
ಭಾರತದ ದೇಶೀಯ ತಳಿ ಹಾಗೂ ವಿದೇಶಿ ತಳಿಯ ಶ್ವಾನಗಳಿಗೆ ಹೋಲಿಸಿದರೆ ಮುಧೋಳ ಶ್ವಾನ ಹಲವು ವಿಶೇಷತೆ ಹೊಂದಿದೆ. ಅತ್ಯಂತ ತೆಳುವಾದ ಮೈಕಟ್ಟು (ಬೇರೆ ಶ್ವಾನಕ್ಕೆ ಹೋಲಿಸಿದರೆ ತೂಕದಲ್ಲಿ ಕಡಿಮೆ), ಗಂಟೆಗೆ 50 ಕಿಮೀ ಓಡಬಲ್ಲ, ಮೂರು ಕಿಮೀ ದೂರ (ಬೇರೆ ನಾಯಿಗಳು 1 ಕಿಮೀ ಮಾತ್ರ ಸಾಮರ್ಥ್ಯ ಹೊಂದಿವೆ)ದಿಂದಲೇ ವಾಸನೆ ಗುರುತಿಸಬಲ್ಲ ಸಾಮರ್ಥ್ಯ ಹೊಂದಿದೆ.
ಬೇರೆ ಶ್ವಾನಗಳು 10ರಿಂದ 12 ವರ್ಷ ಆಯುಷ್ಯ ಹೊಂದಿದ್ದರೆ, ಮುಧೋಳ ಶ್ವಾನ 12ರಿಂದ 15 ವರ್ಷ ಆಯುಷ್ಯ ಹೊಂದಿದೆ. ಅತ್ಯಂತ ವಿರಳ ಹಾಗೂ ವಿಶೇಷವಾದ ಈ ಮೂಧೋಳ ಶ್ವಾನವನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಇಂತಹ ವಿಶಿಷ್ಟ ಶ್ವಾನ ಸಂತತಿ ಉಳಿಸಿ-ಬೆಳೆಸುವ ಉದ್ದೇಶದಿಂದಲೇ 2007-08ರಲ್ಲಿ ಮುಧೋಳದಲ್ಲಿ ಶ್ವಾನ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ.
ಪ್ರಧಾನಿ ಮೋದಿ 2020ರಲ್ಲಿ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಈ ಮುಧೋಳ ಶ್ವಾನಗಳ ಬಗ್ಗೆ ಪ್ರಸ್ತಾಪಿಸಿದ್ದರು. ಈ ಹಿಂದೆ ಎನ್‌ಎಸ್‌ಜಿ ಪಡೆ, ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಮುಧೋಳ ಶ್ವಾನ ಇದೀಗ ಪ್ರಧಾನಿ ಮೋದಿ ಭದ್ರತೆಗೂ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಮುಧೋಳ ಶ್ವಾನ ಸಂಶೋಧನಾ ಕೇಂದ್ರ ಸ್ಥಾಪನೆಗೆ ವಿಶೇಷ ಕಾಳಜಿ ವಹಿಸಿರುವ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.